ಸೋಮವಾರಪೇಟೆ, ಜೂ. ೨೭: ತಾಲೂಕಿನ ತೋಳೂರು-ಶೆಟ್ಟಳ್ಳಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ರಚನೆ ಸಂಬAಧ ಮತದಾನ ಪ್ರಕ್ರಿಯೆ ನಡೆಯಿತು.
ಎಲ್ಲ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತವನ್ನು ಚಲಾಯಿಸಿದರು. ಮತದಾನಕ್ಕಾಗಿ ಇವಿಎಂ ಯಂತ್ರದ ಮಾದರಿಯನ್ನು ಅನುಸರಿಸಲಾಗಿತ್ತು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ನೈಜ ಚುನಾವಣೆಯ ಅನುಭವವನ್ನು ಪಡೆದರು.
ಈ ಸಂದರ್ಭ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಶಬರಿ ಗಿರೀಶ್ ಮತ್ತು ಶಿಕ್ಷಕರು ಹಾಜರಿದ್ದು, ಕಾರ್ಯಕ್ರಮ ನಿರ್ವಹಿಸಿದರು.