ಮಡಿಕೇರಿ, ಜೂ. ೨೭: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಪೂರಕ ಶೈಕ್ಷಣಿಕ ಸಂಪನ್ಮೂಲಗಳು ಹಾಗೂ ಶಾಲೆಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಳೆದ ೫-೬ ವರ್ಷಗಳಿಂದ ಕೊಡಗಿನ ವಿವಿಧ ಕಡೆಗಳಲ್ಲಿರುವ ಶಾಲೆಗಳಿಗೆ ಒದಗಿಸುತ್ತಾ ಬರುತ್ತಿರುವ ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ ವತಿಯಿಂದ ವಿತರಿಸಲಾಯಿತು.
ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳು, ಮಳೆಗಾಲಕ್ಕೆ ಉಪಯುಕ್ತವಾದ ಕೊಡೆಗಳು, ಕಲಿಕೋಪಕರಣಗಳು ಸೇರಿದಂತೆ ಶಾಲೆಯ ಕಚೇರಿ ಬಳಕೆಗೆ ತೀರಾ ಅವಶ್ಯಕವಾಗಿದ್ದ ಪ್ರಿಂಟರ್ನ್ನು ಉದಾರ ಕೊಡುಗೆಯಾಗಿ ನೀಡಲಾಯಿತು. ಇತ್ತೀಚೆಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲೆ, ಕ್ರೀಡೆಗಳಲ್ಲಿ ಆಕರ್ಷಕ ಕಲಿಕಾ ಚಟು ವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ಸಾಹ ತುಂಬಿದ ಸ್ವಯಂ ಸೇವಕರ ತಂಡವು ಶಾಲೆಗೆ ನಿರಂತರವಾಗಿ ವಿದ್ಯಾ ರ್ಥಿಗಳು ಹಾಜರಾಗಿ ಶೈಕ್ಷಣಿಕ ಸಾಧ ನೆಯೊಂದಿಗೆ ಶಾರೀರಿಕ ವ್ಯಾಯಾಮಕ್ಕೆ ಒತ್ತು ಕೊಟ್ಟು, ಮಾನಸಿಕವಾಗಿ ಸದೃಢರಾಗುವಂತೆ ಸಂವಾದ ಕಾರ್ಯ ಕ್ರಮದಲ್ಲಿ ಸಲಹೆ ನೀಡಿದರು. ಜಾಗೃತಿ ಮತ್ತು ಸಿಸ್ಕೋ ಸಂಸ್ಥೆಯ ೬೦ ಸ್ವಯಂ ಸೇವಕರನ್ನೊಳಗೊಂಡ ದಾನಿಗಳ ತಂಡ ಶಾಲೆಗೆ ಆಗಮಿಸಿ ಸಾಮಾಜಿಕ ಸೇವೆಯನ್ನು ಕೈಗೊಂಡರು.
ಕಾರ್ಯಕ್ರಮದ ಪ್ರಮುಖರಾದ ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಬಾನಂಡ ಸಂಪತ್, ಪವನ್ ನೆಲ್ಸನ್ ಡಿಸೋಜ, ಪ್ರಶಾಂತ್, ಜಾಗೃತಿ ಟ್ರಸ್ಟ್ನ ಆಡಳಿತ ಅಧಿಕಾರಿ ಕಣ್ಣನ್, ಖಜಾಂಚಿಗಳಾದ ಕೊಂಡಿAಜಮ್ಮAಡ ಶರಣು ಮತ್ತು ನೋಯೆಲ್ರವರು ಜಾಗೃತಿ ಟ್ರಸ್ಟ್ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕರಾದ ರೇಣು ಅಪ್ಪಚ್ಚು ಅವರ ಮಾರ್ಗದರ್ಶನದಲ್ಲಿ ಶಾಲಾಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಳುಗುಂದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅರುಣ್ ಆನ್ಸಿ ಡಿಸೋಜ, ಶಾಲಾ ಶಿಕ್ಷಕಿ ಅನಿತ ಎಸ್.ಡಿ., ಸಾವಿತ್ರಿ ಹೆಚ್.ಜಿ. ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.