ಚೆಯ್ಯಂಡಾಣೆ, ಜೂ. ೨೭: ಕೊಟ್ಟಮುಡಿಯ ಮರ್ಕಜುಲ್ ಹಿದಾಯ ಸಭಾಂಗಣದಲ್ಲಿ ನಡೆದ ಎಸ್.ವೈ.ಎಸ್. ವಾರ್ಷಿಕ ಕೌನ್ಸಿಲ್‌ನಲ್ಲಿ ಕೊಡಗು ಜಿಲ್ಲಾ ಸಮಿತಿಗೆ ನೂತನ ಕಾರ್ಯನಿರ್ವಾಹಕ ಸದಸ್ಯರಾಗಿ ಅಶ್ರಫ್ ಕಡಂಗ, ಹಂಝ ಮದನಿ ಗುಹ್ಯ, ಮಹಮ್ಮದ್ ಅಲಿ ಸಖಾಫಿ ಕಲ್ಕಂದೂರ್, ಝಬೈರ್ ಕೂಡಿಗೆ, ಬಷೀರ್ ಕೊಟ್ಟಮುಡಿ, ಫೈಝಲ್ ಜೌಹರಿ ಕುಂಜಿಲ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಎಸ್.ವೈ.ಎಸ್. ಕರ್ನಾಟಕ ರಾಜ್ಯ ಕಲ್ಚರಲ್ ಕಾರ್ಯದರ್ಶಿ ಸಯ್ಯದ್ ಅಮೀಮ್ ತಂಗಳ್, ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ತಂಗಳ್, ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಕೋಶಾಧಿಕಾರಿ ಅಬ್ದುಲ್ಲಾ, ಇಸ್ಮಾಯಿಲ್ ಸಖಾಫಿ, ಯಾಕೂಬ್ ಮಾಸ್ಟರ್, ಮತಿತ್ತರು ಉಪಸ್ಥಿತರಿದ್ದರು.