ಸಿದ್ದಾಪುರ, ಜೂ. ೨೬: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಕಾವೇರಿ ನದಿಯಲ್ಲಿ ಮತ್ತಷ್ಟು ನೀರಿನ ಪ್ರಮಾಣ ಏರಿಕೆಯಾಗುವ ಹಿನ್ನೆಲೆ ಕಂದಾಯ ಇಲಾಖೆ ವತಿಯಿಂದ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜುಲೈ ಒಂದರಿAದ ನೋಟಿಸ್ ಜಾರಿ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ. ವೀರಾಜಪೇಟೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಕೊಂಡAಗೇರಿ ಭಾಗದಲ್ಲಿ ಈಗಾಗಲೇ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಹಾಗೂ ಅಮ್ಮತಿ ಹೋಬಳಿ ಕಂದಾಯ ಪರಿವೀಕ್ಷಕ ಬಿ.ಎಸ್. ಅನಿಲ್ ಕುಮಾರ್ ಅವರು ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನದಿ ತೀರದ ನಿವಾಸಿಗಳಿಗೆ ಪ್ರವಾಹ ಸಂದರ್ಭದಲ್ಲಿ ಆಶ್ರಯ ಪಡೆಯಲು ಸಭಾಂಗಣಗಳನ್ನು ಹಾಗೂ ಶಾಲೆಗಳನ್ನು ಗುರುತಿಸಿದ್ದಾರೆ. ಗಾಳಿ ಮಳೆಯಿಂದಾಗಿ ನೆಲ್ಲಿಹುದಿಕೇರಿ, ಬೆಟ್ಟದ ಕಾಡು ಭಾಗದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ನಂತರ ನಿಗಮದ ಸಿಬ್ಬಂದಿ ಮರಗಳನ್ನು ಕಡಿದು ತೆರವುಗೊಳಿಸಿದರು. - ವರದಿ ವಾಸು