ಸೋಮವಾರಪೇಟೆ, ಜೂ. ೨೬: ಕಲ್ಲು ಕೋರೆಗಳಿಂದ ಜಲ್ಲಿ, ಎಂ.ಸ್ಯಾAಡ್ನ್ನು ಸಾಗಿಸುವ ಲಾರಿ, ಟಿಪ್ಪರ್, ಟ್ರಾö್ಯಕ್ಟರ್ ಸೇರಿದಂತೆ ಇನ್ನಿತರ ವಾಹನಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಕಂಟಕ ಎದುರಾಗಿದೆ.
ಬಾಣಾವರ, ಯಲಕನೂರು ಸೇರಿದಂತೆ ಇತರೆಡೆಗಳಲ್ಲಿರುವ ಕಲ್ಲುಕೋರೆ, ಕ್ರಷರ್ಗಳಿಂದ ಪಟ್ಟಣಕ್ಕೆ ಎಂ.ಸ್ಯಾAಡ್, ಜಲ್ಲಿ ಕಲ್ಲುಗಳನ್ನು ಸಾಗಾಟಗೊಳಿಸುವ ವಾಹನಗಳು ನಿಯಮಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುತ್ತಿರುವುದು ಒಂದೆಡೆಯಾದರೆ, ಲೋಡ್ ಸಾಗಿಸುವ ಸಂದರ್ಭ ಮೇಲೆ ಟಾರ್ಪಲ್ಗಳಿಂದ ಮುಚ್ಚದೇ ಹಾಗೆಯೇ ತೆರಳುತ್ತಿರು ವುದರಿಂದ ಜಲ್ಲಿ, ಎಂ.ಸ್ಯಾAಡ್ ರಸ್ತೆಯಲ್ಲಿ ಚೆಲ್ಲಿ ಇತರ ವಾಹನಗಳ ಸಂಚಾರಕ್ಕೆ ಸಂಚಕಾರ ತರುತ್ತಿದೆ.
ಪಟ್ಟಣದಿಂದ ಬಾಣಾವರಕ್ಕೆ ತೆರಳುವ ರಸ್ತೆಯ ತಿರುವುಗಳಲ್ಲಿ ಜಲ್ಲಿ, ಎಂ.ಸ್ಯಾAಡ್ ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು, ಗಾಯಾಳುಗಳಾಗುತ್ತಿರುವುದು ಮಾಮೂಲಾಗಿದೆ. ಪಟ್ಟಣದಿಂದ ಮಸಗೋಡು ರಸ್ತೆಯಲ್ಲಿರುವ ಬಿಎಸ್ ಎನ್ಎಲ್ ಟವರ್ ಬಳಿಯ ಲ್ಲಂತೂ ಅವಘಡಗಳು ಸಾಮಾನ್ಯ ವೆನಿಸಿವೆ.
ಈ ಬಗ್ಗೆ ಸಂಬAಧಪಟ್ಟ ವಾಹನ ಗಳ ಮಾಲೀಕರು, ಚಾಲಕರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲು, ಮರಳಿನಂತಹ ಎಂ.ಸ್ಯಾAಡ್ ಹರಡಿ ಕೊಂಡಿರುವುದರಿAದ ಬೈಕ್ಗಳಲ್ಲಿ ತೆರಳುವ ಮಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ತೆರಳಬೇಕಿದೆ. ತಿರುವಿನಲ್ಲಿಯೇ ಇಂತಹ ಅಪಾಯ ಎದುರಾಗುತ್ತಿರುವುದರಿಂದ ಹಲವಷ್ಟು ಮಂದಿ ಬಿದ್ದು, ಎದ್ದು ಟಿಪ್ಪರ್-ಟ್ರಾö್ಯಕ್ಟರ್ ವಾಹನಗಳ ಚಾಲಕರಿಗೆ ಹಿಡಿ ಶಾಪ ಹಾಕಿ ಹೋಗುತ್ತಿದ್ದಾರೆ.
ಈ ಬಗ್ಗೆ ಸಂಬAಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಕ್ರಷರ್ ಮತು ಕಲ್ಲುಕೋರೆಗಳಿಂದ ನಿಗದಿತ ಪ್ರಮಾಣದಲ್ಲಿಯೇ ಜಲ್ಲಿ, ಎಂ.ಸ್ಯಾAಡ್ ಸಾಗಾಟವಾಗುತ್ತಿ ದೆಯೇ? ಸಾಗಾಟ ಮಾಡುವ ಸಂದರ್ಭ ಟಾರ್ಪಲ್ ಕಟ್ಟಿದ್ದಾರೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ.
ಪೊಲೀಸ್ ಕ್ರಮ: ಬೇಕಾಬಿಟ್ಟಿ ಎಂ.ಸ್ಯಾAಡ್, ಜಲ್ಲಿ ಕಲ್ಲುಗಳನ್ನು ಸಾಗಿಸುತ್ತಿರುವುದು, ಅಗತ್ಯಕ್ಕಿಂತ ಹೆಚ್ಚಿನ ಸಾಗಾಟ, ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ವಾಹನಗಳಲ್ಲಿ ಜಲ್ಲಿ, ಎಂ.ಸ್ಯಾAಡ್ ಸಾಗಿಸುತ್ತಿದ್ದರೆ ಪೊಲೀಸ್ ಇಲಾಖೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಸಂಬAಧಪಟ್ಟ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ರಕರಣಗಳು ನಡೆದರೆ ಕ್ರಮ ಜರುಗಿಸಲಾಗುತ್ತದೆ ಎಂದು ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.