ವೀರಾಜಪೇಟೆ, ಜೂ. ೨೬: ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಮಹಾಸಭೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಕ್ಷೀಣಿಸುತ್ತಿರುವ ಕೊಡವ ಪದ್ಧತಿ, ಶಾಸ್ತç ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಾರ ನಡೆಸಲಾಗುವುದು. ಅಂತರ ಕೇರಿಗಳ ನಡುವೆ ವಿವಿಧ ಶಟಲ್ ಪಂದ್ಯಾಟವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಆಟೋಟ ಪೈಪೋಟಿಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ.
ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಮುಂದಿನ ಪೀಳಿಗೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಕೊಡವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಕೊಡವ ಸಾಂಸ್ಕೃತಿಕ ಮೇಳವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಬಾಚಿರ ಜಗದೀಶ್ ಹಿಂದಿನ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮುಕ್ಕಾಟಿರ ರೋಝಿ ಅಚ್ಚಪ್ಪ, ಕಾರ್ಯದರ್ಶಿ ಬಾಚಿರ ಜಗದೀಶ್, ಖಜಾಂಚಿ ನೆಲ್ಲಮಕ್ಕಡ ಮುತ್ತಣ್ಣ, ಸಲಹೆಗಾರ ಮಾದಂಡ ಎಸ್ ಪೂವಯ್ಯ, ನಿರ್ದೇಶಕರುಗಳಾದ ಅಮ್ಮಣಿಚಂಡ ರವಿ ಉತ್ತಪ್ಪ, ಪಟ್ಟಡ ಮನು ರಾಮಚಂದ್ರ, ಮೇರಿಯಂಡ ಅರಸು ಅಚ್ಚಮ್ಮ, ಅಮ್ಮಣಿಚಂಡ ರತ್ನ ಸುಬ್ರಮಣಿ, ಚೇಂದAಡ ವಸಂತ್, ನೆಲ್ಲಚಂಡ ಭೀಮಯ್ಯ, ಮಾದೆಯಂಡ ಹ್ಯಾರಿ ಅಚ್ಚಯ್ಯ, ವಾಂಚಿರ ನಾಣಯ್ಯ, ಚೆನಿಯಪಂಡ ಸನ್ನಿ, ಚೇಂದAಡ ಗೀತಾ ಶಿವಕುಮಾರ್ ಉಪಸ್ಥಿತರಿದ್ದರು.