ಮಡಿಕೇರಿ, ಜೂ. ೨೬: ಚಟ್ಟದಲ್ಲಿ ತನ್ನ ಪ್ರತಿಕೃತಿ ದಹಿಸಿ ಬಿಜೆಪಿಯವರು ವೀರಾಜಪೇಟೆಯಲ್ಲಿ ಮಾಡಿದ ಪ್ರತಿಭಟನೆಗೆ ಸಾಕಷ್ಟು ವಿರೋಧಗಳು ವ್ಯಕ್ತಗೊಂಡಿದ್ದು, ಕೊಡಗಿನ ಜನ ದ್ವೇಷ ರಾಜಕಾರಣವನ್ನು ಧಿಕ್ಕರಿಸಿದ್ದಾರೆ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ತಿರುಗೇಟು ನೀಡಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂಧನ ಬೆಲೆ ಏರಿಕೆ ವಿರುದ್ಧ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಿದೆ. ಕೊಡಗಿನ ವಿವಿಧೆಡೆಯೂ ಪ್ರತಿಭಟನೆ ನಡೆದಿದೆ. ಆದರೆ, ಎಲ್ಲಿಯೂ ಕೂಡ ಚಟ್ಟ ಕಟ್ಟಿ ಪ್ರತಿಕೃತಿ ದಹಿಸುವಂತಹ ಹೀನ ಕೃತ್ಯ ನಡೆದಿಲ್ಲ. ಆದರೆ, ವೀರಾಜಪೇಟೆಯಲ್ಲಿ ಮಾತ್ರ ಈ ರೀತಿ ಮಾಡಲಾಗಿದೆ. ಚಟ್ಟ ಕಟ್ಟಿ ಪ್ರತಿಕೃತಿ ದಹಿಸುವುದನ್ನು ಕೊಡವ ಸಂಸ್ಕೃತಿ ಒಪ್ಪುವುದಿಲ್ಲ. ಆದ್ದರಿಂದ ಕೊಡವ ಸಮಾಜಗಳು ಇದನ್ನು ವಿರೋಧಿಸಿವೆ.
(ಮೊದಲ ಪುಟದಿಂದ) ಕೊಡವ ಸಮಾಜಗಳು ಮಾತ್ರವಲ್ಲ ಎಲ್ಲಾ ವರ್ಗದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊನ್ನಣ್ಣ ಹೇಳಿದರು. ತಾನು ಈ ವಿಚಾರದಲ್ಲಿ ಯಾರೊಬ್ಬರಿಗೂ ಕರೆ ಮಾಡಿ ಇದನ್ನು ವಿರೋಧಿಸಿ ಹೇಳಿಕೆ ನೀಡಿ ಎಂದು ಹೇಳಿಲ್ಲ. ಒಂದು ವೇಳೆ ಹೇಳಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಸವಾಲೆಸೆದ ಪೊನ್ನಣ್ಣ, ಬಿಜೆಪಿಯವರು ತನ್ನ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದರು. ತಾನು ಎಲ್ಲಾ ವರ್ಗದವರೊಂದಿಗೆ ಸಮಾನತೆಯಿಂದ ಮುನ್ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ತನಗೆ ಜನ ಬೆಂಬಲ ವ್ಯಕ್ತಗೊಂಡಿದೆ. ಈ ಜನಾಭಿಪ್ರಾಯವನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕೆಂದು ಶಾಸಕರು ನುಡಿದರು. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವುದು ಸ್ವಾಗತಾರ್ಹ. ಆದರೆ, ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಆತನನ್ನು ಮುಗಿಸಬೇಕೆನ್ನುವ ಪ್ರಯತ್ನಕ್ಕೆ ಜಿಲ್ಲೆಯ ಜನ ತಕ್ಕ ಉತ್ತರ ನೀಡಿದ್ದಾರೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳಿಗೆ ಧಕ್ಕೆ ಆಗುವಂತೆ ವರ್ತಿಸುವುದನ್ನು ನಿಲ್ಲಿಸಬೇಕೆಂದು ಪೊನ್ನಣ್ಣ ಒತ್ತಾಯಿಸಿದರು.
ಹೊಸ ನಾಯಕತ್ವ ಬರಬಾರದೆ?
ಕೊಡಗು ಜಿಲ್ಲೆ ಬಿಜೆಪಿಯ ಕೆಲವರ ಕೈಯಲ್ಲಿಯೆ ಇರಬೇಕೆ? ಹೊಸ ನಾಯಕತ್ವ ಬರಬಾರದೆ ಎಂದು ಪ್ರಶ್ನಿಸಿದ ಪೊನ್ನಣ್ಣ, ತಾನು ಹಿಂಬಾಗಿಲಿನಿAದ ಅಧಿಕಾರಕ್ಕೆ ಬಂದವನಲ್ಲ, ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಜನಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ದ್ವೇಷ ರಾಜಕಾರಣ ಮಾಡಲಾರೆ
ದ್ವೇಷ ರಾಜಕಾರಣ ಮಾಡುವ ಉದ್ದೇಶ ತನಗಿಲ್ಲ; ಮತ್ತೊಬ್ಬರನ್ನು ತುಳಿದು ಬೆಳೆಯುವ ಸಿದ್ಧಾಂತ ನನ್ನದಲ್ಲ, ಒಂದು ವೇಳೆ ಆ ಉದ್ದೇಶ ತನಗಿದ್ದಿದ್ದರೆ ಜಿಲ್ಲೆಯಲ್ಲಿ ನಡೆದಿರುವ ಅರಣ್ಯ ಭೂ ಕಬಳಿಕೆ ಮತ್ತಿತರ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡಿ ಅಧಿಕಾರಿಗಳಿಗೆ ಒತ್ತಡ ಹೇರಿ ದ್ವೇಷ ಸಾಧನೆ ಮಾಡಬಹುದಿತ್ತು. ಆದರೆ, ಆ ರೀತಿ ಮಾಡುತ್ತಿಲ್ಲ, ಕಾನೂನಾತ್ಮಕವಾಗಿ ಏನಾಗಬೇಕೋ ಅದೇ ಆಗಲಿ ಎಂಬ ನಿಲುವು ತಾಳಿದ್ದೇನೆ ಎಂದು ಪೊನ್ನಣ್ಣ ನುಡಿದರು.
ಉಪದೇಶ ಮಾಡಬೇಡಿ
ಬಿಜೆಪಿಯವರ ಇತಿಹಾಸ ಏನೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಆದ್ದರಿಂದ ನನಗೆ ನೀವು ಉಪದೇಶ ಮಾಡಲು ಬರಬೇಡಿ. ಹಿತವಚನಗಳನ್ನು ಹೇಲಿ ತನ್ನ ತಪ್ಪಿದ್ದರೆ ಅದನ್ನು ತಿದ್ದಿಕೊಳ್ಳಲು ತಯಾರಿದ್ದೇನೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷಿಸಿದರೆ; ಜನರ ನೋವಿಗೆ ಸ್ಪಂದಿಸದಿದ್ದರೆ ಪ್ರಶ್ನೆ ಮಾಡಿ ತಾನು ಉತ್ತರಿಸುತ್ತೇನೆ ಎಂದು ಶಾಸಕರು ಹೇಳಿದರು.
ದಂಧೆಗೆ ಅನುಮತಿ ನೀಡಿಲ್ಲ
ಕೊಡಗಿನಲ್ಲಿ ಈ ಹಿಂದಿನಿAದ ರಿಕ್ರಿಯೇಷನ್ ಕ್ಲಬ್, ಪ್ಲಾಂಟರ್ಸ್ ಕ್ಲಬ್ಗಳು ನಡೆದುಕೊಂಡು ಬಂದಿವೆ. ಇಂತಹ ಕ್ಲಬ್ಗಳಿಗೆ ತೊಂದರೆ ಕೊಡಬಾರದು. ಆದರೆ, ಇಸ್ಪೀಟ್ ದಂಧೆ ನಡೆಸುವ ಯಾವುದೇ ಕ್ಲಬ್ಗಳಿಗೆ ಅನುಮತಿ ನೀಡಿಲ್ಲ. ಇಂತಹ ದಂಧೆ ನಡೆಸುವ ಕ್ಲಬ್ಗಳಿದ್ದರೆ ತನ್ನ ಗಮನಕ್ಕೆ ತರಲಿ. ಅಂತವುಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಕರಣ ತಿರುಚಿ ಪ್ರತಿಭಟನೆ
ದಕ್ಷಿಣ ಕೊಡಗಿನ ವಿವಿಧೆಡೆ ಜೀತ ಪದ್ಧತಿ ಸಂಬAಧ ದಾಖಲಾದ ಪ್ರಕರಣಗಳಲ್ಲಿನ ಮಾಲೀಕರು ತನ್ನ ಬಳಿಗೆ ಬಂದಿದ್ದರು. ತಾನು ಅವರುಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಅವರುಗಳು ತನ್ನನ್ನು ಸನ್ಮಾನಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಲು ತಾನೇ ಕಾರಣ ಎಂದು ಪ್ರಕರಣವನ್ನು ತಿರುಚಿ ತನ್ನ ವಿರುದ್ಧ ಪ್ರತಿಭಟನೆ ಮಾಡಲಾಯಿತು. ತಾನು ಸದಾ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ. ನ್ಯಾಯಪರವಾಗಿ ಹೋರಾಡಿದ್ದೇನೆ, ಮುಂದೆಯೂ ಹೋರಾಡುತ್ತೇನೆ ಎಂದು ಪೊನ್ನಣ್ಣ ನುಡಿದರು.
ಮೈತ್ರಿ ಇಲ್ಲದಿದ್ದರೆ ೨೦ ಸೀಟ್
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕ ಸ್ಥಾನ ಗಳಿಸಿದ್ದರೂ ಮತಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. ಮೈತ್ರಿ ಇಲ್ಲದಿದ್ದರೆ ೨೦ ಸ್ಥಾನಗಳು ಕಾಂಗ್ರೆಸ್ಗೆ ಲಭ್ಯವಾಗುತ್ತಿತ್ತು ಎಂದ ಪೊನ್ನಣ್ಣ, ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ. ಸರ್ಕಾರ ನೀತಿಯನ್ನು ಅರ್ಥೈಸಿಕೊಳ್ಳದವರು ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದರು. ಜಿಎಸ್ಟಿ ಪಾಲು ನೀಡುವಂತೆ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ಆ ಬಗ್ಗೆ ಸಂಸತ್ನಲ್ಲಿ ಬಿಜೆಪಿಯವರು ಮಾತನಾಡಲಿಲ್ಲ. ಬರ ಅನುದಾನ ಸಂಬAಧ ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿತಾದರೂ, ನಾವು ಕೇಳಿದಷ್ಟು ಅನುದಾನ ನೀಡಲಿಲ್ಲ ಎಂದು ಪೊನ್ನಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬಂದ್ ಇಲ್ಲ
ಕೊಡಗು - ಮೈಸೂರು ಜಿಲ್ಲೆ ಗಡಿಭಾಗವಾದ ಆನೆ ಚೌಕೂರು ರಸ್ತೆ ಸಂಚಾರ ಬಂದ್ ವಿಚಾರದಲ್ಲಿ ತಲೆದೋರಿರುವ ಗೊಂದಲಗಳಿಗೆ ಉತ್ತರಿಸಿದ ಪೊನ್ನಣ್ಣ, ಈ ರೀತಿಯ ಯಾವುದೇ ಪ್ರಸ್ತಾಪಗಳಿಲ್ಲ. ಜಿಲ್ಲೆಯ ಜನತೆ ಗೊಂದಲಕ್ಕೆ ಒಳಗಾಗದಂತೆ ಅಭಯ ನೀಡಿದರು. ಈ ಸಂಬAಧ ಅರಣ್ಯ ಇಲಾಖೆಯ ಉನ್ನತಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರಶೀದಿಯಲ್ಲಿ ಸಂಚಾರ ಸಮಯ ಬೆಳಿಗ್ಗೆ ೬ ರಿಂದ ಸಂಜೆ ೬ ರವರೆಗೆ ಎಂದು ತಪ್ಪಾಗಿ ಮುದ್ರಿಸಲಾಗಿದೆ ಎಂದು ಅವರು ತಿಳಿಸಿದ್ದು, ಯಾವುದೇ ಕಾರಣಕ್ಕೂ ಸಂಚಾರ ಬಂದ್ಗೆ ಅವಕಾಶವಿಲ್ಲ ಎಂದು ಪೊನ್ನಣ್ಣ ಹೇಳಿದರು.
ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಕೆಪಿಸಿಸಿ ಸದಸ್ಯ ರಮಾನಾಥ್ ಉಪಸ್ಥಿತರಿದ್ದರು.