ಸೋಮವಾರಪೇಟೆ, ಜೂ. ೨೬: ತಾಲೂಕಿನಾದ್ಯಂತ ಮಳೆ ಚುರುಕು ಗೊಂಡಿದೆ. ಪರಿಣಾಮ ಕೃಷಿ ಚಟುವಟಿಕೆಗೂ ಬಿರುಸುಗೊಂಡಿವೆ. ರೈತಾಪಿ ವರ್ಗ ಗದ್ದೆ, ತೋಟಗಳಲ್ಲಿ ಬೀಡುಬಿಟ್ಟಿದ್ದು, ಕೃಷಿಕಾರ್ಯಗಳು ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ ೯,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೫ ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ.
ಈಗಾಗಲೇ ಹೊಲ-ಗದ್ದೆಗಳನ್ನು ಹದಗೊಳಿಸುವ ಕೆಲಸ ನಡೆಯುತ್ತಿದೆ. ಭತ್ತ, ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ ಭತ್ತ ಕೃಷಿಗೆ ಸಂಬAಧಿಸಿದAತೆ ಬಿತ್ತನೆ ಬೀಜವನ್ನು ಒದಗಿಸಲು ಕರ್ನಾಟಕ ಸ್ಟೇಟ್ ಸೀಡ್ ಕಾರ್ಪೋರೇಷನ್ ಮೂಲಕ ತರಿಸಿಕೊಂಡು ರೈತರಿಗೆ ವಿತರಿಸಲಾಗುತ್ತಿದೆ.
ಬಿಆರ್೨೬೫೫(ಬಾಂಗ್ಲಾರೈಸ್), ಇಂಟಾನ್, ಐಆರ್೬೪, ತನು, ಅತಿರ ತಳಿ ಬೀಜ ದಾಸ್ತಾನು ಮಾಡಲಾಗಿದೆ. ಎಲ್ಲಾ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಸೌಲಭ್ಯ ವಿತರಣೆಗೆ ಕ್ರಮವಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಸುಕಿನ ಜೋಳ ಹೆಚ್ಚಾಗಿ ಬೆಳೆಯುವ ತಾಲೂಕಿನ ಯಡವನಾಡು, ಹುದುಗೂರು, ಹೆಬ್ಬಾಲೆ, ಕೂಡಿಗೆ, ಗುಡ್ಡೆಹೊಸೂರು, ಮದಲಾಪುರ, ಶಿರಂಗಾಲ, ತೊರೆನೂರು, ಬಾಣಾವರ, ಆಲೂರು-ಸಿದ್ದಾಪುರ, ಶನಿವಾರಸಂತೆ ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಬಿತ್ತನೆಗೆ ಸೂಕ್ತ ಸಮಯವಾಗಿರುವು ದರಿಂದ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ.
ಈಗಾಗಲೇ ಕೃಷಿ ಇಲಾಖೆಯಿಂದ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ದಾಸ್ತಾನಿರಿಸಲಾಗಿದೆ. ರೈತರ ಬೇಡಿಕೆ ಪೂರೈಸುವಷ್ಟು ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕೃಷಿ ಇಲಾಖೆ ಕ್ರಮಕೈಗೊಂಡಿದೆ.
ಗAಗಾ ಕಾವೇರಿ, ಕಾವೇರಿ ೨೫ಕೆ೫೫, ಸಿಪಿ೮೧೮, ಪಯನೀರ್೩೦ ಬಿ೦೭ ಮುಸುಕಿನ ಜೋಳದ ತಳಿಗಳ ಬಿತ್ತನೆ ಬೀಜ ಲಭ್ಯವಿದೆ. ತಾಲೂಕಿನ ಗುಡ್ಡೆಹೊಸೂರು, ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ, ಶನಿವಾರಸಂತೆಯ ಸಹಕಾರ ಸಂಘ, ಕುಶಾಲನಗರ
v(ಮೊದಲ ಪುಟದಿಂದ) ಹಾಗೂ ಸೋಮವಾರಪೇಟೆ ಕಸಬಾ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜವನ್ನು ದಾಸ್ತಾನಿರಿಸಲಾಗಿದೆ.
ಕೆಲವೆಡೆ ಈಗಾಗಲೇ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಈ ಹಿಂದಿನ ವರ್ಷಗಳಲ್ಲಿ ೪೫೦೦ ರಿಂದ ೫ ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಮುಸುಕಿನ ಜೋಳ ಬೆಳೆಯುವ ಕೃಷಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಜೋಳ ಬೆಳೆಯುತ್ತಿದ್ದ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆದರೂ ಪ್ರಸಕ್ತ ಸಾಲಿನಲ್ಲಿ ೫ ಸಾವಿರ ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ.
ಕೃಷಿಕರು ಸುವರ್ಣ ಗಡ್ಡೆ, ಕೆಸ, ಸಿಹಿ ಗೆಣಸು, ಶುಂಠಿ ಬೆಳೆಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಮುಸುಕಿನ ಜೋಳ ಬೆಳೆಯುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಕೃಷಿ ಇಲಾಖೆಯಿಂದ ಕೃಷಿಕರಿಗೆ ಸಕಾಲದಲ್ಲಿ ಸೌಕರ್ಯಗಳನ್ನು ವಿತರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗದ್ದೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಲಾಗಿದೆ. ಆದರೆ, ತುಂಗಾ ಭತ್ತದ ಬಿತ್ತನೆ ಬೀಜ ಸಿಗುತ್ತಿಲ್ಲ. ಈ ಬಾರಿ ಭತ್ತದ ಬೀಜಕ್ಕೆ ಬೆಲೆ ಹೆಚ್ಚಳವಾಗಿದೆ. ಮುಂದೆ ಯಾವ ಬಿತ್ತನೆ ಬೀಜ ಸಿಗುತ್ತದೆಯೋ ಅದನ್ನೇ ಬಳಸಿ ಕೃಷಿ ಮಾಡಬೇಕಾಗುತ್ತದೆ ಎಂದು ಗೌಡಳ್ಳಿಯ ಕೃಷಿಕ ಕೊಮಾರಪ್ಪ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ೯೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈ ಬಾರಿ ಸಮರ್ಪಕವಾಗಿ ತುಂಗಾ ಭತ್ತದ ಬೀಜವನ್ನು ರೈತರು ಸಂಗ್ರಹಿಸದ ಕಾರಣ ತುಂಗಾ ಭತ್ತದ ಬೀಜವನ್ನು ಸರ್ಕಾರ ನೀಡುತ್ತಿಲ್ಲ. ಉಳಿದಂತೆ ಹೈಬ್ರೀಡ್ ಸೇರಿದಂತೆ ಹಿಂದೆ ನೀಡುತ್ತಿದ್ದ ಎಲ್ಲ ರೀತಿಯ ಭತ್ತದ ಬೀಜವನ್ನು ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಅಧಿಕ ಕೂಲಿ, ಕಾರ್ಮಿಕರ ಕೊರತೆಯ ಹಿನ್ನೆಲೆ ಹಲವಷ್ಟು ಕೃಷಿಕರು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಆದರೂ ಗ್ರಾಮೀಣ ಭಾಗದಲ್ಲಿ ಒಂದಿಷ್ಟು ಮಂದಿ ತಮ್ಮ ಕೃಷಿಯನ್ನು ಮುಂದುವರೆಸಿಕೊAಡು ಬರುತ್ತಿದ್ದಾರೆ.
ಗದ್ದೆ ಉಳುಮೆಗೆ ಈ ಹಿಂದೆ ಎತ್ತು, ನೇಗಿಲು ಬಳಸಲಾಗುತ್ತಿತ್ತು. ಇದೀಗ ಟ್ರಾö್ಯಕ್ಟರ್ ಮೊರೆ ಹೋಗಿದ್ದೇವೆ. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆಯೂ ಅಧಿಕವಾಗುತ್ತಿದೆ. ರೈತರ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಮುಂದೆ ಬರಬೇಕು. ಗೊಬ್ಬರ, ಕ್ರಿಮಿನಾಶಕ, ಕೃಷಿ ಯಂತ್ರೋಪಕರಣಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಕೃಷಿಯನ್ನು ಲಾಭದಾಯಕವಾಗಿಸಲು ಮುಂದಾದರೆ ಪಾಳುಬಿದ್ದ ಗದ್ದೆಗಳು ಮತ್ತೆ ಕೃಷಿಗೆ ತೆರೆದುಕೊಳ್ಳುತ್ತವೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಗೌಡ ಅಭಿಪ್ರಾಯಿಸಿದ್ದಾರೆ.