ಮಡಿಕೇರಿ, ಜೂ. ೨೬: ಡಾ. ಶಾಮ್ ರಾಕ್ ಪ್ರತಿಷ್ಠಾನವು ಮಡಿಕೇರಿ ಜಿಲ್ಲಾ ಕಾರಾಗೃಹದ ಕೈದಿಗಳಿಗೆ ಯೋಗಕ್ಷೇಮ, ಆರೋಗ್ಯ ಮತ್ತು ಆಂತರಿಕ ನೆಮ್ಮದಿಯನ್ನು ಉತ್ತೇಜಿಸುವ ಉಪಕ್ರಮವಾಗಿ ಧ್ವನಿ ಚಿಕಿತ್ಸೆ (ಸೌಂಡ್ ಹೀಲಿಂಗ್) ಕಾರ್ಯಾಗಾರವನ್ನು ‘ಸೋನಿಕ್ ಸೊಲೇಶ್ ೫.೦’ ಶೀರ್ಷಿಕೆಯಡಿಯಲ್ಲಿ ಆಯೋಜಿಸಿತು.

‘ನಿಮ್ಮೊಳಗೆ ಹಿತವನ್ನು ಕಂಡುಕೊಳ್ಳಿ, ದೇಹ ಮತ್ತು ಆತ್ಮಗಳ ಸಶಕ್ತೀಕರಣ ಆರೈಕೆ ಮನಸ್ಸುಗಳ ಚಿಕಿತ್ಸೆಗಾಗಿ ಧ್ವನಿ ಚಿಕಿತ್ಸೆ’ ಶಿರೋನಾಮೆಯಡಿಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಡಾ. ಶಾಮ್ ರಾಕ್ ಮತ್ತು ಶಿಲ್ಪಿ ದಾಸ್ ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ಇಬ್ಬರೂ ಕೂಡ ಪ್ರಸಿದ್ಧ ಧ್ವನಿ ಚಿಕಿತ್ಸಕರಾಗಿದ್ದಾರೆ.

ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದÀ ಶಾಸಕ ಎ.ಎಸ್. ಪೊನ್ನಣ್ಣ, ಗೋಣಿಕೊಪ್ಪಲು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಕಾರಾಗೃಹದ ಉಪಾಧೀಕ್ಷಕ ಸಂಜಯ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

೧೬೦ಕ್ಕು ಹೆಚ್ಚು ಕಾರಾಗೃಹ ವಾಸಿಗಳು ಕಾರ್ಯಾಗಾರದಲ್ಲಿ ಭಾಗವಹಿÀಸಿ ನಿರ್ವಿಶೀಕರಣ, ಒತ್ತಡ ಕಡಿಮೆ ಮಾಡುವುದು ಮತ್ತು ಭಾವನೆಗಳ ನಿಯಂತ್ರಣಗಳನ್ನೊಳಗೊAಡ ಧ್ವನಿ ಚಿಕಿತ್ಸೆಯ ಪ್ರಯೋಜನಗಳ ಅನುಭವ ಪಡೆದುಕೊಂಡರು.

ಕಾರ್ಯಾಗಾರದ ಸಕಾರಾತ್ಮಕ ಪರಿಣಾಮಗಳ ಕುರಿತು ತಿಳಿಸಿಕೊಟ್ಟು ಮಾತನಾಡಿದ ಸಂಜಯ್ ದತ್ತಿ ಅವರು ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು. ಡಾ. ಶಾಮ್ ರಾಕ್ ಮಾತನಾಡಿ ಅಪರಾಧಿ ನಡಾಣಿಕೆ ಹೆಚ್ಚಾಗಿ ಅಂತರ್ಗತ ಲಕ್ಷಣವಾಗಿರದೇ ಸನ್ನಿವೇಶಾನುಸಾರ ಸಾಂದರ್ಭಿಕವಾಗಿ ಬೇರು ಬಿಟ್ಟಿರುತ್ತದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ತಮ್ಮ ಭಾವನೆಗಳನ್ನು ನಿಭಾಯಿಸುವ ಮತ್ತು ಹಿಂದು ಮುಂದು ನೋಡದೇ ಅವೇಶಭರಿತ ಆಯ್ಕೆಗಳನ್ನು ತಪ್ಪಿಸುವ ಸಾಧನಗಳನ್ನು ಬಳಸಲಾಗುತ್ತದೆ.

ಡಾ. ರಾಕ್ ಪ್ರತಿಷ್ಠಾನವು ಈ ಕಾರ್ಯಾಗಾರವನ್ನೂ ಹೊರತಾದ ವಿಸ್ತೃತ ಉದ್ದೇಶವನ್ನು ಹೊಂದಿದೆ. ಗ್ರಾಮೀಣ ಭಾಗದ ಆಸಕ್ತ ಕಲಾವಿದರನ್ನು ತರಬೇತುಗೊಳಿಸುವುದರ ಮೂಲಕ ಸಂಗೀತವನ್ನು ವೃತ್ತಿಯಾಗಿ ಅನುಸರಿಸಲು ಅವಕಾಶ ಒದಗಿಸುವ ಉದ್ದೇಶವನ್ನು ಹೊಂದಿದೆ.

ಪಾರ್ಕಿನ್ಸನ್ ಕಾಯಿಲೆ, ಮಕ್ಕಳಲ್ಲಿ ಗೃಹಿಕಾ ದೌರ್ಬಲ್ಯ (ಡಿಸ್ಲೆಕ್ಸಿಯಾ) ಮತ್ತಿತರ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಂಗೀತ ಶಕ್ತಿ ಸಹಾಯಕವಾಗಲಿದೆ. ಹೀಗಾಗಿ ಕ್ಯಾನ್ಸರ್ ರೋಗಿಗಳು, ಸರ್ಕಾರಿ ಶಾಲೆಗಳು ಮತ್ತು ಹಿರಿಯ ನಾಗರಿಕರ ವಸತಿಗಳು ಸೇರಿದಂತೆ ವಿವಿಧ ಸಮುದಾಯಗಳಿಗೆ ಚಿಕಿತ್ಸಾ ಅಧಿವೇಶನಗಳನ್ನು ಮತ್ತು ತಾಳವಾದ್ಯ, ವಾದಕರು ಮತ್ತು ವರ್ತಕರ ಸಮ್ಮೇಳನಗಳನ್ನು ಡಾ. ಶಾಮ್ ರಾಕ್ ಪ್ರತಿಷ್ಠಾನವು ಆಯೋಜಿಸುತ್ತದೆ ಎಂದು ಮಾಹಿತಿಯಿತ್ತರು.