ಮಡಿಕೇರಿ, ಜೂ. ೨೬: ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಉಪ ನಿರ್ದೇಶಕರಾಗಿ (ಆಡಳಿತ) ರಂಗಧಾಮಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಡಿಡಿಪಿಐ ರಂಗಧಾಮಪ್ಪ ಅವರು ಡಿಡಿಪಿಐ ಹುದ್ದೆಯ ಪ್ರಬಾರದಲ್ಲಿದ್ದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಪ್ರಾಂಶುಪಾಲ ಎಂ. ಚಂದ್ರಕಾAತ್ ಅವರಿಂದ ಅಧಿಕಾರ ಸ್ವೀಕರಿಸಿದರು.

ತುಮಕೂರು ಜಿಲ್ಲಾ ಡಿಡಿಪಿಐ ಕಚೇರಿಯಲ್ಲಿ ಉಪ ಯೋಜನಾ ಸಮನ್ವಯಾಧಿಕಾರಿ(ಡಿ.ವೈ.ಪಿ.ಸಿ.)ಯಾಗಿ ಸೇವೆ ಸಲ್ಲಿಸುತ್ತಿದ್ದ ರಂಗಧಾಮಪ್ಪ ಅವರು ಮುಂಬಡ್ತಿ ಹೊಂದಿ ಕೊಡಗು ಜಿಲ್ಲೆಯ ಡಿಡಿಪಿಐ ಆಗಿ ಸರ್ಕಾರ ನೇಮಕ ಮಾಡಿದೆ.

ಕೊಡಗು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ರಂಗಧಾಮಪ್ಪ ಅವರನ್ನು ಸ್ವಾಗತಿಸಲಾಯಿತು. ಒಕ್ಕೂಟದ ಅಧ್ಯಕ್ಷ ಕೋಳೆರ ಝರು ಗಣಪತಿ, ಉಪಾಧ್ಯಕ್ಷ ದಾಮೋದರ್, ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ, ಕಾನೂನು ಸಲಹೆಗಾರ ಎಂ.ಎಸ್. ಪೂವಯ್ಯ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.