ಸೋಮವಾರಪೇಟೆ, ಜೂ. ೨೫: ಪ್ರಪಂಚದ ೨೧೦ ದೇಶಗಳಲ್ಲಿ ಲಯನ್ಸ್ ಸಂಸ್ಥೆಯ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸದಸ್ಯರ ಸೇವಾ ಕಾರ್ಯಗಳು ಬಡವರ, ನಿರ್ಗತಿಕರ ಪರವಾಗಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್ ಅಭಿಪ್ರಾಯಿಸಿದರು. ಪಟ್ಟಣದ ಶ್ರೀಗಂಧ ಹಾಲ್ನಲ್ಲಿ ನಡೆದ ಲಯನ್ಸ್ ಕ್ಲಬ್ಗೆ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಡವರ ಪರ ಯೋಜನೆಗಳು, ಪರಿಸರ ಮತ್ತು ಸಂರಕ್ಷಣಾ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ಸಾಕ್ಷರತಾ ಸೇವೆಗಳು, ಅಂಧರು ಮತ್ತು ಶ್ರವಣದೋಷವುಳ್ಳವರಿಗೆ ನೆರವು, ಮಕ್ಕಳ ಕ್ಯಾನ್ಸರ್ ಮತ್ತು ಕುಟುಂಬಗಳಿಗೆ ಬೆಂಬಲ ಇಂತಹ ಹಲವಾರು ಜನಪರ ಯೋಜನೆಗಳನ್ನು ಅಂತರರಾಷ್ಟಿçÃಯ ಲಯನ್ಸ್ ಸಂಸ್ಥೆ ಮಾಡಿದೆ ಎಂದು ಹೇಳಿದರು. ೨೧೦ ದೇಶಗಳಲ್ಲಿ ಲಯನ್ಸ್ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದ್ದು, ೧೪ ಲಕ್ಷ ಸದಸ್ಯರಿದ್ದಾರೆ. ಸೋಮವಾರಪೇಟೆಯಲ್ಲಿ ಕಳೆದ ೪೬ ವರ್ಷಗಳಿಂದ ಲಯನ್ಸ್ ಜನಪರವಾಗಿ ಕೆಲಸ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷ ಎ.ಎಸ್.ಮಹೇಶ್ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘಿಸಿದರು.
ಸೋಮವಾರಪೇಟೆ ಆಗ್ನಿಶಾಮಕ ದಳದ ಪ್ರಮುಖ್ ಅಗ್ನಿಶಾಮಕ ಪಿ. ಈಶ್ವರ್, ಪಟ್ಟಣದ ಪೊಲೀಸ್ ಠಾಣೆಯ ಮುಖ್ಯ ಪೇದೆಗಳಾದ ಅನಂತ್ ಕುಮಾರ್, ಎಸ್.ಈ.ವೀಣಾ, ಗೃಹ ರಕ್ಷಕ ದಳದ ಎಸ್.ಆರ್. ದೇವರಾಜ್, ದೇಹದಾನಿ ತೋಮಸ್ ವಾಸ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಸಿ.ಕೆ. ರೋಹಿತ್, ಕಾರ್ಯದರ್ಶಿ ಯೋಗೇಶ್, ಖಜಾಂಚಿ ವೀರಪ್ಪ, ಪದಾಧಿಕಾರಿ ಅಮೃತ್ ರೋಹಿತ್ ಸೇರಿದಂತೆ ಇತರರು ಇದ್ದರು.