ಗೋಣಿಕೊಪ್ಪ : ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕಡ ಕೂಟದ ವತಿಯಿಂದ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ತರಬೇತುದಾರರಾದ ಚೆಕ್ಕೇರ ದೇಚು ದೇಚ್ಚಕ್ಕ ಯೋಗ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೋಗದ ಬಗ್ಗೆ ಜಾಗೃತಿ ಮೂಡಿಸಿದರು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟ್ಟಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಣ್ಣಿಯಂಡ ಕಾವ್ಯ ಸಂಜು, ಉಪಾಧ್ಯಕ್ಷೆ ಮೀದೆರೀರ ಕವಿತ, ಕಾರ್ಯದರ್ಶಿ ಬಲ್ಲಚಂಡ ಕಸ್ತೂರಿ, ಆಡಳಿತ ಮಂಡಳಿ ಸದಸ್ಯರಾದ ಚೆಕ್ಕೇರ ವಾಣಿ ಸಂಜು, ಮೂಕಳೇರ ದಿಶಾ, ಮೂಕಳೇರ ಕಾವ್ಯ ಮಧು, ಚಿರಿಯಪಂಡ ಸಮ್ಮಿ ಇದ್ದರು.

ಮುಳ್ಳೂರು : ಸಮೀಪದ ಸ.ಕಿ.ಪ್ರಾ. ಶಾಲೆಯಲ್ಲಿ ಹತ್ತನೆ ವಿಶ್ವ ಯೋಗ ದಿನಾಚರಣೆಯನ್ನು ‘ನಮಗಾಗಿ ಹಾಗೂ ಸಮಾಜಕ್ಕಾಗಿ’ ಎಂಬ ವಿಶೇಷ ಶೀರ್ಷಿಕೆ ಅಡಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಸರಳ ಯೋಗಾಸನ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ಯೋಗಾಸನದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನದ ಮಹತ್ವ ಬಗ್ಗೆ ತಿಳಿಸಿಕೊಡಲಾಯಿತು, ಸಮುದಾಯ ಆರೋಗ್ಯ ಅಧಿಕಾರಿ ಗಣೇಶ್, ಆರೋಗ್ಯ ಕಾರ್ಯಕರ್ತೆ ರೂಪ ಅವರುಗಳು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಪ್ರಾಣಾಯಾಮ ಮತ್ತು ಯೋಗದ ವಿವಿಧ ಅಸನಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ದಿನದ ಮಹತ್ವ ಕುರಿತು ಮಾತನಾಡಿ-ಇಂದಿನ ಆಧುನಿಕ ಬದುಕಿನಲ್ಲಿ ನಾವು ಒತ್ತಡದಲ್ಲಿರುತ್ತೇವೆ. ಈ ನಿಟ್ಟಿನಲ್ಲಿ ಒತ್ತಡಮುಕ್ತವಾಗಿ ಮತ್ತು ಆರೋಗ್ಯವಂತರಾಗಿ ಜೀವನ ನಡೆಸಬೇಕೆಂದರೆ ಪ್ರತಿನಿತ್ಯ ಯೋಗಾಸನ ಮಾಡಬೇಕು ಹಾಗೂ ಯೋಗದ ಮತ್ತೊಂದು ಭಾಗವಾದ ಧ್ಯಾನವನ್ನು ಮಾಡುವುದರ ಮೂಲಕ ಆರೋಗ್ಯವಂತರಾಗಿ ಜೀವನ ನಡೆಸಬೇಕು ್ತ ವಿದ್ಯಾರ್ಥಿಗಳು ಪ್ರತಿದಿನ ಯೋಗಭ್ಯಾಸ ಮತ್ತು ಧ್ಯಾನವನ್ನು ಮಾಡುವಂತೆ ಸಲಹೆ ನೀಡಿದರು. ಶಾಲಾ ಸಹ ಶಿಕ್ಷಕ ಮಂಜುನಾಥ್, ಪೋಷಕರು, ಗ್ರಾಮಸ್ಥರು ಹಾಜರಿದ್ದರು. ೆಕಡಂಗ: ವಿಜಯ ವಿದ್ಯಾಸಂಸ್ಥೆಯ ವತಿಯಿಂದ ೧೦ನೇ ಅಂತರರಾಷ್ಟಿçÃಯ ಯೋಗ ಮಹೋತ್ಸವನ್ನು ಆಚರಿಸಲಾಯಿತು. ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಬೊಳಕಾರಂಡ ರವಿ ಅಯ್ಯಣ್ಣ ಹಾಗೂ ಕಾರರಂ ನಿರ್ದೇಶಕ ಕೋಡಿರ ಪೊನ್ನು ಮಂದಣ್ಣ, ಆಯುಷ್ ಆರ್ಯುವೇದ ಆಸ್ಪತ್ರೆಯ ವೈದ್ಯ ಶೈಲಜಾ ಮುರುಳಿಧರ, ಸಂಸ್ಥೆಯ ಮುಖ್ಯ ಉಪಾಧ್ಯಾಯಿನಿ ಬೋಜಮ್ಮ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಡಾ. ಶೈಲಜಾ ಅವರು ಯೋಗ ದಿನದ ಮಹತ್ವ ಹಾಗೂ ಅದರಿಂದ ಆಗುವ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಜಯ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಬೋಜಮ್ಮ ಹಾಗೂ ಸಹ ಶಿಕ್ಷಕಿ ದರ್ಶಿನಿ ಕೆ.ಟಿ. ಅವರು ಯೋಗದ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ನಂತರ ಯೋಗ ತರಬೇತುದಾರರಾದ ಸಿಂಧು ಅವರ ಸಮ್ಮುಖದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಿವಿಧ ಯೋಗ ಭಂಗಿಗಳನ್ನು ನೆರವೇರಿಸಿದರು.ಕೊಡ್ಲಿಪೇಟೆ : ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗ ದಿನವನ್ನು ಆಚರಿಸಿದರು. ಯೋಗಾಭ್ಯಾಸಕ್ಕೆ ಸ್ವತಃ ಯೋಗ ಮಾಡುವ ಮೂಲಕ ಚಾಲನೆ ನೀಡಿದ ಕಲ್ಲುಮಠಾಧೀಶ ವಿದ್ಯಾಸಂಸ್ಥೆಯ ಅಧ್ಯಕ್ಷ ಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿದಿನ ಯೋಗ ಮಾಡುವುದರಿಂದ ಆರೋಗ್ಯಯುತ ಜೀವನ ನಡೆಸಬಹುದು. ಯೋಗ ದೈಹಿಕವಾಗಿ ಮತ್ತು ಮಾನಸಿಕವಾಗಿ ನೆಮ್ಮದಿಯನ್ನು ನೀಡಿ ಸದೃಢರನ್ನಾಗಿಸುತ್ತದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕಿ ಶಾಲಿನಿ ಮಾರ್ಗದರ್ಶನದಲ್ಲಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿ ರಂಜಿಸಿದರು. ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖ್ಯ ಶಿಕ್ಷಕ ಅಭಿಲಾಷ್, ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು. ವೀರಾಜಪೇಟೆ: ವೀರಾಜಪೇಟೆಯ ಪ್ರಗತಿ ಶಾಲೆಯಲ್ಲಿ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆಡಳಿತಾಧಿಕಾರಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮತ್ತು ಸುಷ್ಮಾ ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಯೋಗಾಸನದ ಮಹತ್ವದ ಕುರಿತು ಮಾಹಿತಿ ನೀಡಿ ವಿವಿಧ ಭಂಗಿಗಳನ್ನು ಮಾಡಿಸಲಾಯಿತು. ಈ ಸಂದರ್ಭ ಪ್ರಾಂಶುಪಾಲ ವಿಮಲ್ ಪ್ರಭು ಮತ್ತು ಕ್ರೀಡಾ ಸಂಯೋಜಕ ಶಿವಶಕ್ತಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು. ಕೂಡಿಗೆ : ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರ ವೃಂದ ಸೇರಿದಂತೆ ಸಿಬ್ಬಂದಿ ವರ್ಗದವರು ಕಾಲೇಜು ಸಭಾಂಗಣದಲ್ಲಿ ವಿಶ್ವಯೋಗ ದಿನ ಆಚರಣೆ ಪ್ರಯುಕ್ತ ವಿವಿಧ ಆಸನಗಳನ್ನು ಮಾಡಿದರು.

ಸಿದ್ದಾಪುರ : ಹತ್ತನೇಯ ಅಂತರರಾಷ್ಟಿçÃಯ ಯೋಗ ದಿನವನ್ನು ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ಅರ್ಥಪೂರ್ಣ ವಾಗಿ ಆಚರಿಸಲಾಯಿತು. ಕರ್ನಾಟಕ ಪಬ್ಲಿಕ್ ಶಾಲೆಯ ಗಣಿತ ಶಿಕ್ಷಕರಾದ ಪ್ರಸನ್ನ ಅವರು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವನ್ನು ನೀಡಿದರು. ಈ ಸಂದರ್ಭದಲ್ಲಿ ಕೆ.ಪಿ.ಎಸ್. ಶಾಲೆಯ ಉಪಪ್ರಾಂಶುಪಾಲ ಅನಿಲ್ ಕೆ. ಪಿ. ಸೇರಿದಂತೆ ಶಾಲೆಯ ಶಿಕ್ಷಕರುಗಳು ಹಾಜರಿದ್ದರು.

ಚೆಯ್ಯಂಡಾಣೆ : ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೦ನೇ ವಿಶ್ವ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಈ ಸಂದರ್ಭ ದೈಹಿಕ ಶಿಕ್ಷಕರಾದ ಬಿ. ಟಿ. ಪೂರ್ಣೇಶ್ ವಿದ್ಯಾರ್ಥಿಗಳಿಗೆ ಯೋಗ ದಿನದ ಮಹತ್ವವನ್ನು, ಯೋಗಾಸನದಿಂದಾಗುವ ಪ್ರಯೋಜನಗಳನ್ನು ತಿಳಿಸಿಕೊಡುವುದರ ಮೂಲಕ ವಿವಿಧ ಯೋಗಭ್ಯಾಸಗಳನ್ನು ಮಾಡಿಸಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಆರ್.ಪ್ರೇಮಾ ಕುಮಾರಿ, ಶಿಕ್ಷಕಿಯರಾದ ದಮಯಂತಿ, ಜಯಪ್ರದ, ಅತಿಥಿ ಶಿಕ್ಷಕಿ ಸತ್ಯಮ್ಮ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಐಗೂರು : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ಕೆರೆಯ ಬಳಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹರದೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಾಲಿಬೆಟ್ಟ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಾಲಿಬೆಟ್ಟದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಉಪನ್ಯಾಸಕಿ ಎಂ. ಬಿ. ಪಾರ್ವತಿ ಅವರು ಮಾತನಾಡಿ ಯೋಗಾಭ್ಯಾಸವು ಎಲ್ಲ ಧÀರ್ಮೀಯರಲ್ಲಿ ಎಲ್ಲಾ ದೇಶದ ಜನರ ನಡುವೆ ಸಾಮರಸ್ಯವನ್ನು ಬೆಳೆಸುತ್ತದೆ. ಹಾಗೆಯೇ ಯೋಗ ಶಾರೀರಿಕÀ ಹಾಗೂ ಮಾನಸಿಕ ನೆಮ್ಮದಿಯನ್ನು ತರುತ್ತದೆ. ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ಶ್ರದ್ದೆ ಹಾಗೂ ಉತ್ತಮ ಆರೋಗ್ಯ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಸವಿತಾ ಪಿ.ಆರ್. ಅವರು ವಿದ್ಯಾರ್ಥಿಗಳಿಂದ ಕೆಲವೊಂದು ಆಸನಗಳನ್ನು ಮಾಡಿಸಿದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರುಗಳಾದ ಸುನಿತ ಕೆ. ಕೆ., ಪಿ. ಆರ್. ಶಿವದಾಸ್, ಕೀರ್ತನ ಹಾಗೂ ಕಚೇರಿ ಸಿಬ್ಬಂದಿ ಶಾಲಿನಿ ಉಪಸ್ಥಿತರಿದ್ದರು. ಶನಿವಾರಸಂತೆ: ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಪುಷ್ಪಾವತಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸೂರ್ಯ ನಮಸ್ಕಾರ, ಪ್ರಾಣಾಯಮ, ಇತ್ಯಾದಿ ಯೋಗದ ವಿವಿಧ ಆಸನಗಳನ್ನು ಪ್ರದರ್ಶಸಿದರು. ಮುಖ್ಯ ಶಿಕ್ಷಕ ವಿಶ್ವನಾಥ್ ಯೋಗ, ಯೋಗಾಸನಗಳ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕಿಯರಾದ ಜಸಿಂತಾ ಸಿಕ್ವೇರಾ, ಜಾಕ್ಲಿನ್, ಇತರರು ಹಾಜರಿದ್ದರು.

ವೀರಾಜಪೇಟೆ: ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಪ್ರಾಚಾರ್ಯರಾದ ಡಾ. ವಾಣಿ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯೋಗ ಪ್ರಶಸ್ತಿ ವಿಜೇತೆ ವಿ.ಕೆ. ಲಲಿತಾ ಯೋಗದ ಮಹತ್ವವನ್ನು ವಿವರಿಸಿದರು. ಯೋಗ ಶಿಕ್ಷಣದ ಉಪ ಸಂಯೋಜಕರಾದ ರಾಜಶೇಖರ್ ಕೆ.ಎಸ್. ಅವರ ನಿರ್ದೇಶನದಲ್ಲಿ ವಿದ್ಯಾರ್ಥಿ ಶಿಕ್ಷಕರಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ಸಮಾರಂಭದಲ್ಲಿ ಯೋಗ ಶಿಕ್ಷಣದ ಸಂಯೋಜಕರಾದ ಪದ್ಮಲತಾ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು, ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಶಿಕ್ಷಣಾರ್ಥಿಗಳಾದ ಅನುಷಾ ಹಾಗೂ ಮನೋಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

(ಮುಂದುವರಿಯುವುದು)