ಮಡಿಕೇರಿ, ಜೂ. ೨೫: ಪತಂಜಲಿ ಮಹರ್ಷಿಗಳಿಂದ ಪರಂಪರಾನು ಗತವಾಗಿ ಬೆಳೆದು ಬಂದ ಯೋಗ ವಿದ್ಯೆಯನ್ನು ಇಂದು ವಿದೇಶಿಗರು ಹೆಚ್ಚು ಪ್ರೀತಿಸುತ್ತಿದ್ದು, ತಮ್ಮ ನೆಲದ ಕಲೆಯನ್ನು ಭಾರತೀಯರು ಪರಕೀಯರಿಂದ ಕಲಿಯಬೇಕಾದ ದುಸ್ಥಿತಿ ಒದಗಿ ಬರುತ್ತಿದೆ ಎಂದು ಪ್ರಬಾರ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಶಾಂತಿ ಅವರು ನುಡಿದರು.

ಅವರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಏರ್ಪಡಿಸಿದ್ದ ಯೋಗ ದಿನದ ವಿಶೇಷ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮ ಆಗುವದರಿಂದ ಎಲ್ಲರೂ ಯೋಗಾಭ್ಯಾಸ ಮೈಗೂಡಿಸಿಕೊಳ್ಳುವದು ಸೂಕ್ತ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಮೂರ್ತಿ ಸುಬ್ರಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶೆ ಜಯಲಕ್ಷಿö್ಮ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ್, ಪ್ರಣವ ಯೋಗ ಕೇಂದ್ರದ ಮುಖ್ಯಸ್ಥೆ ಶಿಲ್ಪಾ ರೈ ಭಾಗವಹಿಸಿದ್ದರು. ಶಿಲ್ಪಾ ರೈ ಅವರ ಮಾರ್ಗದರ್ಶನದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಎಲ್ಲರೂ ನಲವತ್ತೆöÊದು ನಿಮಿಷಗಳ ಕಾಲ ಭಾಗವಹಿಸಿದುದು ವಿಶೇಷವಾಗಿತ್ತು. ನ್ಯಾಯಾಲಯದ ಆಡಳಿತ ಮುಖ್ಯಸ್ಥ ಕೆಂಪರಾಜ್ ಸ್ವಾಗತಿಸಿದರು. ನ್ಯಾಯಾಲಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶಮ್ಮಿ ಹಾಜರಿದ್ದರು.