ಕುಶಾಲನಗರ, ಜೂ. ೨೫: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಿತ್ರ ವೃಂದ ಆಶ್ರಯದಲ್ಲಿ ಕುಶಾಲನಗರದ ಕಲಾ ಭವನದಲ್ಲಿ ಉಡುಪಿಯ ಯಕ್ಷಜನ್ಸಾಲೆ ಕಲಾ ತಂಡದವರಿAದ ಮಹಿಷ ಮರ್ದಿನಿ ಮತ್ತು ಕದಂಬ ಕೌಶಿಕೆ ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್ ಮತ್ತು ಡಾ. ಪ್ರತಿಭಾ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದರಾದ ನಂದೀಶ್ ಜನ್ನಾಡಿ, ಸುಜನ್ ಕುಮಾರ್ ಹಾಲಾಡಿ, ಸುಧೀರ್ ಉಪ್ಪುರ್, ಗಣೇಶ್ ಆಚಾರ್ಯ ಬಿಲ್ವಾಡಿ ಅವರನ್ನು ಕಲಾ ಸೇವೆಗಾಗಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ನಾಗರಾಜ್, ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್, ಪದಾಧಿಕಾರಿಗಳಾದ ಹೇಮಲತಾ, ದೇವಿಪ್ರಸಾದ್, ಡಿ.ಆರ್. ಸೋಮಶೇಖರ್, ಎಂ.ಎನ್. ಕಾಳಪ್ಪ, ಹರೀಶ್ ಗುಡ್ಡೆಮನೆ, ಕೆ.ವಿ. ಉಮೇಶ್, ಮಿತ್ರ ವೃಂದದ ಗಿರೀಶ್ ಭಟ್, ಕೃಷ್ಣಮೂರ್ತಿ ಭಟ್, ಚಿತ್ರ ರಮೇಶ್ ಇದ್ದರು.