ಮಡಿಕೇರಿ ಕೊಡವ ಸಮಾಜ ಖಂಡನೆ
ಮಡಿಕೇರಿ, ಜೂ. ೨೫: ಶಾಸಕ ಎ.ಎಸ್. ಪೊನ್ನಣ್ಣನವರ ಪ್ರತಿಕೃತಿಯನ್ನು ದಹಿಸಿದ ವಿಚಾರವನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ. ಇನ್ನು ಮುಂದೆ ಯಾವುದೇ ಮುಷ್ಕರಗಳು ಆದಲ್ಲಿ ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುವಂತೆಯೂ, ಯಾವುದೇ ವ್ಯಕ್ತಿಯ ಜನಪ್ರತಿನಿಧಿಯ ಪ್ರತಿಕೃತಿಯನ್ನು ದಹಿಸದಂತೆಯೂ ಕೇಳಿಕೊಂಡಿದೆ. ಈ ರೀತಿ ಮಾಡಿದವರ ಮೇಲೆ ಸೂಕ್ತ ಕ್ರಮವಹಿಸುವಂತೆಯೂ ಸಮಾಜ ಒತ್ತಾಯಿಸಿದೆ.
ಬೆಲೆ ಇಳಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ
ಮಡಿಕೇರಿ : ಬಿಜೆಪಿಯವರಿಗೆ ನಿಜವಾಗಿಯೂ ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಇಳಿಕೆ ಮಾಡಿಸಲಿ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಲೆ ಏರಿಕೆಯ ನೆಪವೊಡ್ಡಿ ವೀರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಮತ್ತು ಜನಪ್ರಿಯ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರನ್ನು ಗುರಿಯಾಗಿಸಿದ ಕೀಳು ಮಟ್ಟದ ರಾಜಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಶಾಸಕರಿಗೆ ಚ್ಯುತಿ ತರುವ ಪ್ರಯತ್ನ
ವೀರಾಜಪೇಟೆ: ಶಾಸಕ ಪೊನ್ನಣ್ಣ ಅವರ ಪ್ರತಿಕೃತಿ ದಹನ, ಅಣಕು ಶವಯಾತ್ರೆಯನ್ನು ವೀರಾಜಪೇಟೆ ತಾಲೂಕು ರಾಜ್ಯ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಖಂಡಿಸಿದೆ.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಪಿ.ವಿ. ಜಾನ್ಸನ್, ಪ್ರತಿಕೃತಿ ದಹನ ಅಣುಕು ಶವಯಾತ್ರೆ ನಡೆಸಿರುವ ಭಾ.ಜ.ಪ ಕೆಳಮಟ್ಟದ ರಾಜಕೀಯ ಮಾಡುತ್ತಿದೆ. ಶಾಸಕ ಎ.ಎಸ್. ಪೊನ್ನಣ್ಣ ಅವರು ಅಭಿವೃದ್ದಿ ಹರಿಕಾರ ಎಂದು ಜನಪ್ರಿಯತೆಯನ್ನು ಗಳಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು ೩೦೦ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಶಾಸಕರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿದ ಸಂದÀರ್ಭ ಅವರ ಕಾರಿಗೆ ಮೊಟ್ಟೆ ಎಸೆದು ಬಿಜೆಪಿಯವರು ಅಗೌರವ ತೋರಿದ್ದರು. ಈ ವೇಳೆ ಜಿಲ್ಲೆಗೆ ಅಪಮಾನವಾಗುತ್ತದೆ ಎಂದು ಪೊನ್ನಣ್ಣ ಅವರು ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಿದ್ದರು ಎಂದು ಹೇಳಿದರು. ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ದಿನೇಶ್ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಾಸಕರ ಮತ್ತು ರಾಜ್ಯ ನಾಯಕರ ಅಣಕು ಶವಯಾತ್ರೆ ಮತ್ತು ಪ್ರತಿಕೃತಿ ದಹನ ಮಾಡಿರುವುದು ಖಂಡನೀಯ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತರಾದ ಪಳೆಯಂಡ ಹರಿ, ಮಚ್ಚಾರಂಡ ಕಿರಣ್ ಹಾಜರಿದ್ದರು.
ಪಿ.ಎಂ. ಲತೀಫ್ ಖಂಡನೆ
ಸುAಟಿಕೊಪ್ಪ : ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹನವನ್ನು ಜಿ.ಪಂ.ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಪಿ.ಎಂ.ಲತೀಫ್ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕರು, ನಾಯಕರು, ಕಾರ್ಯಕರ್ತರು ಅತಿರೇಕವಾಗಿ ವರ್ತಿಸಿರುವುದು ಖಂಡನೀಯ. ಬಿಜೆಪಿಯವರ ಈ ರೀತಿಯ ನಡುವಳಿಕೆಯಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಒಂದು ವರ್ಷದ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿ ಮಾಡಲು ಕನಸು ಕಂಡಿರುವ ಶಾಸಕರ ಅಭಿವೃದ್ಧಿ ಪರ ಚಿಂತನೆಗೆ ಸಹಕಾರ ಮತ್ತು ಬೆಂಬಲ ಕೊಡುವುದು ರಾಜಕೀಯ ಧರ್ಮ ಎಂದು ಲತೀಫ್ ಪ್ರತಿಪಾದಿಸಿದ್ದಾರೆ. ಶಾಸಕರು ಅಭಿವೃದ್ಧಿ ಸಾಧಿಸಿದ್ದಾರೆ : ಕಾಂಗ್ರೆಸ್
ಮಡಿಕೇರಿ : ಜಿಲ್ಲೆಯ ಇಬ್ಬರು ಶಾಸಕರು ತಮ್ಮ ಇಲ್ಲಿಯವರೆಗಿನ ಅಲ್ಪಾವಧಿಯ ಅಧಿಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ೨೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳನ್ನು ನಡೆಸುವ ಮೂಲಕ ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದಾರೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್ ಅವರು, ಬಿಜೆಪಿಯ ‘ಅಭಿವೃದ್ಧಿ ಶೂನ್ಯ’ ಟೀಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ ದರ ಹೆಚ್ಚಳ ವಿಷಯಕ್ಕೆ ಸಂಬAಧಿಸಿದAತೆ ಬಿಜೆಪಿಯು, ದರ ಹೆಚ್ಚಳಕ್ಕೆ ಸಂಬAಧವಿಲ್ಲದ ಶಾಸಕ ಎ.ಎಸ್. ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿರುವುದು ಬೇಸರದ ವಿಚಾರ. ಆರ್ಥಿಕ ಕ್ರೋಢೀಕರಣಕ್ಕೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ದರ ಹೆಚ್ಚಳ ಮಾಡುವುದು ಸರ್ವೇಸಾಮಾನ್ಯವೆಂದು ಅಭಿಪ್ರಾಯಿಸಿದರು.
ಚುನಾವಣೆ ಸಮೀಪಿಸುತ್ತಿರುವ ಹಂತಗಳಲ್ಲಿಯೂ ಇಂಧನ ದರ ಹೆಚ್ಚಳ ನಡೆದಿದೆ. ಸುಮಾರು ೭೦ ರೂ. ಇದ್ದ ಇಂಧನ ದರ ೧೦೦ ರೂ.ಗಳ ಗಡಿ ದಾಟಿದ ಹಂತದಲ್ಲಿಯೂ ಕಾಂಗ್ರೆಸ್ ಪಕ್ಷ ಪ್ರತಿಕೃತಿ ದಹಿಸುವಂತಹ ಕಾರ್ಯಕ್ಕೆ ಮುಂದಾಗಿಲ್ಲವೆAದು ಸ್ಪಷ್ಟಪಡಿಸಿದರು. ಜಿಲ್ಲೆಯ ನೂತನ ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಇಬ್ಬರು ಶಾಸಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಭಾಗಮAಡಲ ಮೇಲ್ಸೇತುವೆಯನ್ನು ಬಿಜೆಪಿ ಉಲ್ಲೇಖಿಸಿ ಬಿಜೆಪಿ ಮಂದಿ ಸೇತುವೆ ನಿರ್ಮಾಣದ ಸಾಧನೆಯನ್ನು ಕಾಂಗ್ರೆಸ್ ತನ್ನದೆಂದು ಬಿಂಬಿಸುತ್ತಿದೆ ಎಂದು ಆರೋಪಿಸಿದೆ. ಮೇಲ್ಸೇತುವೆ ಆರಂಭಕ್ಕೆ ಕಾರಣರಾದವರು ಮತ್ತು ಅದಕ್ಕೆ ಅಗತ್ಯ ನೆರವು ಒದಗಿಸಿದವರು ಅಂದಿನ ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್ ಅವರು ಎಂದು ತಿಳಿಸಿದರು. ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಸುರೇಶ್ ಸಂಪಾಜೆ ಮಾತನಾಡಿ, ಇಬ್ಬರು ಶಾಸಕರ ಉತ್ತಮ ಕೆಲಸ ಕಾರ್ಯಗಳಿಂದ ಜಿಲ್ಲೆಯ ಬಿಜೆಪಿಗರು ಆತಂಕಿತರಾಗಿ ಪ್ರತಿಕೃತಿ ದಹನ ನಡೆಸಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮೋಹನ್ ದಾಸ್, ಸಾಮಾಜಿಕ ಜಾಲ ತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಉಪಸ್ಥಿತರಿದ್ದರು.
ಕೊಡಗಿನ - ಕೊಡವ ಸಂಸ್ಕೃತಿಯ ಅರಿವು ಬೇಕಿತ್ತು
ಮಡಿಕೇರಿ : ರಾಜಕೀಯ ಬೇರೆ, ಪ್ರತಿಭಟನೆಗಳು ಬೇರೆ, ವಿಪಕ್ಷಗಳಿಗೆ ಪ್ರತಿಭಟನೆಯ ಹಕ್ಕು ಇದೆ. ಆದರೆ, ಬಿಜೆಪಿ ಪ್ರತಿಭಟನೆ ನಡೆಸಿದ ಸಂದರ್ಭ ಕೊಡಗಿನ - ಕೊಡವರ ಸಂಸ್ಕೃತಿಯ ಬಗ್ಗೆ ಅರಿತು ನಡೆದುಕೊಳ್ಳಬೇಕಿತ್ತು ಎಂದು ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಹೇಳಿದ್ದಾರೆ.
ಪೊನ್ನಣ್ಣ ಅವರು ಕಾಂಗ್ರೆಸ್ನಿAದ ಶಾಸಕರಾಗಿದ್ದರು, ಪಕ್ಷಾತೀತವಾಗಿ, ಜಾತ್ಯತೀತವಾಗಿ ಜಿಲ್ಲೆಯ ಸರ್ವತೋಮುಖ ಏಳಿಗೆಗೆ ನಿರಂತರ ಪರಿಶ್ರಮವನ್ನು ಪ್ರಾಮಾಣಿಕವಾಗಿ ತೋರುತ್ತಿದ್ದಾರೆ. ಎಲ್ಲರಿಗೂ ಸ್ಪಂದಿಸುವುದು ಇವರ ಉತ್ತಮ ಗುಣವಾಗಿದೆ.
ಆಯಾ ಸರಕಾರದ ವ್ಯವಸ್ಥೆಗಳು, ನಿಯಮ ಬೇರೆ ಇರುತ್ತದೆ. ಆದರೆ, ತವರಿನಲ್ಲೇ ಓರ್ವ ಶಾಸಕರ ಅಣಕು ಶವಯಾತ್ರೆ ಮಾಡಿರುವುದು ಖಂಡಿತಾ ಸರಿಯಲ್ಲ. ಅದರಲ್ಲೂ ಎಂಎಲ್ಸಿ ಕೂಡ ಇದರಲ್ಲಿ ಪಾಲ್ಗೊಂಡಿದ್ದು, ಕೊಡವ ಜನಾಂಗದ ಮಹಿಳೆಯರು ಹಿಂದೆ ಮುಂದೆ ಯೋಚಿಸದೆ ಕೀಳುವರ್ತನೆ ತೋರಿರುವುದು ಖಂಡನೀಯ ಎಂದು ತಮ್ಮಯ್ಯ ಆಕ್ಷೇಪಿಸಿದ್ದಾರೆ.