ಮುಳ್ಳೂರು, ಜೂ. ೨೫: ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ಶನಿವಾರಸಂತೆ ಎಪಿಸಿಎಂಎಸ್, ಭಾರತೀಯ ಕಾಫಿ ಮಂಡಳಿ ಹಾಗೂ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಕಾಫಿ ಮತ್ತು ಕೃಷಿ ಬೆಳೆಗಾರರಿಗೆ ರಾಸಾಯನಿಕ ಮತ್ತು ಸಾವಯವ ಗೊಬ್ಬರ, ಜೈವಿಕ ಔಷಧಿ, ಕಾಫಿ, ಕಾಳುಮೆಣಸು, ಮತ್ತು ಕೃಷಿ ಬೆಳೆಗಳ ಕುರಿತಾಗಿ ಕೋರಮಂಡಲ್ ಸಂಸ್ಥೆಯ ಅಧಿಕಾರಿಗಳು, ಕಾಫಿ ಮಂಡಳಿ ಅಧಿಕಾರಿಗಳು ಕೃಷಿ ವಿಜ್ಞಾನಿಗಳಿಂದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ವಿಚಾರ ಸಂಕಿರಣವನ್ನು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್ ಉದ್ಘಾಟಿಸಿ, ನಂತರ ಮಾತನಾಡಿದ ಅವರು, ಬೆಳೆಗಾರರು ವಿಚಾರ ಸಂಕಿರಣದಲ್ಲಿ ಪಡೆದ ಮಾಹಿತಿಯನ್ನು ಸದ್ಬಳಕೆ ಮಾಡಿಕೊಂಡು ಅದರಂತೆ ಕೃಷಿ ಬೆಳೆ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ಕೋರಮಂಡಲ್ ಇಂಟರ್ ನ್ಯಾಷನಲ್ ಸಂಸ್ಥೆಯ ಹಿರಿಯ ಕೃಷಿ ತಜ್ಞಾಧಿಕಾರಿ ಕಿರಣ್ಕುಮಾರ್ ಮಾಹಿತಿ ನೀಡಿ ಮಣ್ಣಿಗೆ ಮತ್ತು ಕೃಷಿ ಬೆಳೆಗಳಿಗೆ ಪೌಷ್ಟಿಕಾಂಶ ಒಳಗೊಂಡAತಹ ರಸಗೊಬ್ಬರವನ್ನು ಕೊಡುವುದ್ದರಿಂದ ಬೆಳೆಯಲ್ಲಿ ಅಧಿಕ ಇಳುವರಿಯ ಜೊತೆಯಲ್ಲಿ ಮಣ್ಣಿನಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ ಎಂದರು.
ಸೋಮವಾರಪೇಟೆ ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ರಂಜಿತ್ಕುಮಾರ್ ಮಾಹಿತಿ ನೀಡಿ, ಕಾಫಿ ಬೆಳೆಗಾರರು ಮೂರು ವರ್ಷಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಗೊಬ್ಬರ ಬಳಸಬೇಕು ವಿಜ್ಞಾನಿಗಳು ನೀಡಿದ ಮಾಹಿತಿಯನ್ನು ಅನುಸರಿಸಿ ತೋಟವನ್ನು ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.
ಹಾಸನ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ನಾಗರಾಜ್ ಕೀಟ ಬಾಧೆ ಕುರಿತು ಮಾಹಿತಿ ನೀಡಿ ಕೃಷಿ ಬೆಳೆಗಳಿಗೆ ರಾಸಾಯಿನಿಕ ಗೊಬ್ಬರ, ಔಷಧಿ ಸಿಂಪಡಣೆಯಿAದ ಭೂಮಿ ಮತ್ತು ನಿಸರ್ಗ ನಾಶವಾಗುತ್ತದೆ ಈ ನಿಟ್ಟಿನಲ್ಲಿ ಸಾವಯವ ಗೊಬ್ಬರ ಮತ್ತು ಸಾವಯವ ಅಂಶ, ಪೌಷ್ಟಿಕಾಂಶ ಒಳಗೊಂಡಿರುವ ಗೊಬ್ಬರವನ್ನು ಬಳಸುವ ಮೂಲಕ ಸ್ವಲ್ಪ ಮಟ್ಟಿಗೆಯಾದರೂ ಪರಿಸರದ ಮೇಲಾಗುವ ಪರಿಣಾಮವನ್ನು ತಡೆಗಟ್ಟಬಹುದು ಎಂದರು
ವಿಚಾರ ಸಂಕಿರಣದಲ್ಲಿ ಕೋರಮಂಡಲ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ. ರಾಜಶೇಖರ್, ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಪರಮೇಶ್, ಸಿಇಓ ಶಿವರಾಜ್, ಕೋರಮಂಡಲ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.