ಮಡಿಕೇರಿ, ಜೂ. ೨೫: ಬಿದ್ದುಸಿಕ್ಕಿದ್ದ ಚಿನ್ನದ ನಾಣ್ಯವನ್ನು ಮಡಿಕೇರಿ ಸಂಚಾರಿ ಪೊಲೀಸರು ಮಾಲೀಕರ ಕೈಸೇರುವಂತೆ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸಮೀಪದ ರಸ್ತೆಯಲ್ಲಿ ಚಿನ್ನದ ಮೂರು ನಾಣ್ಯಗಳು ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಠಾಣೆಯ ಪೇದೆ ನಾಗರಾಜ್ ಅವರಿಗೆ ಬಿದ್ದು ಸಿಕ್ಕಿದೆ. ಇವುಗಳನ್ನು ಪೊಲೀಸ್ ಠಾಣೆಗೆ ತಂದು ವಿಷಯವನ್ನು ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿ ದ್ದಾರೆ. ಅನಂತರ ಕಳೆದುಕೊಂಡವರ ಹುಡುಕಾಟದ ಸಲುವಾಗಿ ಪೊಲೀಸ್ ಸಿಬ್ಬಂದಿ ವಿವಿಧ ವಾಟ್ಸಾö್ಯಪ್ ಗ್ರೂಪ್ಗಳಲ್ಲಿ ನಾಣ್ಯಗಳು ಬಿದ್ದು ಸಿಕ್ಕಿರುವ ಮಾಹಿತಿಯನ್ನು ಹಂಚಿಕೊAಡಿದ್ದಾರೆ.
ಇದನ್ನು ಗಮನಿ ಸಿದ ನಾಣ್ಯ ಕಳೆ ದುಕೊಂಡ ಮಡಿ ಕೇರಿಯ ಜ್ಯುವೆಲ್ಲರಿ ಅಂಗಡಿಯೊAದರ ಮಾಲೀಕ ಬಿ.ಸಿ. ಮೋಹನ್ ಅವರು ಠಾಣೆಗೆ ತೆರಳಿ ವಿಚಾರಿ ಸಿದ್ದು, ಪೊಲೀಸರು ದೃಢೀಕರಿಸಿ ನಂತರ ಕಳೆದುಕೊಂಡಿದ್ದ ನಾಣ್ಯವನ್ನು ಮಾಲೀಕ ಮೋಹನ್ ಅವರಿಗೆ ಠಾಣಾಧಿಕಾರಿ ಶ್ರೀಧರ್ ಒಪ್ಪಿಸಿದರು.
ಒಟ್ಟು ೪೫ ಸಾವಿರ ಮೌಲ್ಯದ ಚಿನ್ನದ ನಾಣ್ಯವನ್ನು ಉಡುಗೊರೆ ಯಾಗಿ ನೀಡಲು ತೆರಳುತ್ತಿರುವಾಗ ಬಿದ್ದು ಹೋಗಿದೆ ಎಂದು ಕಳೆದು ಕೊಂಡವರು ತಿಳಿಸಿದರು.