ಮಡಿಕೇರಿ, ಜೂ. ೨೪: ದಲಿತ ಸಂಘರ್ಷ ಸಮಿತಿ ಹಾಗೂ ಅಶೋಕಪುರದ ಟೀಂ ೧೪ ಸಂಘಟನೆ ವತಿಯಿಂದ ಶ್ರಮದಾನ ನಡೆಸಿ ೨೨ ಚೀಲ ತ್ಯಾಜವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ನಗರದ ಸ್ವಾಗತ ಕಮಾನಿಂದ ಫೀ.ಮಾ. ಕಾರ್ಯಪ್ಪ ವೃತ್ತದ ತನಕದ ರಸ್ತೆ ಬದಿಗಳಲ್ಲಿ ಬಿದ್ದಿದ್ದ ಕಸವನ್ನು ಜಿಟಿಜಿಟಿ ಮಳೆಯ ನಡುವೆಯೂ ಹೆಕ್ಕಿ ಶ್ರಮದಾನದಲ್ಲಿ ತೊಡಗಿಸಿಕೊಂಡರು. ಕನಿಷ್ಟ ೧೫ ದಿನಗಳಿಗೊಮ್ಮೆಯಾದರೂ ನಗರದ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಿ ಕಸ ಮುಕ್ತ ನಗರವನ್ನಾಗಿ ಮಾಡಲು ಶ್ರಮಿಸಲಾಗುವುದು. ಇದರೊಂದಿಗೆ ಜನರ ಸಮಸ್ಯೆಯನ್ನು ಆಲಿಸಿ ಸಂಬAಧಪಟ್ಟ ಇಲಾಖೆ, ಅಧಿಕಾರಿಗಳ ಗಮನ ಸೆಳೆದು ಪರಿಹಾರದ ಪ್ರಯತ್ನವನ್ನೂ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾಹಿತಿ ನೀಡಿದರು.
ಈ ಸಂದರ್ಭ ಡಾ. ಸೌಮ್ಯ ಪ್ರಕಾಶ್, ವೇಣು ಕಿಶೋರ್, ಟೀಂ ೧೪ ಸಂಘಟನೆಯ ಅಮಿತ್, ಪ್ರಜ್ವಲ್, ಎಂ.ಜಿ. ಸುನಿಲ್, ಭರತ್, ರಮೇಶ್, ಸೂರ್ಯ, ಕೌಶಿಕ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.