ಸೋಮವಾರಪೇಟೆ, ಜೂ. ೨೪: ಕಳೆದ ೭೫ ವರ್ಷಗಳ ಹಿಂದೆ ನಿರ್ಮಾಣಗೊಂಡು ನಂತರದ ದಿನಗಳಲ್ಲಿ ಸುಧಾರಣೆ ಕಾಣುತ್ತಾ ಬಂದಿರುವ ಶ್ರೀಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವವು, ಮೂರು ದಿನಗಳ ಕಾಲ ದೇವಾಲಯದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಭ್ರಮದಿAದ ಸಂಪನ್ನಗೊAಡಿತು.
ಕಳೆದ ತಾ. ೨೨ರಿಂದ ದೇವಾಲಯದಲ್ಲಿ ಧಾರ್ಮಿಕ ಕಾರ್ಯಗಳು ವೇದ ಬ್ರಹ್ಮ ಎಂ.ವಿ. ಕೃಷ್ಣಮೂರ್ತಿ ಭಟ್ ಹಾಗೂ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ಪೌರೋಹಿತ್ಯದಲ್ಲಿ ನಡೆದವು.
ಸಮ ಸಮಾಜ ನಿರ್ಮಾಣ ಅವಶ್ಯ: ಶ್ರೀ ಸೋಮೇಶ್ವರ ದೇವಾಲಯ ಹಾಗೂ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಅಮೃತ ಮಹೋತ್ಸವ ಸಭಾ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ ಮಾತನಾಡಿ, ಸಮ ಸಮಾಜ ನಿರ್ಮಾಣದಲ್ಲಿ ಎಲ್ಲರ ಕೊಡುಗೆ ಅಗತ್ಯವಾಗಿದೆ ಎಂದರು.
ಪುರಾತನ ಪದ್ಧತಿಗಳು ಹಾಗೂ ಪ್ರಗತಿಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕು. ಆಧುನಿಕತೆ ಮತ್ತು ಆವಿಷ್ಕಾರಗಳ ಎದುರು ಪ್ರಾಚೀನತೆಯ ನೆನಪುಗಳು ಕಳೆದು ಹೋಗಬಾರದು. ಸ್ವಾರ್ಥದ ಪ್ರಾಬಲ್ಯಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಆಧುನೀಕತೆ ಯೂ ಬೇಕು; ಪ್ರಾಚೀನತೆಯೂ ಉಳಿಯಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಣ್ಣ ಸಮುದಾಯಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಮೂಲಕ ಹಾಗೂ ವೈಯಕ್ತಿಕವಾಗಿಯೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಾಹಿತಿ ನರಹಳ್ಳಿ ಡಾ. ಬಾಲಸುಬ್ರಮಣ್ಯ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಇಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ಇಂದ್ರೀಯ ಗಳಿಗೆ ಚೈತನ್ಯ ತುಂಬುತ್ತವೆ. ಸಾತ್ವಿಕ ಶಕ್ತಿ ನಿಷ್ಕಿçಯವಾದರೆ ತಾಮಸ ಶಕ್ತಿಗಳು ವಿಜೃಂಭಿಸುತ್ತವೆ. ಈ ಹಿನ್ನೆಲೆ ಒಳ್ಳೆತನ ಇರುವವರು ಶಕ್ತಿವಂತರಾಗಿಯೂ ಇರಬೇಕಾದ ಅನಿವಾರ್ಯತೆಯಿದೆ ಎಂದರು.
ಜವಾಬ್ದಾರಿಯಾಗಿದೆ. ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಮೂಲಕ ಹಾಗೂ ವೈಯಕ್ತಿಕವಾಗಿಯೂ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಾಹಿತಿ ನರಹಳ್ಳಿ ಡಾ. ಬಾಲಸುಬ್ರಮಣ್ಯ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಇಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ಇಂದ್ರೀಯ ಗಳಿಗೆ ಚೈತನ್ಯ ತುಂಬುತ್ತವೆ. ಸಾತ್ವಿಕ ಶಕ್ತಿ ನಿಷ್ಕಿçಯವಾದರೆ ತಾಮಸ ಶಕ್ತಿಗಳು ವಿಜೃಂಭಿಸುತ್ತವೆ. ಈ ಹಿನ್ನೆಲೆ ಒಳ್ಳೆತನ ಇರುವವರು ಶಕ್ತಿವಂತರಾಗಿಯೂ ಇರಬೇಕಾದ ಅನಿವಾರ್ಯತೆಯಿದೆ ಎಂದರು.
ಅಗತ್ಯವಿದೆ. ಈ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಹೀಗಾದಾಗ ಸಣ್ಣಪುಟ್ಟ ಜನಾಂಗಗಳು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದರು.
ದೇವಾಲಯಗಳು ಮಾನಸಿಕ ನೆಮ್ಮದಿಯ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಸೋಮೇಶ್ವರ ದೇವಾಲಯ ಅಭಿವೃದ್ಧಿಗೆ ಈ ಹಿಂದೆ ೧೨ ಲಕ್ಷಕ್ಕೂ ಅಧಿಕ ಅನುದಾನ ಒದಗಿಸಲಾಗಿತ್ತು ಎಂದು ಸ್ಮರಿಸಿದ ಅವರು, ಆಚಾರ, ವಿಚಾರ, ಸಂಸ್ಕೃತಿಗಳ ಉಳಿವು ಮತ್ತು ಜಾಗೃತಿ ದೇವಾಲಗಳಿಂದ ಆಗುತ್ತದೆ ಎಂದರು. ಪ್ರಪಂಚದ ಸ್ವರ್ಗ ಕೊಡಗು. ಈ ನಿಟ್ಟಿನಲ್ಲಿ ಕೊಡಗಿನವರು ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡಬಾರದು ಎಂದು ಇದೇ ಸಂದರ್ಭ ಕಿವಿಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ವಹಿಸಿದ್ದರು. ಪ್ರಮುಖರಾದ ವಿನೋದ್ ಶಿವಪ್ಪ, ಹೆಚ್.ಟಿ. ಅನಿಲ್, ಉದಯ್ ಈಶ್ವರನ್, ದೇವೀ ಬಳಗದ ಅಧ್ಯಕ್ಷೆ ರತಿ ನಂದಕುಮಾರ್, ಹಿರಿಯ ಕಲಾವಿದೆ ಚಿತ್ರಕಲಾ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.