ಶ್ರೀಮಂಗಲ, ಜೂ. ೨೪ : ಪ್ರತಿಭಟನೆ ವೇಳೆ ಬಿಜೆಪಿ ಪಕ್ಷದ ಮುಖಂಡರಿAದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಣಕು ಶವಯಾತ್ರೆ ಹಾಗೂ ಪ್ರತಿಕೃತಿ ದಹನ ಮಾಡಿದ್ದನ್ನು ಖಂಡಿಸಿ ಬಿರುನಾಣಿಯಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿ, ಬಿಜೆಪಿಯಿಂದ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಮಾತನಾಡಿ ಬಿಜೆಪಿ ಕೀಳು ಮಟ್ಟದ ಪ್ರತಿಭಟನೆಯನ್ನು ಪಕ್ಷ ಮತ್ತು ಜಾತಿ ಬೇಧವಿಲ್ಲದೆ ಖಂಡಿಸುತ್ತಿದ್ದು, ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ತೀವ್ರ ಹಿನ್ನಡೆ ಮತ್ತು ಮುಜುಗರ ಅನುಭವಿಸುತ್ತಿದ್ದಾರೆ. ಕೊಡಗಿನಲ್ಲಿ ಯಾವುದೇ ಒಂದು ಸಮಸ್ಯೆ ಎದುರಾದಾಗ ಸರ್ಕಾರದ ಮಟ್ಟದಲ್ಲಿ ಹಿಡಿತ ಹೊಂದಿರುವ ಎ.ಎಸ್. ಪೊನ್ನಣ್ಣ ಅವರ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಜಿಲ್ಲೆಯ ಜನತೆ ಧೈರ್ಯ ಹೊಂದಿದ್ದಾರೆ. ಕಳೆದ ಒಂದು ವರ್ಷಗಳಲ್ಲಿ ಕಳೆದ ೨೫ ವರ್ಷಗಳಲ್ಲಿ ಆಗದಂತಹ ಕೆಲಸಗಳು ಜಿಲ್ಲೆಯಲ್ಲಿ ಆಗಿವೆ. ಇದಕ್ಕೆ ಗೋಣಿಕೊಪ್ಪ ಬಸ್ ನಿಲ್ದಾಣ, ವೀರಾಜಪೇಟೆ ಕಾವೇರಿ ಕಾಲೇಜು ಜಾಗಕ್ಕೆ ದಾಖಲಾತಿ, ನೆನೆಗುದಿಗೆ ಬಿದ್ದಿದ್ದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದು, ಭಾಗಮಂಡಲ ಕಾವೇರಿ ಕ್ಷೇತ್ರದಲ್ಲಿ ಕಾಯಕಲ್ಪ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಅವರ ಅಣಕು ಶವಯಾತ್ರೆ ಹಾಗೂ ಪ್ರತಿಕೃತಿಗೆ ದಹನ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆ ಮಾಡುವುದಾದರೆ ಬಿಜೆಪಿ ಅಧಿಕಾರಕ್ಕೆ ಕೇಂದ್ರದಲ್ಲಿ ಬಂದನAತರ ರೂ.೪೦೦ ಇದ್ದ ಗ್ಯಾಸ್ ಬೆಲೆ ೧೨೦೦ ತಲುಪಿದಾಗ, ರೂ. ೩೫ ರಿಂದ ರೂ. ೪೦ ಇದ್ದ ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾದಾಗ ಹಾಗೆ ರಸಗೊಬ್ಬರ ದರ ಎರಡು ಮೂರು ಪಟ್ಟು ಹೆಚ್ಚಾದಾಗ ಪ್ರತಿಭಟನೆ ಮಾಡಬೇಕಿತ್ತು. ಹಾಗೆಯೇ ರೈತರು ಬೆಳೆದ ಉತ್ಪನ್ನಗಳಿಗೆ ಎರಡು ಪಟ್ಟು ಬೆಲೆ ಹೆಚ್ಚಿಸುವ ವಾಗ್ದಾನ ಮಾಡಿ ಈಡೇರಿಸದ ಬಿಜೆಪಿ ಸರಕಾರದ ವಿರುದ್ಧ ಮಾಡಲಿ ಎಂದು ಕಿಡಿಕಾರಿದರು.

ಬಿಜೆಪಿಯ ಮುಖಂಡರುಗಳು ಪೊನ್ನಣ್ಣ ಅವರ ಕ್ಷಮೆಯಾಚಿಸ ಬೇಕೆಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ ಮಾತನಾಡಿ, ಪೊನ್ನಣ್ಣ ವಿರುದ್ಧ ನಡೆಸಿದ ಪ್ರತಿಭಟನೆ ಖಂಡನೀಯ ಎಂದರು.

ತಾ.ಪA. ಮಾಜಿ ಸದಸ್ಯ ಬೊಳ್ಳೇರ ಅಪ್ಪುಟ ಪೊನ್ನಪ್ಪ ಮಾತನಾಡಿ, ಪೊನ್ನಣ್ಣ ಅವರು ಅಲ್ಪ ಅವಧಿಯಲ್ಲಿ ನಡೆಸುತ್ತಿರುವ ಕಾರ್ಯವೈಖರಿ, ಅಭಿವೃದ್ಧಿ ಕಾರ್ಯ ನೋಡಿ ಬಿಜೆಪಿ ಮುಖಂಡರು ಹತಾಶೆಗೊಂಡಿದ್ದಾರೆ. ಎಂದು ಟೀಕಿಸಿದರು.

ಕರ್ತಮಾಡ ನಂದ ಮಾತನಾಡಿ, ಜಿಲ್ಲೆಯಲ್ಲಿ ಬಿಎಸ್‌ಎನ್‌ಲ್ ಟವರ್‌ಗಳಲ್ಲಿ ದೋಷ ಉಂಟಾಗಿದೆ. ಇದನ್ನು ಸಂಸದರ ಮೂಲಕ ಬಿಜೆಪಿಯವರು ಸರಿಪಡಿಸಲಿ ಎಂದು ಸವಾಲು ಹಾಕಿದರು

ಮಳೆಯ ನಡುವೆ ಕೊಡೆ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ಸೇವಾನಂದ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು