‘ಯೋಗ ಚಿತ್ತ ವೃತ್ತಿ ನಿರೋಧ’ ಎಂಬ ಸಂಸ್ಕೃತದ ನುಡಿಗಟ್ಟಿನಂತೆ ಯೋಗವು ಮನಸ್ಸಿನ ಮಾರ್ಪಾಡುಗಳು ಅಥವಾ ಏರಿಳಿತಗಳನ್ನು ನಿಯಂತ್ರಿಸುತ್ತದೆ. ಯೋಗವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಇದು ನಮ್ಮ ಮಾನಸಿಕ, ದೈಹಿಕ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ.

ಅಷ್ಟಾಂಗ ಯೋಗದ ಒಂದು ಭಾಗ ಪ್ರಾಣಾಯಾಮ. ಇದನ್ನು ಸಾಮಾನ್ಯವಾಗಿ ಉಸಿರಾಟದ ನಿಯಂತ್ರಣ ಎಂದು ಕರೆಯಬಹುದು. ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ನಮ್ಮ ಶ್ವಾಸಕೋಶದಲ್ಲಿರುವ ಸತ್ತ ಜಾಗವನ್ನು (ಆeಚಿಜ sಠಿಚಿಛಿe) ಕಡಿಮೆಮಾಡಬಹುದು. ಪ್ರಾಣಾಯಾಮದಲ್ಲಿ ಹಲವು ರೀತಿಯ ವಿಧಗಳಿವೆ. ಅವುಗಳಲ್ಲಿ ಒಂದು ಭ್ರಾಮರಿ ಪ್ರಾಣಾಯಾಮ ಊummiಟಿg bee bಡಿeಚಿಣh)

ಭ್ರಾಮರಿ ಪ್ರಾಣಾಯಾಮ

ವಿಧಾನ : ಮೊದಲಿಗೆ ಯಾವುದಾದರೂ ಒಂದು ಆರಾಮದಾಯಕ ಧ್ಯಾನ ಆಸನದಲ್ಲಿ ಕುಳಿತುಕೊಳ್ಳಿ (ಪದ್ಮಾಸನ, ಸಿದ್ಧಾಸನ ಅಥವಾ ಸುಕಾಸನ) ಕೈಗಳನ್ನು ಚಿನ್ ಮುದ್ರದಲ್ಲಿ ಇರಿಸಿ.

ಇಡೀ ದೇಹವನ್ನು ವಿಶ್ರಾಂತಿಸಿ, ನಿಧಾನವಾಗಿ ಎರಡು ಕೈಗಳನ್ನು ಏರಿಸಿ, ಕಿವಿಯನ್ನು ನಿಮ್ಮ ತೋರು ಬೆರಳಿನಿಂದ ಮುಚ್ಚಿ (ಸುಚಿ ಮುದ್ರ). ನಂತರ ನಿಧಾನವಾಗಿ ಉಸಿರನ್ನು ಮೇಲಕ್ಕೆ ತೆಗೆದುಕೊಳ್ಳುತ್ತಾ, ಉಸಿರು ಬಿಡುವಾಗ ‘ಮ’ಕಾರವನ್ನು (ಊummiಟಿg souಟಿಜ) ಉಚ್ಚರಿಸಿ. ‘ಮ’ಕಾರ ನಿರಂತರವಾಗಿರಬೇಕು, ಹೀಗೆ ೫-೧೦ ಬಾರಿ ಅಭ್ಯಾಸ ಮಾಡಿ.

ಈ ಪ್ರಾಣಾಯಾಮವು ನಮ್ಮ ದೇಹದ ಆಜ್ಞಾ ಚಕ್ರವನ್ನು ಎಚ್ಚರಿಸುತ್ತದೆ. ಭ್ರಾಮರಿ ಪ್ರಾಣಾಯಾಮವನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಅಭ್ಯಾಸ ಮಾಡಬಹುದು. ಇದನ್ನು ಅಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಒತ್ತಡ, ಕೋಪ, ಆತಂಕ ಮತ್ತು ನಿದ್ರಾಹೀನತೆಯನ್ನು ನಿವಾರಿಸಬಹುದು. ಪ್ರಾಣಾಮಾಮವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ನಮ್ಮ ಜೀವಿತಾವಧಿ ವಿಸ್ತರಿಸುತ್ತದೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ದೂರ ಮಾಡುತ್ತದೆ.

ಪ್ರತಿದಿನ ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕ ನಮ್ಮ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ‘ನಿತ್ಯ ಮಾಡುತ್ತಿದ್ದರೆ ಯೋಗ, ರೋಗಕ್ಕಿಲ್ಲ ನಿಮ್ಮ ದೇಹದಲ್ಲಿ ಜಾಗ’ ‘ಯೋಗ ಮಾಡಿ ರೋಗ ದೂರಮಾಡಿ’ ಹೀಗೆ, ರೋಗ ಮುಕ್ತ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಕೈ ಜೋಡಿಸೋಣ.

- ಪ್ರಿಯಾಂಕ ಚೆರಿಯಮನೆ

ಬಿಎನ್‌ವೈಎಸ್ ವಿದ್ಯಾರ್ಥಿನಿ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ, ಮೈಸೂರು.

ಮೊ. ೯೩೮೦೧೫೬೦೪೨

ನನಗಾಗಿ, ನಮ್ಮೆಲ್ಲರಿಗಾಗಿ ಯೋಗ...

ಕಳೆದ ೨೫ ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವೆನು ಹಾಗೂ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡಿ ಅವರಲ್ಲೂ ಯೋಗದ ಬಗ್ಗೆ ಪ್ರಾಯೋಗಿಕ ಅನುಭವ ಹಂಚಿ ಕೊಂಡಿರುವೆನು. ಯೋಗವನ್ನು ಪ್ರತಿದಿನ ಮಾಡಬೇಕಾಗಿದ್ದು, ಅದರ ಸಂಪೂರ್ಣ ಲಾಭ ಪಡೆಯಬಹುದು.

ಯೋಗದಿಂದ ದೈಹಿಕ, ಮಾನಸಿಕ, ಅಧ್ಯಾತ್ಮಿಕ, ಸಂಘಟನೆ, ಸಹಕಾರ ಇನ್ನೂ ಅನೇಕ ಲಾಭಗಳನ್ನು ಪಡೆಯಬಹುದು. ಜ್ಞಾಪಕ ಶಕ್ತಿ, ಉಸಿರಾಟ ಕ್ರಿಯೆ, ಏಕಾಗ್ರತೆ ವೃದ್ಧಿಸುವಲ್ಲಿ ಯೋಗ ಸಹಕಾರಿಯಾಗಿದೆ.

ಸೂರ್ಯ ನಮಸ್ಕಾರ, ಪ್ರಾಣಾಯಾಮ, ಯೋಗ ನಮಸ್ಕಾರ, ಗುರುನಮಸ್ಕಾರ, ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಮಲಗಿ ಮಾಡುವ ಆಸನಗಳನ್ನು ಪ್ರತಿ ದಿನ ೧ ಅಥವಾ ೧ ೧/೨ ಗಂಟೆ ಕಾಲ ಮಾಡಿದರೆ, ಆರೋಗ್ಯ ಸುಧಾರಿಸುತ್ತದೆ.

ಸೂರ್ಯ ನಮಸ್ಕಾರ ಒಂದು ಪರಿಪೂರ್ಣ ವ್ಯಾಯಾಮ ನೀಡುವ ಯೋಗಿಕ ಕ್ರಿಯೆ. ವಿವಿಧ ಆಸನ ಬಂಧ - ಮುದ್ರೆಗಳ ಸಮುಚ್ಚಯ ಸರಳ ಸಹಜ ಉಸಿರಾಟಕ್ಕೆ ಅವಕಾಶ ಕಲ್ಪಿಸುತ್ತದೆ. ಇದರಲ್ಲಿ ಎಲ್ಲಾ ಸ್ನಾಯುಗಳಿಗೂ, ಕೀಲುಗಳಿಗೂ ವ್ಯಾಯಾಮ ಸಿಗುವುದಲ್ಲದೆ ನಿರ್ನಾಳ ಗ್ರಂಥಿಗಳಿಗೂ, ಸೂಕ್ಷö್ಮ ಅವಯವಗಳಾದ ಲಿವರ್, ಕಿಡ್ನಿ, ಗ್ರಂಥಿಗಳಿಗೂ ಸೂಕ್ಷö್ಮ ಅವಯವÀಗಳಾದ ಲಿವರ್, ಕಿಡ್ನಿ, ಯಕೃತ್ ಮುಂತಾದವುಗಳು ಪುನಶ್ಚೇತನಗೊಳ್ಳುತ್ತದೆ. ಹಾರ್ಮೋನುಗಳು ಸರಿಯಾಗಿ ಬಿಡುಗಡೆಗೊಂಡು ಆರೋಗ್ಯ ವೃದ್ಧಿಸುವುದು. ಸೂರ್ಯೋದಯ - ಆಸ್ತಮ ಸಮಯದಲ್ಲಿ ಸೌರಚೈತನ್ಯ ವಿಫುಲವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಅಭ್ಯಾಸ ವಿಶೇಷ ಫಲದಾಯಕವಾಗುವುದು.

ಮಂತ್ರ

ಓA ಹಿರಣ್ಮಯೇನ ಪಾತ್ರೇಣ| ಸತ್ಯಸ್ಯಾಪಿ ಹಿತಂ ಮುಖಂ| ತತ್ವಂ ಪೂಪನ್ ಅಪಾವೃಣು| ಸತ್ಯ ಧರ್ಮಾಯ ದೃಷ್ಟಂiೆ| ಓಂ ಶಾಂತಿ ಶಾಂತಿ ಶಾಂತಿ ಹೀ...

ನಂತರ ಸೂರ್ಯನ ಒಂದೊAದು ನಾಮಸ್ಮರಣೆಯೊಂದಿಗೆ ೧೩ ನಮಸ್ಕಾರಗಳನ್ನು ಮಾಡುವ ವಾಡಿಕೆ ಬೆಳೆದುಬಂದಿವೆ.

ಓA ಹ್ರಾಂ ಮಿತ್ರಾಯನಮಃ

ಓಂ ಹ್ರೀಂ ರವೆಯೇ ನಮಃ

ಓಂ ಹ್ರೂಂ ಸೂರ್ಯಾಯ ನಮಃ

ಓಂ ಹ್ವೆç ಭಾನವೇ ನಮಃ

ಓಂ ಹ್ರೌಂ ಖಗಾಯ ನಮಃ

ಓಂ ಹ್ರಃ ಪೂಷ್ಣೇ ನಮಃ

ಓಂ ಹ್ರಾಂ ಹಿರಣ್ಯ ಗರ್ಭಾಯ ನಮಃ

ಓಂ ಹ್ರೀಂ ಮರೀಚಯೇ ನಮಃ

ಓಂ ಹ್ರೂಂ ಆದಿತ್ಯಾಯ ನಮಃ

ಓಂ ಹ್ರೆöÊಂ ಸವಿತ್ರೇ ನಮಃ

ಓಂ ಹ್ರೌಂ ಅಕಾರ್ಯ ನಮಃ

ಓಂ ಹ್ರಃ ಭಾಸ್ಕರಾಯ ನಮಃ

ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ ಇನ್ನು ಆಸನಗಳು, ಪ್ರಾಣಾಯಾಮ ಮಾಡುವಾಗ ಕೂಡ ಮಂತ್ರ ಹೇಳಿ ಪ್ರಾರಂಭಿಸಲಾಗುತ್ತದೆ.

ಮೇಲಿನ ಅಂಶಗಳೊAದಿಗೆ ನಾನು ಯೋಗಾಭ್ಯಾಸ ಮಾಡುತ್ತಿದ್ದು, ನಿವೃತ್ತಿ ಜೀವನದಲ್ಲಿ ಕೆಲವು ಶಾಲೆಗಳಿಗೆ ಹೋಗಿ ಯೋಗವನ್ನು ಹೇಳಿಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಂಡಿರುವೆನು. ಯೋಗದಲ್ಲಿ ಅನೇಕ ಅಂಶಗಳಿಗೆ ನನ್ನ ಕೆಲವು ಅನುಭವ ಹಂಚಿಕೆ ಮಾತ್ರ ಇದು. ಸಾಧನೆಕೆ ಮಿಗಿಲಾದುದು ಯಾವುದು ಇಲ್ಲ.

ನನಗಾಗಿ, ನಮಗಾಗಿ, ನಮ್ಮೆಲ್ಲರಿಗಾಗಿ ಯೋಗ. ಉತ್ತಮ ಆಹಾರ, ವಿಹಾರ, ವಿಚಾರಗಳು ನಮ್ಮ ದೈಹಿಕ, ಮಾನಸಿಕ ಅಧ್ಯಾತ್ಮಿಕ ಆರೋಗ್ಯಕರ ಅಂಶಗಳು.

-ವಿ.ಕೆ. ಲಲಿತ, ನಿವೃತ್ತ, ಹಿರಿಯ ಮುಖ್ಯ ಶಿಕ್ಷಕರು, ಯೋಗ ಶಿಕ್ಷಕರು, ವೀರಾಜಪೇಟೆ. ಮೊ.೯೪೪೯೨೭೬೫೪೭

ಮಂತ್ರ

ಓA ಹಿರಣ್ಮಯೇನ ಪಾತ್ರೇಣ| ಸತ್ಯಸ್ಯಾಪಿ ಹಿತಂ ಮುಖಂ| ತತ್ವಂ ಪೂಪನ್ ಅಪಾವೃಣು| ಸತ್ಯ ಧರ್ಮಾಯ ದೃಷ್ಟಂiÉ| ಓಂ ಶಾಂತಿ ಶಾಂತಿ ಶಾಂತಿ ಹೀ...

ನಂತರ ಸೂರ್ಯನ ಒಂದೊAದು ನಾಮಸ್ಮರಣೆಯೊಂದಿಗೆ ೧೩ ನಮಸ್ಕಾರಗಳನ್ನು ಮಾಡುವ ವಾಡಿಕೆ ಬೆಳೆದುಬಂದಿವೆ.

ಓA ಹ್ರಾಂ ಮಿತ್ರಾಯನಮಃ

ಓಂ ಹ್ರೀಂ ರವೆಯೇ ನಮಃ

ಓಂ ಹ್ರೂಂ ಸೂರ್ಯಾಯ ನಮಃ

ಓಂ ಹ್ವೆç ಭಾನವೇ ನಮಃ

ಓಂ ಹ್ರೌಂ ಖಗಾಯ ನಮಃ

ಓಂ ಹ್ರಃ ಪೂಷ್ಣೇ ನಮಃ

ಓಂ ಹ್ರಾಂ ಹಿರಣ್ಯ ಗರ್ಭಾಯ ನಮಃ

ಓಂ ಹ್ರೀಂ ಮರೀಚಯೇ ನಮಃ

ಓಂ ಹ್ರೂಂ ಆದಿತ್ಯಾಯ ನಮಃ

ಓಂ ಹ್ರೆöÊಂ ಸವಿತ್ರೇ ನಮಃ

ಓಂ ಹ್ರೌಂ ಅಕಾರ್ಯ ನಮಃ

ಓಂ ಹ್ರಃ ಭಾಸ್ಕರಾಯ ನಮಃ

ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ ಇನ್ನು ಆಸನಗಳು, ಪ್ರಾಣಾಯಾಮ ಮಾಡುವಾಗ ಕೂಡ ಮಂತ್ರ ಹೇಳಿ ಪ್ರಾರಂಭಿಸಲಾಗುತ್ತದೆ.

ಮೇಲಿನ ಅಂಶಗಳೊAದಿಗೆ ನಾನು ಯೋಗಾಭ್ಯಾಸ ಮಾಡುತ್ತಿದ್ದು, ನಿವೃತ್ತಿ ಜೀವನದಲ್ಲಿ ಕೆಲವು ಶಾಲೆಗಳಿಗೆ ಹೋಗಿ ಯೋಗವನ್ನು ಹೇಳಿಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಂಡಿರುವೆನು. ಯೋಗದಲ್ಲಿ ಅನೇಕ ಅಂಶಗಳಿಗೆ ನನ್ನ ಕೆಲವು ಅನುಭವ ಹಂಚಿಕೆ ಮಾತ್ರ ಇದು. ಸಾಧನೆಕೆ ಮಿಗಿಲಾದುದು ಯಾವುದು ಇಲ್ಲ.

ನನಗಾಗಿ, ನಮಗಾಗಿ, ನಮ್ಮೆಲ್ಲರಿಗಾಗಿ ಯೋಗ. ಉತ್ತಮ ಆಹಾರ, ವಿಹಾರ, ವಿಚಾರಗಳು ನಮ್ಮ ದೈಹಿಕ, ಮಾನಸಿಕ ಅಧ್ಯಾತ್ಮಿಕ ಆರೋಗ್ಯಕರ ಅಂಶಗಳು.

-ವಿ.ಕೆ. ಲಲಿತ, ನಿವೃತ್ತ, ಹಿರಿಯ ಮುಖ್ಯ ಶಿಕ್ಷಕರು, ಯೋಗ ಶಿಕ್ಷಕರು, ವೀರಾಜಪೇಟೆ. ಮೊ.೯೪೪೯೨೭೬೫೪೭