ಸಿದ್ದಾಪುರ, ಜೂ. ೨೪: ನಾಯಿಯ ಸಮಯಪ್ರಜ್ಞೆಯಿಂದ ಕಾಡಾನೆ ದಾಳಿಯಂದ ವ್ಯಕ್ತಿ ಪಾರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಬರಡಿ ನಿವಾಸಿ, ಕಾರ್ಮಿಕ ವಿಶ್ವನಾಥ್ (೬೫) ಎಂಬವರು ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಫಿ ತೋಟದಿಂದ ದಿಢೀರನೆ ಕಾಡಾನೆ ಎದುರಾಗಿದೆ. ಗಿಡಗಳ ಮಧೆೆ್ಯ ಆನೆಗೆ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಆನೆಯು ಸೊಂಡಿಲಿನಿAದ ಕಾರ್ಮಿಕನನ್ನು ದೂಡಿದೆ. ಈ ವೇಳೆ ಕಾರ್ಮಿಕನೊಂದಿಗಿದ್ದ ಅವರ ಸಾಕು ನಾಯಿ ಕಾಡಾನೆಯ ವಿರುದ್ಧ ಬೊಗಳಿದೆ. ಕಾರ್ಮಿಕನ ಮೇಲೆ ದಾಳಿಗೆ ಮುಂದಾದಾಗ ನಾಯಿ ಬೊಗಳಿದ ಹಿನ್ನೆಲೆಯಲ್ಲಿ ಕಾಡಾನೆಯು ನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ದಾಳಿಗೊಳಗಾದ ವಿಶ್ವನಾಥ ಪ್ರಾಣ ಉಳಿಸಿಕೊಳ್ಳಲು ಕುಂಟುತ್ತಾ ಮನೆ ಸೇರಿದ್ದಾರೆ. ಕಾಡಾನೆಯು ಸೊಂಡಿಲಿನಿAದ ದೂಡಿದ ಪರಿಣಾಮ ಕಾರ್ಮಿಕ ಸಮೀಪದ ಮರದ ಬುಡಕ್ಕೆ ಬಿದ್ದಿದ್ದಾರೆ. ಪರಿಣಾಮ ಕಾಲು ಮತ್ತು ಎದೆಗೆ ತೀವ್ರವಾದ ಪೆಟ್ಟಾಗಿದೆ. ಘಟನೆಯನ್ನು ಮನೆಯಲ್ಲಿ ವಿವರಿಸಿದ್ದು, ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಅರಣ್ಯ ಇಲಾಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.