ಸಿದ್ದಾಪುರ, ಜೂ. ೨೩: ಕಾಡಾನೆ ದಾಳಿಗೆ ಮನೆಯ ಮೇಲ್ಛಾವಣಿ ಸೇರಿದಂತೆ ಸಾಮಗ್ರಿಗಳು ಹಾನಿಗೊಳಗಾದ ಘಟನೆ ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬರಡಿಯಲ್ಲಿ ನಡೆದಿದೆ.

ಶನಿವಾರ ತಡರಾತ್ರಿ ಬರಡಿ ನಿವಾಸಿ ರಾಶಿದಾ ಎಂಬವರ ಮನೆ ಹಿಂಬಾಗದಲ್ಲಿ ಕಾಣಿಸಿಕೊಂಡ ಕಾಡಾನೆ ಸ್ಥಳದಲ್ಲಿದ್ದ ಬಾಳೆಗಿಡಗಳನ್ನು ನಾಶಮಾಡಿದೆ. ಅಲ್ಲದೆ ಮನೆಯ ಹಿಂಬದಿಯ ಕೋಣೆಯ ಮೇಲ್ಛಾವಣಿಗೆ ಹಾನಿಗೊಳಿಸಿದೆ. ಅಲ್ಲದೆ ಸ್ಥಳದಲ್ಲಿದ್ದ ಸಾಮಗ್ರಿಗಳನ್ನು ನಾಶಪಡಿಸಿದೆ. ಸ್ಥಳಕ್ಕೆ ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ.