ಸೋಮವಾರಪೇಟೆ, ಜೂ. ೨೨: ಇಲ್ಲಿನ ವಿರಕ್ತ ಮಠದ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ವರದ ಶಂಕರ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘದ ವತಿಯಿಂದ ಮಠದ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ವರದ ಶಂಕರ ಪೂಜೆ ಶಾಸ್ತೊçÃಕ್ತವಾಗಿ ಜರುಗಿತು.

ಸಂಘದ ಕಾರ್ಯದರ್ಶಿ ಬಸವ ಕುಮಾರ ಶಾಸ್ತಿç ಪುರೋಹಿತ್ವದಲ್ಲಿ ಅರ್ಚನೆ, ಅಷ್ಟೋತ್ತರ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಹಿರೇಮಠ್ ಅವರು, ನಾಡಿನೆಲ್ಲೆಡೆ ಸುಭಿಕ್ಷೆ ನೆಲೆಸಬೇಕು.

ಶಾಂತಿ, ನೆಮ್ಮದಿ ಇರಬೇಕು. ಕಾಲ ಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಆಗಬೇಕು ಎಂದು ಲೋಕ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಲಾಗಿದೆ ಎಂದರು.

ಸAಘದ ಉಪಾಧ್ಯಕ್ಷ ಅಮ್ಮತ್ತಿ ಮಹೇಶ್, ಖಜಾಂಚಿ ಅಭಿಮಠ ಮಹೇಶ್, ಪದಾಧಿಕಾರಿಗಳಾದ ಚಂದ್ರಶೇಖರ್, ವೀರಯ್ಯ, ನಂದೀಶ್, ತ್ರಿಶಂಕು ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಅರ್ಚಕರುಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.