ಕೂಡಿಗೆ, ಜೂ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು.

ಸಾರ್ವತ್ರಿಕ ಚುನಾವಣೆಯಂತೆ ಮಾದರಿ ಇ.ವಿ.ಎಂ.ನಲ್ಲಿ ಮಕ್ಕಳು ಬಟನ್ ಒತ್ತಿ ಮತವನ್ನು ಚಲಾಯಿಸಿ, ತಮ್ಮ ಮತದಾನದ ಹಕ್ಕು ಚಲಾವಣೆ ಮಾಡಿ ವಿನೂತನ ಅನುಭವ ಪಡೆದರು. ಮುಖ್ಯ ಶಿಕ್ಷಕರ ಮಾರ್ಗದರ್ಶನ ದಲ್ಲಿ ಈ ಪ್ರಕ್ರಿಯೆ ನಡೆಯಿತು. ಮತದಾನದ ಸಂದರ್ಭ ಡಯಟ್ ಉಪನ್ಯಾಸಕ ಸಿದ್ದೇಶ್ ಕುಮಾರ್ ಉಪಸ್ಥಿತರಿದ್ದರು. ೩ ದಿನದ ನಂತರ ಮತ ಎಣಿಕೆಯ ಕಾರ್ಯವನ್ನು ಕೂಡಿಗೆ ಕ್ಲಸ್ಟರ್‌ನ ಸಿ.ಆರ್.ಪಿ. ಶಾಂತಕುಮಾರ್ ನೆರವೇರಿಸಿದರು. ಚುನಾಯಿತರಾದ ಮಕ್ಕಳಿಗೆ ಪ್ರಮಾಣ ವಚನವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಬೋಧಿಸಿದರು. ಮತದಾನದಲ್ಲಿ ಚುನಾವಣಾ ಅಧಿಕಾರಿ ಗಳಾಗಿ ಮುಖ್ಯ ಶಿಕ್ಷಕಿ ರೇಣುಕಾ, ಸಹ ಶಿಕ್ಷಕರಾದ ಆರೀಫಾ, ಗಾಯತ್ರಿ, ವೀಣಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸುಂದರ್, ಮಧುಸೂದನ್. ಮಿಥುನ್, ಪೊಲೀಸ್ ತಂಡವಾಗಿ ವಿದ್ಯಾರ್ಥಿ ಸಂಪ್ರೀತ್ ಭಾಗವಹಿಸಿದ್ದರು.