ಮಡಿಕೇರಿ, ಜೂ. ೨೨: ಸ್ಥಗಿತಗೊಂಡಿರುವ ಮಡಿಕೇರಿ-ಕಿಕ್ಕರಳ್ಳಿ ಬಸ್ ಮಾರ್ಗವನ್ನು ಪುನರಾರಂಭಿಸುವAತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಡಿಕೇರಿಯಿಂದ ಬೆಳಿಗ್ಗೆ ೧೦.೩೦ ಗಂಟೆಗೆ ಹೊರಟು ಕಿಕ್ಕರಳ್ಳಿಯವರೆಗೆ ಬಂದು ಮರಳಿ ಅದೇ ಮಾರ್ಗದಲ್ಲಿ ಮಡಿಕೇರಿಗೆ ಹೋಗುತ್ತಿದ್ದ ಬಸ್ ಮತ್ತು ಮಡಿಕೇರಿ, ಮಾದಾಪುರ, ತಾಕೇರಿ, ಸೋಮವಾರಪೇಟೆಗೆ ತೆರಳುತ್ತಿದ್ದ ಬಸ್ಗಳು ೨೦೧೮ರ ಜಲಪ್ರಳಯ ಮತ್ತು ಕೋವಿಡ್ ಸಮಯದಲ್ಲಿ ಸೇವೆ ಸ್ಥಗಿತಗೊಳಿಸಿದ್ದವು.
ಈ ಬಗ್ಗೆ ಸ್ಥಳಿಯ ಶಾಸಕರಿಗೂ, ಸಂಬAಧಿಸಿದ ಮಡಿಕೇರಿ ಘಟಕ ವ್ಯವಸ್ಥಾಪಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ತೆರಳಿ ಮನೆಗೆ ಹಿಂತಿರುಗುವಾಗ ಆಟೋಗೆ ದುಬಾರಿ ಹಣ ನೀಡಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜನರಿಗೆ ಅನುಕೂಲವಾಗುವ ಈ ೨ ಬಸ್ ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿಯಿಂದ ೧೧.೩೦ಕ್ಕೆ ಬಿಟ್ಟು ಮಾದಾಪುರ ಸೂರ್ಲಬ್ಬಿ, ಹರಗ, ತಾಕೇರಿ ಮಾರ್ಗವಾಗಿ ಸೋಮವಾರಪೇಟೆಗೆ ಹೋಗುವಂತೆ ಬಸ್ ವ್ಯವಸ್ಥೆಗೆ ಮನವಿ ಮಾಡಿರುವ ನಿವಾಸಿಗಳು ಬೆಳಿಗ್ಗೆ ಮಡಿಕೇರಿಯಿಂದ ೭.೩೦ಕ್ಕೆ ಮಡಿಕೇರಿ ಬಿಟ್ಟು ಸೂರ್ಲಬ್ಬಿ, ಶಾಂತಳ್ಳಿ, ಸೋಮವಾರಪೇಟೆ, ಕುಶಾಲನಗರ ಮತ್ತು ಇದೆ ಮಾರ್ಗವಾಗಿ ಹಿಂತಿರುಗುವ ಬಸ್ ಸಕಾಲಕ್ಕೆ ಬಾರದೆ ಶಾಲಾ ಮಕ್ಕಳಿಗೂ, ರೈತರ ಕೆಲಸ ಕಾರ್ಯಕ್ಕೆ, ಕಚೇರಿಗೆ ತೆರಳುವವರಿಗೂ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ಪುನರಾರಂಭಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ರಾಜಪ್ಪ, ಗಣೇಶ್, ಸೋಮಣ್ಣ ಮತ್ತಿತರರು ಇದ್ದರು.