ಮಡಿಕೇರಿ, ಜೂ. ೨೨: ಪಿರಿಯಾಪಟ್ಟಣ ಮತ್ತು ಹುಣಸೂರು ಮಾರ್ಗವಾಗಿ ವೀರಾಜಪೇಟೆ-ಸಿದ್ದಾಪುರಕ್ಕೆ ತೆರಳುವ ಮಾರ್ಗ ಮಧ್ಯೆ ದರೋಡೆ ಯತ್ನ ಎಂಬ ವದಂತಿ ಸುಳ್ಳು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಹೆಚ್. ಅಫ್ಜಲ್ ಹಾಗೂ ನೆಲ್ಲಿಹುದಿಕೇರಿ ನಿವಾಸಿ ಎಂ.ಇ. ಶಾಹುಲ್ ಎಂಬವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊAಡಿದ್ದರು. ತಾ. ೧೯ ರಂದು ಈ ಮಾರ್ಗದಲ್ಲಿ ನೆಲ್ಲಿಹುದಿಕೇರಿ ಗ್ರಾಮದವರು ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ ಮಾಡಲು ಪ್ರಯತ್ನಿಸಿದ್ದು, ಈ ಸಂದರ್ಭ ಚಾಲಕ ಜಾಣ್ಮೆಯಿಂದ ಕಾರನ್ನು ನಿಲ್ಲಿಸದೆ ತೆರಳಿ ತಪ್ಪಿಸಿಕೊಂಡು ಬದಲಿ ಮಾರ್ಗದಿಂದ ಬಂದಿದ್ದಾರೆ. ಮಧ್ಯರಾತ್ರಿ ಬರುವವರು ಜಾಗರೂಕತೆಯಿಂದ ಬರಬೇಕು. ಬದಲಿ ಮಾರ್ಗದಿಂದ ಸಂಚರಿಸಿ ಸುರಕ್ಷಿತವಾಗಿ ಬನ್ನಿ, ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಬರುವ ಸಾಹಸಕ್ಕೆ ಕೈಹಾಕಿ ತೊಂದರೆಗೆ ಸಿಲುಕಬೇಡಿ. ಪಿರಿಯಾಪಟ್ಟಣ-ಮಾಲ್ದಾರೆ-ಸಿದ್ದಾಪುರ, ವೀರಾಜಪೇಟೆ-ಪಿರಿಯಾಪಟ್ಟಣ ಮಾರ್ಗವಾಗಿ ರಾತ್ರಿ ೧೨ ಗಂಟೆಯ ನಂತರ ಸಂಚರಿಸದಿ ರುವುದೇ ಒಳ್ಳೆಯದು ಎಂದು ಮಾಹಿತಿಯನ್ನು ಹಂಚಿಕೊAಡಿದ್ದಾರೆ.
ಇದನ್ನು ಪರಿಶೀಲಿಸಿದ ಸಂದರ್ಭ ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾದ ಹಿನ್ನೆಲೆ ಮಹಿಳೆಯ ಸಂಬAಧಿಕರು ತಡರಾತ್ರಿ ಹುಡುಕಾಟ ನಡೆಸುತ್ತಿದ್ದರು. ಇದನ್ನು ತಪ್ಪಾಗಿ ಗ್ರಹಿಸಿ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿರುವುದಾಗಿ ಪೊಲೀಸ್ ಇಲಾಖೆ ಹೇಳಿದ್ದು, ಮಾಹಿತಿ ಹಂಚಿಕೊAಡ ಇಬ್ಬರಿಗೆ ಈ ಬಗ್ಗೆ ತಿಳುವಳಿಕೆ ನೀಡಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ತಪ್ಪು ಮಾಹಿತಿ ಪೋಸ್ಟ್ ಮಾಡಿದ ಗ್ರಾ.ಪಂ. ಸದಸ್ಯ ಅಫ್ಜಲ್, ಶಾಹುಲ್ ಈ ಬಗ್ಗೆ ಪ್ರತಿಕ್ರಿಯಿಸಿ, ತಪ್ಪು ಮಾಹಿತಿಯಿಂದ ಈ ರೀತಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದೇವೆ. ನಮ್ಮ ತಪ್ಪಿಂದ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರ ತಪ್ಪು ಮಾಹಿತಿ ಎಂದು ತಿಳಿಸಿದ್ದಾರೆ.