ಮಡಿಕೇರಿ, ಜೂ. ೨೨: ಕಳೆದ ೫ ದಿನಗಳ ಹಿಂದೆ ತೆರೆದ ಬಾವಿಗೆ ಬಿದ್ದು ಕಾಡಾನೆ ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಪ್ರತ್ಯೇಕ ಪ್ರಕರಣಗಳಲ್ಲಿ ೨ ಕಾಡಾನೆಗಳು ಕೊನೆಯುಸಿರೆಳೆದ ಘಟನೆ ನಡೆದಿದೆ.
ಅಮ್ಮತ್ತಿ ಸಮೀಪದ ಕಣ್ಣಂಗಾಲ ದಲ್ಲಿ ನೀರಿನಲ್ಲಿ ಮುಳುಗಿ ೧೨ ವರ್ಷದ ಕಾಡಾನೆ ಮೃತಪಟ್ಟರೆ, ಗೋಣಿಕೊಪ್ಪ ಸಮೀಪದ ಅರ್ವತ್ತೋಕ್ಲುವಿನಲ್ಲಿ ವಿದ್ಯುತ್ ಸ್ಪರ್ಶಿಸಿ ಗಂಡಾನೆ ಸಾವನ್ನಪ್ಪಿದೆ.
ಕೆರೆಯಲ್ಲಿ ಮುಳುಗಿ ಸಾವು
ಸಿದ್ದಾಪುರ ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಯ ಹಚ್ಚಿನಾಡುವಿನ ನಂದ ಎಂಬವರ ತೋಟದ ಕೆರೆಗೆ ಬಿದ್ದ ಅಂದಾಜು ೧೩ ವರ್ಷದ ಗಂಡಾನೆ ಮುಳುಗಿ ಸಾವನ್ನಪ್ಪಿದೆ.
ಶುಕ್ರವಾರ ತಡರಾತ್ರಿ ನಾಲ್ಕು ಕಾಡಾನೆಗಳ ಹಿಂಡು ಮುಕ್ಕಾಟಿರ ನಂದ ಅವರ ತೋಟದಲ್ಲಿ ಕಂಡು ಬಂದಿದೆ. ನೀರು ಕುಡಿಯಲು ಕೆರೆಯ ದಡಕ್ಕೆ ತೆರಳಿದ ಸಂದÀರ್ಭ ಹಿಂಡಿನ ಪೈಕಿ ೧೩ ವರ್ಷ ಪ್ರಾಯದ ಗಂಡಾನೆ ಕಾಲು ಜಾರಿ ಕೆರೆಗೆ ಬಿದ್ದಿದೆ. ಕೆರೆ ಆಳವಾಗಿದ್ದು, ಕೆಸರು ಹೆಚ್ಚಾಗಿರುವುದರಿಂದ ಕಾಡಾನೆಗೆ ಕೆರೆಯಿಂದ ಹೊರಬರಲು ಸಾಧ್ಯವಾಗದೆ ಆಯಾಸದಿಂದ ಮುಳುಗಿ ಸಾವನಪ್ಪಿರ ಬಹುದೆಂದು ಅರಣ್ಯ ಇಲಾಖೆ ವೈದ್ಯ ಡಾ. ಚೆಟ್ಟಿಯಪ್ಪ ತಿಳಿಸಿದ್ದಾರೆ.
ಮೃತ ಕಾಡಾನೆಯನ್ನು ಯಂತ್ರದ ಮೂಲಕ ಕೆರೆÀಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ
ಬಳಿಕ ಮೃತಪಟ್ಟ ಕಾಡಾನೆಯ ದಂತಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಮೃತದೇಹಕ್ಕೆ ಪೂಜೆ ಮಾಡಿ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ವೀರಾಜಪೇಟೆ ಡಿಸಿಎಫ್ ಜಗನ್ನಾಥ್ ಭೇಟಿ ನೀಡಿ ಪರಿಶೀಲಿಸಿ ದರು. ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಹಾಗೂ ಸಿಬ್ಬಂದಿ ಹಾಜರಿದ್ದರು.
ಕಣ್ಣಂಗಾಲ ಗ್ರಾ.ಪಂ ವ್ಯಾಪ್ತಿಯ ಅಮ್ಮತ್ತಿ ಒಂಟಿಯAಗಡಿ, ಹಚ್ಚಿನಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ
(ಮೊದಲ ಪುಟದಿಂದ) ಬೀಡುಬಿಟ್ಟು ದಾಂಧÀಲೆ ನಡೆಸುತ್ತಿದ್ದು, ಹಾವಳಿ ಮಿತಿಮೀರಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವಿದ್ಯುತ್ ಸ್ಪರ್ಶಿಸಿ ಸಾವು
ಗೋಣಿಕೊಪ್ಪ/ಪೊನ್ನಂಪೇಟೆ: ವಿದ್ಯುತ್ ತಗುಲಿ ೧೦ ವರ್ಷ ಪ್ರಾಯದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಹೆಚ್ಎಸ್ ಕಾಲೋನಿಗೆ ತೆರಳುವ ಕಾಫಿ ತೋಟದ ಒಳಭಾಗದಲ್ಲಿ ನಡೆದಿದೆ. ಈಶ್ವರ್ ಎಂಬವರ ಕಾಫಿ ತೋಟದಲ್ಲಿ ಘಟನೆ ಸಂಭವಿಸಿದ್ದು, ತೀರ ಹಳೆಯದಾದ ಕಬ್ಬಿಣದ ವಿದ್ಯುತ್ ಕಂಬದಿAದ ವಿದ್ಯುತ್ ಪ್ರವಹಿಸಿದ ಪರಿಣಾಮ ಕಾಡಾನೆ ಕಂಬವನ್ನು ಸ್ಪರ್ಶಿಸಿದ ವೇಳೆ ದುರ್ಘಟನೆ ನಡೆದಿದ್ದು, ವಿದ್ಯುತ್ ಹರಿದ ಪರಿಣಾಮ ಆನೆಯು ಸ್ಥಳದಲ್ಲಿ ಸಾವನಪ್ಪಿದೆ. ಘಟನೆ ನಡೆದು ಎರಡು ದಿನಗಳ ನಂತರ ದುರ್ನಾಥ ಬೀರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದ ವೇಳೆ ಕಾಡಾನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ವೀರಾಜಪೇಟೆ ಡಿಎಫ್ಓ ಜಗನ್ನಾಥ್, ತಿತಿಮತಿ ವಲಯದ ಎಸಿಎಫ್ ಗೋಪಾಲ್, ಪೊನ್ನಂ ಪೇಟೆ ವಲಯದ ಆರ್ಎಫ್ಓ ಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಡಾ. ಬೆಳ್ಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಲಾಖೆಯ ನಿಯಮದಂತೆ ಜೆಸಿಬಿ ಮೂಲಕ ಗುಂಡಿ ತೆಗೆದು ಆನೆಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅರಣ್ಯ ಇಲಾಖೆಯ ಡಿಆರ್ಎಫ್ಓ ದಿವಾಕರ್, ಸಂದೇಶ್, ಸಚಿನ್, ಗುರುನಾಥ್, ನಿಸಾರ್, ರಕ್ಷಿತ್, ಅರಣ್ಯ ರಕ್ಷಕರಾದ ಆಂಟೋನಿ, ಆರ್ಆರ್ಟಿ ಸಿಬ್ಬಂದಿ ಸೇರಿದಂತೆ ಇನ್ನಿತರರು ಹಾಜರಿದ್ದರು. ವರದಿ: ವಾಸು, ಜಗದೀಶ್, ಚನ್ನನಾಯಕ