ಮಡಿಕೇರಿ, ಜೂ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಭಾರತೀಯ ತೈಲ ನಿಗಮ ಭಾರತೀಯ ವಿಜ್ಞಾನ ಸಂಸ್ಥೆ, ಪ್ರಾಜೆಕ್ಟ್ ಚಂದನ, ರಾಜ್ಯ ರಕ್ತಕೋಶ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣರೋಗ ದಿನಾಚರಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿ ಕುಡಗೋಲು ಕಣ ರೋಗದ ಬಗ್ಗೆ ಸಾರ್ವಜನಿಕರು ಅರಿವು ಹೊಂದಿ ತಪಾಸಣೆ ಮಾಡಿಸಿಕೊಳ್ಳಬೇಕು. ಎಲ್ಲಾ ಇಲಾಖೆಗಳ ಸಹಕಾರ ಅತೀ ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಸಿಕಲ್‌ಸೆಲ್ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಡಗೋಲು ಕಣರೋಗವು ಅನುವಂಶಿಕ ಕಾಯಿಲೆಯಾಗಿದ್ದು, ಇದರಲ್ಲಿ ಕೆಂಪು ರಕ್ತಕಣಗಳು ಕುಡಗೋಲು ಆಕಾರದ ರೂಪವನ್ನು ಪಡೆದು ದೇಹದಲ್ಲಿ ರಕ್ತದ ಚಲನೆಯನ್ನು ನಿಧಾನಗೊಳಿಸಿ, ನಿರ್ಬಂಧಿಸಿ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಕಾಯಿಲೆಯು ಹುಟ್ಟಿನಿಂದ ಸಾಯುವವರಗೆ ಕಾಡುವ ರೋಗವಿದು. ಈ ರೋಗ ಹೊಂದಿದವರ ಜೀವಿತಾವಧಿ ಇನ್ನಿತರ ಜನಸಾಮಾನ್ಯರಿಗಿಂತ ಕಡಿಮೆ. ಸರಾಸರಿ ೪೨ ರಿಂದ ೪೮ ವರ್ಷ ಬದುಕಬಹುದು ಎಂದು ತಿಳಿಸಿದರು.

ಆಯಾಸ, ಬ್ಯಾಕ್ಟೀರಿಯಾದ ಸೋಂಕುಗಳು, ಪಾರ್ಶ್ವವಾಯು, ಕಣ್ಣಿನ ಹಾನಿ, ಉರಿಯೂತ, ವಾಸಿಯಾಗದ ಕಾಲಿನ ಹುಣ್ಣು, ತೀವ್ರ ಮೂಳೆನೋವು, ಪದೇಪದೇ ಜ್ವರ, ರಕ್ತಹೀನತೆ, ವಿಳಂಬಿತ ಬೆಳವಣಿಗೆ ಅಥವಾ ಪ್ರೌಢಾವಸ್ಥೆ ಈ ಕಾಯಿಲೆಯ ಲಕ್ಷಣಗಳು ಎಂದು ತಿಳಿಸುತ್ತಾ, ಕಾಯಿಲೆಯು ಹರಡುವ ಬಗೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ೫೮ ಸಾವಿರಕ್ಕೂ ಹೆಚ್ಚು ಗಿರಿಜನರಿದ್ದು, ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಬುಡಕಟ್ಟು ಜನಾಂಗದ ೧೦,೨೬೩ ಜನರನ್ನು ನೋಂದಣಿ ಮಾಡಿದ್ದು, ಇವರಲ್ಲಿ ೧೦,೨೨೪ ಜನರನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ ೪೫೩ ಕ್ಯಾರಿಯರ್‌ಗಳು ಕಂಡುಬAದಿದ್ದು, ೩೪ ಪ್ರಕರಣಗಳು ಕುಡುಗೋಲು ಕಣದ ಕಾಯಿಲೆ ಪ್ರಕರಣಗಳೆಂದು ದೃಢಪಟ್ಟಿರುತ್ತವೆ.

ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬAದಲ್ಲಿ ಅಥವಾ ಸಂಬAಧಿಕರಿಗೆ ಈ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿಯವರಿAದ ರಕ್ತಪರೀಕ್ಷೆ ಮಾಡಿಸಿ ಪತ್ತೆಹಚ್ಚಬಹುದು. ರೋಗ ಕಂಡುಬAದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಮತ್ತು ಸಂಬAಧಿಕರನ್ನು ರಕ್ತಪರೀಕ್ಷೆಗೆ ಒಳಪಡಿಸತಕ್ಕದ್ದು. ಕುಡಗೋಲು ಕಣದ ಕಾಯಿಲೆಗೆ ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು ಎಂದು ತಿಳಿಸಿದರು.

ಗಿರಿಜನ ಅಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯಲ್ಲಿ ೫೮ ಸಾವಿರಕ್ಕೂ ಹೆಚ್ಚಿನ ಗಿರಿಜನರಿದ್ದು, ಇವರುಗಳಿಗೆ ಕುಡಗೋಲು ಕಣರೋಗ ತಪಾಸಣೆ ಮಾಡಿಸಿಕೊಳ್ಳಲು ಸಹಕರಿಸಲು ಗಿರಿಜನ ಮುಖಂಡರಲ್ಲಿ ಮನವಿ ಮಾಡಿದರು. ಇಲಾಖೆ ವತಿಯಿಂದ ಗಿರಿಜನರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸಭೆಗೆ ಆಗಮಿಸಿದ್ದ ಗಿರಿಜನ ಸಮುದಾಯದ ಮುಖಂಡರುಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪಂಕಜಾ, ವನಬನ ವಿಕಾಸ ಕೇಂದ್ರ ಹಾಗೂ ಲ್ಯಾಂಪ್ ನಿರ್ದೇಶಕ ಪುಷ್ಪ ಜೆ.ಆರ್, ಗಿರಿಜನ ಮುಖಂಡರಾದ ರಾಜೀವ್, ನಿತಿನ್ ಸಭೆಯಲ್ಲಿ ಕುಡಗೋಲು ಕಣರೋಗ ತಪಾಸಣೆಗೆ ಸಮುದಾಯದಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ ಕೆ.ಜಿ ಮಾತನಾಡಿ, ಜಿಲ್ಲೆಯಲ್ಲಿ ವಿಕಲಚೇತನರ ದೃಢೀಕರಣಕ್ಕೆ ಹಾಗೂ ಇಲಾಖೆ ವತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಪ್ರಾಜೆಕ್ಟ್ ಚಂದನ ಭಾರತೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಸಂಯೋಜಕಿ ಡಾ.ಕಾವೇರಿ ಮಾತನಾಡಿ, ೫ ವರ್ಷದಿಂದ ೪೫ ವರ್ಷದೊಳಗಿನ ಎಲ್ಲಾ ಗಿರಿಜನರು ತಪ್ಪದೇ ಕುಡುಗೋಲು ಕಣರೋಗದ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಾರಂಭದಲ್ಲಿಯೇ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು. ಚಂದನ ಪ್ರಾಜೆಕ್ಟ್ ಬಗ್ಗೆ ಸವಿವರವಾಗಿ ತಿಳಿಸಿದರು.

ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಂ iÀÄತಿರಾಜ್, ಆರ್ಜಿ ಗ್ರಾ.ಪಂ. ಅಧ್ಯಕ್ಷೆ ಫಾತೀಮಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಚಂದ್ರಕಾAತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ, ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು, ಗಿರಿಜನ ಮುಖಂಡರು ಸೇರಿದಂತೆ ಇತರರು ಇದ್ದರು.