ಸೋಮವಾರಪೇಟೆ, ಜೂ.೨೩ : ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ನವದುರ್ಗಾ ಚಂಡಿಕಾ ಹೋಮ ಮತ್ತು ಏಕಾದಶ ರುದ್ರಹೋಮ ಹಲವು ಧಾರ್ಮಿಕ ಕೈಂಕರ್ಯಗಳೊAದಿಗೆ ನಡೆಯಿತು.
ವೇದಬ್ರಹ್ಮ ಎಂ. ವಿ. ಕೃಷ್ಣಮೂರ್ತಿ ಘನಪಾಠಿ ಹಾಗೂ ಚಿತ್ರಕುಮಾರ್ ಭಟ್ ಪೌರೋಹಿತ್ಯದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಕಾರ್ಯದರ್ಶಿ ಎಸ್.ಡಿ. ವಿಜೇತ್ ಪದಾಧಿಕಾರಿಗಳಾದ ವೈ.ಪಿ. ಹರೀಶ್, ಸಿ.ಎನ್. ಸತೀಶ್, ಶಾಮ್ ಸುಂದರ್, ರಾಜೇಶ್ ಪದ್ಮನಾಭ, ಸುದರ್ಶನ್ ಕೌಶಿಕ್, ಜಯಂತ್, ಇನ್ನಿತರರು ಇದ್ದರು.
ಇಂದು ಅಮೃತ ಮಹೋತ್ಸವ: ತಾ.೨೪ ರಂದು (ಇಂದು) ಅಮೃತಮಹೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಯದುವೀರ್ ಒಡೆಯರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್, ಶಾಸಕ ಡಾ.ಮಂತರ್ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.