ಟಿಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೨೩ : ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣ ಗೋಣಿಕೊಪ್ಪದಲ್ಲಿ ನಡೆದ ಕಟ್ಟಡ ಕುಸಿತ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದೃಷ್ಟವಶಾತ್ ಕಟ್ಟಡ ದೊಳಗಿದ್ದವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಆದರೆ, ಅಸುರಕ್ಷಿತ ಕಟ್ಟಡಗಳು ಜಿಲ್ಲೆಯಲ್ಲಿ ಹಲವಷ್ಟಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಅನಾಹುತಗಳು ಸಂಭವಿಸುವ ಮುನ್ನ ಎಚ್ಚರವಹಿಸಿ ಕಟ್ಟಡಗಳ ಸಮೀಕ್ಷೆಗೆ ಕಾರ್ಯೋನ್ಮು ಖಗೊಳ್ಳಬೇಕಾದ ಅನಿವಾರ್ಯತೆ ತಲೆದೋರಿದೆ.

ಜಿಲ್ಲೆಯಲ್ಲಿ ಹಲವಷ್ಟು ವಾಣಿಜ್ಯ ಹಾಗೂ ವಸತಿ ಕಟ್ಟಡಗಳು ಶಿಥಿಲಗೊಂಡು ಅಸುರಕ್ಷಿತ ಸ್ಥಿತಿಯಲ್ಲಿರುವುದು ಕಂಡು ಬರುತ್ತವೆ. ತಾ. ೨೦ ರಂದು ಗೋಣಿಕೊಪ್ಪದಲ್ಲಿ ನಡೆದ ಘಟನೆ ಇಂತಹ ಪ್ರಕರಣಗಳಿಗೆ ಎಚ್ಚರಿಕೆ ಗಂಟೆಯನ್ನು ಬಾರಿಸಿದಂತಿದೆ. ಮುಂದಾದರು ಆಡಳಿತ ಎಚ್ಚೆತ್ತುಕೊಂಡು ಪ್ರಾಣ ಭೀತಿ ಸೃಷ್ಟಿಸುವ ಶಿಥಿಲ, ಅಸುರಕ್ಷಿತ ಕಟ್ಟಡ ಮೇಲೆ ನಿಗಾ ವಹಿಸುವ ಅಗತ್ಯತೆಯೂ ಅವಶ್ಯವಾಗಿದೆ.

ಜಿಲ್ಲೆಯ ಹಲವೆಡೆಗಳಲ್ಲಿ ಇಂದು, ನಾಳೆಯೋ ಬೀಳುವ ಹಂತದ ಕಟ್ಟಡಗಳು ಕಣ್ಣ ಮುಂದಿವೆ. ಈ ಸಂಬAಧ ಸ್ಥಳೀಯ ಆಡಳಿತ ಸುರಕ್ಷತಾ ಕ್ರಮ ವಹಿಸಲು ಮುಂದಾಗಬೇಕಾಗಿದೆ. ಲೈಸನ್ಸ್ ನವೀಕರಣದ ಸಂದರ್ಭ ಕಟ್ಟಡದ ಸಾಮರ್ಥ್ಯವನ್ನು ಪರೀಕ್ಷಿಸ ಬೇಕಾಗಿರುವುದು ಆದ್ಯ ಕರ್ತವ್ಯ ವಾಗಿದೆ. ಆದರೆ, ಈ ನಿಯಮಗಳು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಕೇವಲ ಖಾಸಗಿ ಕಟ್ಟಡಗಳಲ್ಲದೆ, ಸರಕಾರಕ್ಕೆ ಸೇರಿದ ಅದೆಷ್ಟೊ ಕಟ್ಟಡ, ತಂಗುದಾಣಗಳು ಶಿಥಿಲಗೊಂಡು ಕುಸಿಯುವ ಹಂತದಲ್ಲಿದ್ದು, ಇವುಗಳ ಬಗ್ಗೆಯೂ ಎಚ್ಚರ ವಹಿಸಬೇಕಿದೆ.

ದೇಶದಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿದ ಹಾಗೂ ಅಸುರಕ್ಷಿತ ಕಟ್ಟಡಗಳನ್ನು ಧ್ವಂಸ ಮಾಡಿದ ಉದಾಹರಣೆಗಳು ಹಲವಷ್ಟಿವೆ. ಅಪಾಯ ಸಂಭವಿಸುವ ಮುನ್ನ ಎಚ್ಚರವಹಿಸಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಂಭವನೀಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ಸಾಮರ್ಥ್ಯ ಪರಿಶೀಲನೆ ಕಡ್ಡಾಯ

ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಪರವಾನಗಿ ಪಡೆಯಲು ಅಥವಾ ನವೀಕರಿಸಲು ಬಂದ ಸಂದರ್ಭ ಕಟ್ಟಡದ ದೈಹಿಕ ಸಾಮರ್ಥ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಕಡ್ಡಾಯವಾಗಿ ಸ್ಥಳ ಪರಿಶೀಲನೆ ಮಾಡಿ ಲೈಸನ್ಸ್ ನೀಡಬೇಕಾಗಿದೆ. ಆದರೆ, ಈ ನಿಯಮ ನಾಮಕಾವಸ್ಥೆಗೆ ಮಾತ್ರ ಎಂಬAತಾ ಗಿದೆ.

ಸ್ಥಳೀಯ ಆಡಳಿತದ ಅಧಿಕಾರಿಗಳ ಮೇಲೆ ಈ ಜವಾಬ್ದಾರಿ ಇರುತ್ತದೆ. ಆದರೆ, ಲೈಸನ್ಸ್ ನೀಡಬೇಕಾದಾಗ ಸ್ಥಳ ಪರಿಶೀಲನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಸಾಮರ್ಥ್ಯ ಪರಿಶೀಲನೆ ಕಡ್ಡಾಯ

ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ ಪರವಾನಗಿ ಪಡೆಯಲು ಅಥವಾ ನವೀಕರಿಸಲು ಬಂದ ಸಂದರ್ಭ ಕಟ್ಟಡದ ದೈಹಿಕ ಸಾಮರ್ಥ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಕಡ್ಡಾಯವಾಗಿ ಸ್ಥಳ ಪರಿಶೀಲನೆ ಮಾಡಿ ಲೈಸನ್ಸ್ ನೀಡಬೇಕಾಗಿದೆ. ಆದರೆ, ಈ ನಿಯಮ ನಾಮಕಾವಸ್ಥೆಗೆ ಮಾತ್ರ ಎಂಬAತಾ ಗಿದೆ.

ಸ್ಥಳೀಯ ಆಡಳಿತದ ಅಧಿಕಾರಿಗಳ ಮೇಲೆ ಈ ಜವಾಬ್ದಾರಿ ಇರುತ್ತದೆ. ಆದರೆ, ಲೈಸನ್ಸ್ ನೀಡಬೇಕಾದಾಗ ಸ್ಥಳ ಪರಿಶೀಲನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಪರಿಶೀಲನೆ ಸಂದರ್ಭ ಮೇಲ್ನೋಟಕ್ಕೆ ಕಟ್ಟಡ ಸುಸ್ಥಿತಿಯಲ್ಲಿಲ್ಲವೆಂದು ಕಂಡುಬAದರೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳ ಮೂಲಕ ಕಟ್ಟಡ ಸಾಮರ್ಥ್ಯದ ದೃಢೀಕರಣವನ್ನು (ಫಿಟ್ನೆಸ್ ಸರ್ಟಿಫಿಕೆಟ್) ಪಡೆದು ತಾಂತ್ರಿಕವಾಗಿ ಕಟ್ಟಡದ ವರದಿಯ ಅನುಸಾರ ಪರವಾನಗಿ ನೀಡುವ ಅಧಿಕಾರ ಇರುತ್ತದೆ. ಅಧಿಕಾರಿಗಳು ಕಟ್ಟಡದ ಸ್ಥಿತಿ ಸರಿಯಿಲ್ಲ ಎಂದು ವರದಿ ನೀಡಿದರೆ, ಕಟ್ಟಡಕ್ಕೆ ಲೈಸನ್ಸ್ ನೀಡದೆ ಸರಿಪಡಿಸಲು ಮಾಲೀಕರಿಗೆ ಸೂಚಿಸಿ ದುರಸ್ತಿ ನಂತರ ಪರವಾನಗಿ ನೀಡಬಹುದಾಗಿದೆ. ಕೇವಲ ಕಟ್ಟಡದ ಸ್ಥಿತಿ ಮಾತ್ರವಲ್ಲದೆ ಕಟ್ಟಡದೊಳಗೆ ಅಗ್ನಿ ಸುರಕ್ಷತಾ ಕ್ರಮಗಳು, ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯವಿದೆಯೇ ಎಂಬ ಅಂಶವನ್ನು ಪರಿಶೀಲಿಸಬೇಕಾಗಿದೆ.

೨೦೨೧ರಲ್ಲಿ ಬೆಂಗಳೂರಿನಲ್ಲಿ ಹಳೇ ಕಟ್ಟಡವೊಂದು ಕುಸಿದ ಸಂದರ್ಭ ಸ್ಥಳೀಯ ಆಡಳಿತ ಸಮೀಕ್ಷೆ ನಡೆಸಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ಕ್ರಮಕೈಗೊಂಡಿತ್ತು. ಮೈಸೂರಿನ ೧೧ ಶಿಥಿಲಗೊಂಡ ಪಾರಂಪರಿಕ ಕಟ್ಟಡ ನೆಲಸಮಕ್ಕೂ ಅಲ್ಲಿನ ಸ್ಥಳೀಯ ಆಡಳಿತ ಮುಂದಾಗಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ದುಸ್ಥಿತಿಯಲ್ಲಿರುವ ಕಟ್ಟಡ ಸಮೀಕ್ಷೆ ನಡೆಸಬೇಕಾಗಿದೆ. ಅಷ್ಟೆ ಅಲ್ಲದೆ ಈ ಹಿಂದೆ ಶಿಥಿಲಾವಸ್ಥೆ ಯಲ್ಲಿದ್ದ ಗೋಣಿಕೊಪ್ಪ ಪ್ರಯಾಣಿಕ ತಂಗುದಾಣದ ಸಜ್ಜೆಯೊಂದು ಬಿದ್ದ ತಕ್ಷಣ ಇಡೀ ಕಟ್ಟಡವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿತ್ತು. ಮಡಿಕೇರಿಯ ಹಳೇ ಬಸ್ ನಿಲ್ದಾಣದಲ್ಲಿದ್ದ ತಂಗುದಾಣ ಮಳೆಗೆ ಬಿದ್ದ ಸಂದರ್ಭ ಅಕ್ಕಪಕ್ಕದ ಮಳಿಗೆ ಸಹಿತ ತಂಗುದಾಣವನ್ನು ಕೆಡವಿ ಹಾಕಿದ ಉದಾಹರಣೆಗಳಿವೆ.

ಜೀವ ಕಂಟಕ ಕಟ್ಟಡಗಳ ಬಗ್ಗೆ ಜಿಲ್ಲಾಡಳಿತ ಗಂಭೀರ ಕ್ರಮಕೈಗೊಳ್ಳ ಬೇಕಾಗಿದೆ. ದುಸ್ಥಿತಿಯ ಕಟ್ಟಡವನ್ನು ಗುರುತಿಸಿ ಅನಾಹುತಗಳನ್ನು ತಪ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ತೋರಿ ಪರವಾನಗಿ ನೀಡುವ ಮುನ್ನ ಕಟ್ಟಡಗಳ ಸ್ಥಿತಿಯ ಬಗ್ಗೆ ಪರಾಮರ್ಶಿಸಿ ಇಚ್ಛಾಶಕ್ತಿ ತೋರಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.

ಕುಶಾಲನಗರದಲ್ಲಿ ಅಪಾಯಕಾರಿ ಕಟ್ಟಡಗಳು

ಕುಶಾಲನಗರ, ಜೂ.೨೩: ಕುಶಾಲನಗರ ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಶಿಥಿಲಗೊಂಡಿರುವ ಕಟ್ಟಡಗಳು ಅಪಾಯಕ್ಕೆ ಆಹ್ವಾನ ನೀಡಿದಂತೆ ಕಂಡುಬರುತ್ತವೆ. ಕೊಡಗು ಜಿಲ್ಲೆಯ ಗೋಣಿಕೊಪ್ಪ ಪಟ್ಟಣದಲ್ಲಿ ನಡೆದ ದುರಂತ ಇನ್ನಿತರ ಪ್ರದೇಶಗಳಲ್ಲಿ ಮರುಕಳಿಸಿದಂತೆ ಸ್ಥಳೀಯ ಆಡಳಿತಗಳು ಎಚ್ಚರ ವಹಿಸಬೇಕಾಗಿದೆ.

ಕುಶಾಲನಗರ ಗಣಪತಿ ದೇವಾಲಯದಿಂದ ಪ್ರವಾಸಿ ಮಂದಿರಕ್ಕೆ ತೆರಳುವ ರಸ್ತೆಯಲ್ಲಿ ಪುರಸಭೆಗೆ ಸೇರಿದ ಹಳೆಯ ಕಟ್ಟಡಗಳು ಬಿರುಕು ಬಿಟ್ಟಿದ್ದು, ಯಾವುದೇ ಸಂದರ್ಭ ಕುಸಿಯುವ ಸಾಧ್ಯತೆ ಅಧಿಕವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಈ ಕಟ್ಟಡ ಕಂಡುಬAದಿದ್ದು, ಇದರ ಕೆಳಭಾಗ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು, ಸುತ್ತಮುತ್ತಲು ದಿನನಿತ್ಯ ನೂರಾರು ನಾಗರಿಕರು ವಾಹನಗಳು ಓಡಾಡುವ ಪ್ರದೇಶವಾಗಿದೆ. ಈ ಕಟ್ಟಡ ನಿರ್ವಹಣೆ ಇಲ್ಲದೆ ಹಲವಾರು ವರ್ಷಗಳು ಕಳೆದಿದ್ದು, ಕಟ್ಟಡದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ಬಿರುಕುಗಳು ಕಂಡುಬAದಿವೆ.

ಇನ್ನೊAದೆಡೆ ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿ ರಸ್ತೆಯ ಎಡಭಾಗದಲ್ಲಿ ನೂರಕ್ಕೂ ಅಧಿಕ ವರ್ಷ ಹಳೆಯ ಹಂಚಿನ ಕಟ್ಟಡ ರಸ್ತೆ ಬದಿಯಲ್ಲಿದ್ದು, ಇದು ಕೂಡ ವ್ಯಾಪಾರ ವಹಿವಾಟು ನಡೆಯುವ ಸ್ಥಳವಾಗಿದ್ದು ದಿನನಿತ್ಯ ವಾಹನಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಪಾದಚಾರಿಗಳು ಓಡಾಡುವ ಸ್ಥಳವಾಗಿದೆ.

ಸಂಬAಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಅನಾಹುತ ತಪ್ಪಿಸಲು ಕೆಲಸ ಮಾಡಬೇಕಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ರಸ್ತೆ ಸಮೀಪ ದಂಡಿನಪೇಟೆಯಲ್ಲಿ ಕೂಡ ನೂರಕ್ಕೂ ಅಧಿಕ ವರ್ಷಗಳ ಹಳೆಯ ಹಂಚಿನ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು ಸಂಬAಧಿಸಿದ ಅಧಿಕಾರಿಗಳು ಮಾಲೀಕರಿಗೆ ತೆರವುಗೊಳಿಸಲು ಸೂಚನೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಈ ಮೇಲೆ ಹೇಳಿದ ಕಟ್ಟಡಗಳು ಯಾವುದೇ ಸಂದರ್ಭದಲ್ಲಿ ಕುಸಿಯುವ ಹಂತದಲ್ಲಿದ್ದು, ಸಾರ್ವಜನಿಕರ ಜೀವಹಾನಿ ಮತ್ತಿತರ ನಷ್ಟಕ್ಕೆ ಒಳಗಾಗುವ ಅಪಾಯಕಾರಿ ಸಾಧ್ಯತೆಗಳು ಅಧಿಕ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಈ ಸಂಬAಧ ಪ್ರತಿಕ್ರಿಯಿಸಿರುವ ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ಈಗಾಗಲೇ ದಂಡಿನಪೇಟೆ ಬಳಿಯ ಕಟ್ಟಡ ತೆರವುಗೊಳಿಸಲು ನೋಟೀಸ್ ನೀಡಲಾಗಿದೆ. ಉಳಿದಂತೆ ಶಿಥಿಲ ಕಟ್ಟಡಗಳನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

-ಚಂದ್ರಮೋಹನ್