ಸಿದ್ದಾಪುರ, ಜೂ. ೨೨: ಸಾಧಿಸುವ ಛಲದೊಂದಿಗೆ ಉನ್ನತ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಸಾಧನೆ ಮಾಡಿದ್ದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಂತ ಜೋಸೆಫ್ ದೇವಾಲಯದ ಧರ್ಮಗುರು ಮೈಕಲ್ ಮರಿ ಹೇಳಿದರು.

ಸಿದ್ದಾಪುರದ ಎಸ್.ಜೆ.ಸಿ. ಕ್ರಿಕೆಟರ್ಸ್ ಸಂಘದ ವತಿಯಿಂದ ಸಂತ ಜೋಸೆಫ್ ದೇವಾಲಯದ ಸಭಾಂಗಣದಲ್ಲಿ ಧರ್ಮ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕೊಡಗಿಗೆ ಪ್ರಥಮ ಸ್ಥಾನ ಪಡೆದ ನೆಲ್ಲಿಹುದಿಕೇರಿಯ ಜಾನ್ಸನ್ ಅವರ ಪುತ್ರಿ ಚರೀಷ್ಮಾ ಹಾಗೂ ಶೇ.೮೫ ಹೆಚ್ಚು ಅಂಕ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಜೀವಿನ್, ಜೋವಿಟ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಅನುಷ, ಶಿನೋಯ್, ದಿಯಾ ಜೋಸೆಫ್, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜೋಶ್ ಕುರಿಯನ್, ಜಾನ್ಸನ್, ಪ್ರಮುಖರಾದ ವಿಜೇಶ್, ಡಾನ್, ಜಾರ್ಜ್ ಜೋಸೆಫ್, ರೀಗಲ್, ಜೋಸಿ, ಜಿಮ್ಮಿ ಮಾಸ್ಟರ್, ಎಸ್.ಜೆ.ಸಿ. ಕ್ರಿಕೆಟರ್ಸ್ ತಂಡದ ಸನ್ನಿಲ್, ಅಂತೋಣಿ, ಜೋಯ್, ಪೋಷಕರು ಮತ್ತಿತರರು ಹಾಜರಿದ್ದರು.