x
ಚೆಯ್ಯಂಡಾಣೆ, ಜೂ. ೨೨: ನಾಪೋಕ್ಲು, ಪಾರಾಣೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಮುಖ್ಯ ರಸ್ತೆಯ ಕೈಕಾಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು.
ನಾಪೋಕ್ಲು ಕೈಕಾಡು ಗ್ರಾಮದ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಶನಿವಾರ ಮುಂಜಾನೆ ವೇಳೆ ರಸ್ತೆಗೆ ಉರುಳಿ ಬಿದ್ದಿದೆ. ಮರಬಿದ್ದ ಪರಿಣಾಮ ಬೆಂಗಳೂರಿನಿAದ ಇದೇ ಮಾರ್ಗವಾಗಿ ನಾಪೋಕ್ಲು ಭಾಗಮಂಡಲಕ್ಕೆ ತೆರಳುವ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಜಹಂಸ ಬಸ್ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ತೊಡಕು ಉಂಟಾಯಿತು. ಮಾಹಿತಿ ಅರಿತು ತಕ್ಷಣ ಸ್ಥಳಕ್ಕೆ ಧಾವಿಸಿದ ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಅವರು ಕಾರ್ಮಿಕರನ್ನು ಕರೆತಂದು ಮರ ಕಡಿಯುವ ಸಲಕರಣೆಗಳನ್ನು ಒದಗಿಸಿ ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭ ಸ್ಥಳೀಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾಯಕಂಡ ಮುತ್ತಪ್ಪ, ಕದ್ದಣಿಯಂಡ ಗಿರೀಶ್, ನಾಯಕಂಡ ರೋನ್, ಕದ್ದಣಿಯಂಡ ಗಣೇಶ್ ಮತ್ತಿತರರು ಇದ್ದರು.