ಮಡಿಕೇರಿ, ಜೂ. ೨೨: ವೀರಾಜ ಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟ ನೆಯಲ್ಲಿ ಕಾಂಗ್ರೆಸ್ ನಾಯಕರ ಅಣಕು ಶವಯಾತ್ರೆ ಹಾಗೂ ಪ್ರತಿಕೃತಿ ದಹನ ಖಂಡಿಸಿ ಸಂಪಾಜೆ ಚೆಕ್‌ಪೋಸ್ಟ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೌನ ಪ್ರತಿ ಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.

ಬಾಯಿಗೆ ಕಪ್ಪುಪಟ್ಟಿ ಧರಿಸಿ, ಘೋಷಣೆಗಳನ್ನು ಕೂಗದೆ ಮೌನ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ಇಂಧನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಭಾವಚಿತ್ರವಿಟ್ಟು ಅಣಕುಶವಯಾತ್ರೆ, ಪ್ರತಿಕೃತಿ ದಹನ ನಡೆಸಿರುವುದು ಖಂಡನೀಯ. ಇದು ವಿಕೃತ ಹಾಗೂ ಪ್ರಜ್ಞಾಹೀನ ಮನಸ್ಥಿತಿಗೆ ಸಾಕ್ಷಿ. ಪ್ರಜ್ಞಾವಂತರಾಗಿ ಸಾಮಾಜಿಕ ಕಳಕಳಿ ಅರಿತು ಬಾಯಿಗೆ ಕಪ್ಪು-ಪಟ್ಟಿ ಧರಿಸಿ ಮೌನ ಪ್ರತಿಭಟನೆಯನ್ನು ಮಾಡಿ ಅಭಿಮಾನ ಹಾಗೂ ನೈತಿಕ ಹೋರಾಟದ ಸಂದೇಶ ಸಾರುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ವಲಯ ಅಧ್ಯಕ್ಷ ಪಿ.ಎಲ್. ಸುರೇಶ್ ಚೆಂಬು ವಲಯ ಅಧ್ಯಕ್ಷ ರವಿ ಹೊಸೂರು, ಪೆರಾಜೆ ಅಧ್ಯಕ್ಷ ಜಯರಾಮ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾ ಉಪಾಧ್ಯಕ್ಷ ಡಾ.ನಿಶ್ಚಲ್ ದಂಬೆಕೋಡಿ, ಬ್ಲಾಕ್ ಕಾರ್ಯದರ್ಶಿ ಮನು ಪೆರುಮುಂಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಅಕ್ರಮ ಸಕ್ರಮ ಸದಸ್ಯೆ ತುಳಸಿ, ನಾಪೋಕ್ಲು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಕೆ.ಕೆ, ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ಬಷೀರ್ ಜಿ.ಪಂ. ಮಾಜಿ ಸದಸ್ಯ ಮುಯುದ್ದೀನ್, ಗ್ರಾ.ಪಂ. ಸದಸ್ಯರುಗಳಾದ ಆದಂ, ಕುಸುಮ, ಶಶಿಕಲಾ, ಭೂದೇವಿ, ಸೈದಲವಿ, ಪ್ರಮುಖರಾದ ತಿರುಮಲ ಸೋನಾ, ಭಾರತಿ ಕುಶಲ ಚೆಂಬು, ಸೋಮಣ್ಣ ಬಾಲಂಬಿ, ಚೆನ್ನಪ್ಪ, ಉಮೇಶ್ ನಿಡುಬೆ, ರಿತಿನ್, ರುನೈಜ್, ರಾಜೇಶ್, ಅಬೂಬಕ್ಕರ್ ಪೆರಾಜೆ, ಶಿಯಾಬ್ ಮತ್ತು ಇನ್ನಿತರರು ಹಾಜರಿದ್ದರು.