ಸಿದ್ದಾಪುರ, ಜೂ. ೨೧ : ವಾಹನದಲ್ಲಿ ಅನಧಿಕೃತವಾಗಿ ಬಂದೂಕು ಹಾಗೂ ಕಾಡತೂಸು ಇರಿಸಿದ ಆರೋಪದಲ್ಲಿ ನಾಲ್ವರು ಯುವಕರನ್ನು ಅರಣ್ಯ ಇಲಾಖೆಯ ನೆರವಿನೊಂದಿಗೆ ಪೊಲೀಸರು ಮಾಲ್ದಾರೆ ಸಮೀಪದ ಅರಣ್ಯ ತಪಾಸಣಾ ಕೇಂದ್ರದಲ್ಲಿ ಬಂಧಿಸಿದ್ದಾರೆ.
ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ಮಂಗಲ ಗ್ರಾಮದ ಯಶೋಧರ ಡಿ.ಬಿ. (೩೨), ಮರಗೋಡು ಗ್ರಾಮದ ಪ್ರವೀಣ(೪೪),ಅರೆಕಾಡು ಗ್ರಾಮದ ಸುಬ್ಬಯ್ಯ ಕೆ.ಪಿ. (೩೦),ಸೋಮಣ್ಣ ಸಿ.ಕೆ.(೩೧) ಬಂಧಿತರು.
ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್ಮಂಗಲ ನಿವಾಸಿ ಯಶೋಧರ ಎಂಬ ಯುವಕ ಮೂವರು ಸ್ನೇಹಿತರೊಂದಿಗೆ ಕೆಎ೦೫ ಎನ್ಜಿ ೨೪೯೭ ಇನ್ನೋವ ವಾಹನದಲ್ಲಿ ರಾತ್ರಿ ೧೨ ಗಂಟೆಗೆ ಲಿಂಗಾಪುರ ಮಾರ್ಗವಾಗಿ ಸಿದ್ದಾಪುರ ಕಡೆಗೆ ಬರುತ್ತಿರುವ ಸಂದರ್ಭದಲ್ಲಿ ಕೊಡಗು-ಮೈಸೂರು ಗಡಿ ಭಾಗದ ಲಿಂಗಾಪುರ ಅರಣ್ಯ ತಪಾಸಣೆ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಹನವನ್ನು ತಪಾಸಣೆ ಮಾಡಿದ್ದಾರೆ. ವಾಹನದಲ್ಲಿ ಜೋಡಿ ನಳಿಕೆ ಬಂದೂಕು ಹಾಗೂ ಎರಡು ಜೀವಂತ ಕಾಡತೂಸು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿ ದಾಗ ಚಾಲಕನ ಹೇಳಿಕೆಯಲ್ಲಿ ಸಂಶಯಗೊAಡ ಅರಣ್ಯ ಇಲಾಖಾ ಸಿಬ್ಬಂದಿಗಳು ಆನೆಚೌಕೂರು ಉಪ ವಲಯ ಅರಣ್ಯಾಧಿಕಾರಿ ಚನ್ನವೀರೇಶ್ ಗಾಣೇಗಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
(ಮೊದಲ ಪುಟದಿಂದ) ಕೂಡಲೇ ಸ್ಥಳಕ್ಕಾಗಮಿಸಿದ ಉಪವಲಯ ಅರಣ್ಯಾಧಿಕಾರಿ ಬಂದೂಕನ್ನು ಪರಿಶೀಲಿಸಿದಾಗ ಸರಕಾರದ ಯಾವುದೇ ಪರವಾನಗಿ ಹೊಂದದೇ ಇರುವುದು ಬೆಳಕಿಗೆ ಬಂದಿದೆ.ಕೂಡಲೇ ಬಂದೂಕು, ವಾಹನ ಸಹಿತ ನಾಲ್ವರನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ಅನಧಿಕೃತವಾಗಿ ಮೀಸಲು ಅರಣ್ಯದಲ್ಲಿ ಬಂದೂಕುಗಳನ್ನು ಬಳಸಿರುವ ಆರೋಪದಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸರು ನಾಲ್ವರನ್ನು ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.