ಪ್ರಕೃತಿಯ ಸಮತೋಲನಕ್ಕೆ ಎಲ್ಲ ಜೀವಚರಗಳೂ ಮುಖ್ಯ. ಅರಣ್ಯದಲ್ಲಿ ಮೇಯಲು ಹುಲ್ಲು ಅತಿಯಾಗಿ ಬೆಳೆಯದಂತೆ ಜಿಂಕೆ-ಕಡವೆಗಳು ನೋಡಿ ಕೊಂಡರೆ, ಜಿಂಕೆ-ಕಡವೆಗಳ ಸಂಖ್ಯೆ ಹೆಚ್ಚಾಗಿ ಮೇವು ಸಮೃದ್ಧವಾಗಿ ಬೆಳೆಯಲು ತೊಡಕಾಗದಂತೆ ಹುಲಿ-ಸಿಂಹಗಳು ನೋಡಿಕೊಳ್ಳುತ್ತವೆ. ಎಲ್ಲ ಜೀವಿಗಳೂ ಒಂದಲ್ಲ ಒಂದು ರೀತಿ ಪ್ರಕೃತಿಯ ಸಮತೋಲನವನ್ನು ಕಾಪಾಡಿ ಕೊಂಡು ಬರುತ್ತವೆ. ಆದರೆ ಮಾನವನ ಅತ್ಯಾಧುನಿಕ ಜೀವನಶೈಲಿಯು ಪ್ರಕೃತಿಯ ಸಮತೋಲನವನ್ನು ಅಸಮತೋಲನದತ್ತ ಸಾಗಿಸುತ್ತಿರುವ ಉದಾಹರಣೆಗಳೇ ಹೆಚ್ಚಿವೆ. ಮಾನವ ನಿರ್ಮಿತ ವಿಪತ್ತು, ಮಾನವ ನಿರ್ಮಿತ ಹವಾಮಾನ ವೈಪರಿತ್ಯ, ಮಾನವ ನಿರ್ಮಿತ ಪ್ರವಾಹ ಎಂಬಿತ್ಯಾದಿ ವಾಕ್ಯಗಳು ಪ್ರಸ್ತುತ ಕಾಲಘಟ್ಟದಲ್ಲಿ ಸರ್ವೇ ಸಮಾನ್ಯವಾಗಿದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ‘ಮಾನವ ನಿರ್ಮಿತ ಅತಿದೊಡ್ಡ ಅರಣ್ಯ..!’ ಎಂಬ ವಿಶೇಷತೆಗೆ ಗುಜರಾತಿನ ಕುಚ್ ಜಿಲ್ಲೆಯ ಬುಜ್ ನಗರ ಸಾಕ್ಷಿಯಾಗಿದೆ. ೨೦೦೧ರಲ್ಲಿ ಇಲ್ಲಿ ಸಂಭವಿಸಿದ ರಿಕ್ಟರ್ ಸ್ಕೇಲ್ನಲ್ಲಿ ೭ಕ್ಕೂ ಮಿಗಿಲಾಗಿ ದಾಖಲಾದ ತೀವ್ರ ತರಹದ ಭೂಕಂಪನದಿAದ ತತ್ತರಿಸಿದ್ದ ಜಿಲ್ಲೆ, ಇದೀಗ ಅಂದು ಪ್ರಾಣ ಕಳೆದುಕೊಂಡ ಸಹಸ್ರ ಮಂದಿಯ ಉಸಿರಿನಂತಿರುವ ಲಕ್ಷ ಮರಗಳ ಮೂಲಕ ಪ್ರಕೃತಿಗೆ ವರದಾನವಾಗಿದೆ. ಇಡೀ ವಿಶ್ವದಲ್ಲಿಯೇ ಅತಿದೊಡ್ಡ ಮಾನವ ನಿರ್ಮಿತ ‘ಮಿಯಾವಾಕಿ’ ಶೈಲಿಯ ಅರಣ್ಯ ಎಂಬ ಖ್ಯಾತಿಗೆ ಒಳಗಾಗುವುದಲ್ಲದೆ, ಭೂಕಂಪನದಲ್ಲಿ ಸಾವಿಗೀಡಾದವರ ನೆನಪಿಗೆಂದು ನಿರ್ಮಿಸಿ ೨೦೨೨ರಲ್ಲಿ ಉದ್ಘಾಟನೆಗೊಂಡ ಇಲ್ಲಿನ ಸ್ಮೃತಿವನ್ ಸಂಗ್ರಹಾಲಯವು ಕಳೆದ ವಾರವಷ್ಟೆ UಓಇSಅಔ(Uಟಿiಣeಜ ಓಚಿಣioಟಿs ಇಜuಛಿಚಿಣioಟಿಚಿಟ, Sಛಿieಟಿಣiಜಿiಛಿ ಚಿಟಿಜ ಅuಟಣuಡಿಚಿಟ ಔಡಿgಚಿಟಿizಚಿಣioಟಿ) ಅತ್ಯುತ್ತಮ ವಾಸ್ತುಶಿಲ್ಪಕ್ಕೆ ಕೊಡಮಾಡುವ ವರ್ಸೆಲಿಸ್ ಪ್ರಶಸ್ತಿಗೆ ಭಾಜನವಾಗಿದ್ದು, ವಿಶ್ವದ ೭ ಅತ್ಯುತ್ತಮ ವಾಸ್ತುಶಿಲ್ಪ ಹೊಂದಿರುವ ವಸ್ತು ಸಂಗ್ರಹಾಲಯಗಳಲ್ಲಿ ಸ್ಥಾನ ಪಡೆದಿದೆ.
ಬೆಟ್ಟ-ಗುಡ್ಡ ಆವರಿತ ಬಂಜರು ಪ್ರದೇಶದಲ್ಲಿ ೩ ಲಕ್ಷ ಮರಗಳು..!
ಬುಜ್ ನಗರದ ಬಂಜರು ಭೂಮಿಯಲ್ಲಿ ೨೦೦೧ನೆ ಇಸವಿಯಲ್ಲಿ ತೀವ್ರತರಹದ ಭೂಕಂಪನದಿAದಾಗಿ ಸುಮಾರು ೧೩ ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು. ಇವರುಗಳ ನೆನಪಿಗಾಗಿ ಇಂದು ಇಲ್ಲಿ ಸುಮಾರು ೪೭೦ ಎಕ್ರೆ ಪ್ರದೇಶದಲ್ಲಿ ೩ ಲಕ್ಷಕ್ಕೂ ಮಿಗಿಲಾಗಿ ಮರಗಳನ್ನು ನೆಡಲಾಗಿದೆ. ಅಗಲಿದ ೧೨,೯೩೨ ಮಂದಿಯ ನೆನಪಿಗೆ ಮೊದಲ ಹಂತದಲ್ಲಿ ೧೨,೯೩೨ ಮರಗಳನ್ನು ನೆಡಲಾಗಿತ್ತು. ಹಂತ-ಹAತವಾಗಿ ವಿವಿಧ ಜಾತಿಯ ಮರಗಳನ್ನು ನೆಡಲಾಗಿದ್ದು, ಇಂದು ೪೭೦ ಎಕ್ರೆ ವಿಸ್ತೀರ್ಣದ ೩ ಲಕ್ಷಕ್ಕೂ ಹೆಚ್ಚು ಮರಗಳಿ ರುವ ಅರಣ್ಯವೇ ಸೃಷ್ಟಿಯಾಗಿದೆ. ಇದರ ನಡುವೆ ಭೂಕಂಪನದ ಕಥೆ ಹೇಳುವ UಓಇSಅಔ ಇಂದ ಗುರುತಿಸಲ್ಪಟ್ಟಿರುವ ಅತ್ಯುತ್ತಮ ವಾಸ್ತುಶಿಲ್ಪ ಹೊಂದಿರುವ ಸಂಗ್ರಹಾಲಯವು ತಲೆ ಎತ್ತಿದೆ. ೫೦ ಚೆಕ್ ಡ್ಯಾಮ್ಗಳ ಮೂಲಕ ಸಂಗ್ರಹಾಲಯ ನಿರ್ವಹಣೆ ಅಲ್ಲದೆ ಅಂತರ್ಜಲ ವೃದ್ಧಿ ಕೂಡ ಆಗುತ್ತಿದೆ. ಪ್ರತಿ ಚೆಕ್ಡ್ಯಾಮ್ಗಳಲ್ಲಿ ಭೂಕಂಪನದಲ್ಲಿ ಮೃತರಾದ ಹೆಸರುಗಳನ್ನು ನಾಮಫಲಕದಲ್ಲಿ ಇರಿಸಲಾಗಿದೆ. ಸಂಗ್ರಹಾಲಯವು ಅಲ್ಲೇ ನಿರ್ಮಿಸಲಾಗಿರುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದ ಸಹಕಾರದಿಂದ ಕಾರ್ಯಚರಿಸುತ್ತಿದೆ.
ಮಿಯಾವಾಕಿ ಎಂದರೇನು...?
ಜಪಾನ್ ರಾಷ್ಟçದ ಸಸ್ಯತಜ್ಞ ಅಕಿರ ಮಿಯಾವಾಕಿ ಅವರು ಕಂಡು ಹಿಡಿದಿರುವ ಅರಣ್ಯೀಕರಣದ ಕ್ರಮವು ಇಂದು ವಿಶ್ವಪ್ರಸಿದ್ಧವಾಗಿದ್ದು, ಈ ಮೂಲಕ ಅರಣ್ಯೀಕರಣ ಮಾಡಿದಲ್ಲಿ ಅರಣ್ಯ ೧೦ ಪಟ್ಟು ವೇಗ ಹಾಗೂ ೩೦ ಪಟ್ಟು ಸಮೃದ್ಧವಾಗಿ ಬೆಳೆಯುತ್ತದೆ. ಸ್ಥಳೀಯ ಮಣ್ಣಿನ ಫಲವತ್ತತೆಗೆ ಅನುಸಾರ ಆಯ್ದ ವಿವಿಧ ಜಾತಿಗಳ ಸಸಿಗಳನ್ನು ಬಹಳ ಹತ್ತಿರದಲ್ಲಿ ನೆಟ್ಟು ಸುಮಾರು ೩ ವರ್ಷಗಳಾದರೂ ಪೋಷಿಸಿದಲ್ಲಿ ಅರಣ್ಯೀಕರಣವು ವೇಗ ಸಾಧಿಸುತ್ತದೆ. ಸಮೃದ್ಧವಾಗಿ ಗಿಡಗಳು ಬೆಳೆಯುವುದರಿಂದ ಸೂರ್ಯನ ಬೆಳಕು ನೆಲಕ್ಕೆ ತಗುಲದೆ ಕಚಡ ಗಿಡಗಳ ಬೆಳವಣಿಗೆಯನ್ನೂ ಈ ಕ್ರಮದ ಮೂಲಕ ತಡೆಯಬಹುದಾಗಿದೆ. ೧೯೭೦ರ ಇಸವಿಯಲ್ಲಿ ಜಪಾನ್ ರಾಷ್ಟçದ ಅಕಿರ ಮಿಯಾವಾಕಿ ಅವರು ಈ ಕ್ರಮವನ್ನು ಕಂಡು ಹಿಡಿದಿದ್ದು, ಇಂದು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟçಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಕೊಡಗು ಜಿಲ್ಲೆಯ ನಿಸರ್ಗಧಾಮದಲ್ಲಿಯೂ ಇದೇ ರೀತಿಯ ಕ್ರಮ ಬಳಸಿ ಅರಣ್ಯೀಕರಣ ಮಾಡಲಾಗಿದೆ.
ಮಿಯಾವಾಕಿ ಕ್ರಮದ ಮೂಲಕ ಅರಣ್ಯೀಕರಣ ಮಾಡಿದಲ್ಲಿ :
v ಇತರ ಕ್ರಮಗಳಿಗಿಂತ ೩೦ ಪಟ್ಟು ಹೆಚ್ಚು ಮರಗಳನ್ನು ಆಯ್ದ ಸ್ಥಳದಲ್ಲಿ ನೆಡಬಹುದಾಗಿದೆ.
v ಆಯ್ದ ಸ್ಥಳದಲ್ಲಿ ಶೇ.೩೦೦ ರಷ್ಟು ಹೆಚ್ಚು ಸಸಿ ತಳಿಗಳು ಬೆಳೆಸಬಹುದು.
v ವಾತಾವರಣದಲ್ಲಿನ ಕಾರ್ಬನ್ಡೈಆಕ್ಸೆöÊಡ್ ಅಪಾಯಕಾರಿ ಅನಿಲವನ್ನು ೩೦ ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ.
v ಪ್ರತಿ ವರ್ಷ ಕನಿಷ್ಟ ೧ ಮೀಟರ್ ಎತ್ತರಕ್ಕಾದರೂ ನೆಟ್ಟ ಸಸಿಗಳು ಬೆಳೆಯುತ್ತವೆ.
v ಸಸಿ ನೆಟ್ಟ ೩ ವರ್ಷಗಳ ನಂತರ ಯಾವುದೇ ನಿರ್ವಹಣೆಯ ಅಗತ್ಯವಿಲ್ಲ. ನೈಸರ್ಗಿಕವಾಗಿ ಅರಣ್ಯ ಹಬ್ಬಿ ವಿವಿಧ ಪ್ರಾಣಿ-ಪಕ್ಷಿಗಳಿಗೂ ಆಸರೆಯಾಗಲಿದೆ.
v ಯಾವುದೇ ರೀತಿಯ ರಾಸಾಯನಿಕದ ಬಳಕೆಯಿಲ್ಲ.
ಫಾರೆಸ್ಟ್ ಕ್ರಿಯೇರ್ಸ್ ಶ್ರಮ-೨೦೩೦ರೊಳಗೆ ೧೦೦
ಕೋಟಿ ಮರಗಳನ್ನು ನೆಡುವ ಗುರಿ
ದಿಪೆನ್ ಜೈನ್, ಡಾ. ಆರ್. ಕೆ. ನಾಯರ್, ಎಲ್. ಎಸ್. ಚೌದ್ರಿ ಅವರುಗಳು ಸ್ಥಾಪಿಸಿರುವ ಫಾರೆಸ್ಟ್ ಕ್ರಿಯೇರ್ಸ್ ಎಂಬ ಸಂಸ್ಥೆಯು ಭಾರತದಲ್ಲಿ ಮಿಯಾವಾಕಿ ಶೈಲಿಯಲ್ಲಿ ಅರಣ್ಯೀಕರಣ ಮಾಡುವತ್ತ ಹೆಜ್ಜೆ ಇಟ್ಟಿದೆ. ಗುಜರಾತ್ನ ಬುಜ್ ನಲ್ಲಿರುವ ವಿಶ್ವದ ಅತಿದೊಡ್ಡ ಮಿಯಾವಾಕಿ ಅರಣ್ಯವನ್ನೂ ಈ ಸಂಸ್ಥೆಯ ನೆರವಿನಿಂದಲೇ ಮಾಡಲಾಗಿದೆ. ೨೦೧೪ರಲ್ಲಿ ೧,೫೦೦ ಮರಗಳನ್ನು ಮಿಯಾವಾಕಿ ಶೈಲಿಯಲ್ಲಿ ನೆಟ್ಟ ಈ ಸಂಸ್ಥೆ, ೨೦೩೦ ರೊಳಗೆ ೧೦೦ ಕೋಟಿ ಮರಗಳನ್ನು ನೆಡುವ ಅಸಾಧಾರಣ ಗುರಿ ಹೊಂದಿದೆ. ಭಾರತದಾದ್ಯಂತ ಈಗಾಗಲೇ ೫೦ ಲಕ್ಷ ಚದರ ಅಡಿ ವ್ಯಾಪ್ತಿಯನ್ನು ಈ ಸಂಸ್ಥೆ ಮಿಯಾವಾಕಿ ಶೈಲಿಯ ಮೂಲಕ ಸಂಪೂರ್ಣ ಅರಣ್ಯೀಕರಣ ಮಾಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು ೧೦೩ ಯೋಜನೆ ಗಳ ಮೂಲಕ ಸಂಸ್ಥೆಯು ಈ ಸಾಧನೆ ಮಾಡಿದೆ.
-ಪ್ರಜ್ವಲ್ ಜಿ. ಆರ್.,
ಮಡಿಕೇರಿ.