ಸೋಮವಾರಪೇಟೆ, ಜೂ. ೨೦: ಪಟ್ಟಣ ಸಮೀಪದ ನಗರೂರು ಗ್ರಾಮದ ಗ್ಲೆನಿಟಾ ಡಿಸೋಜ ಅವರಿಗೆ ಬೆಂಗಳೂರಿನ ಜೈನ್ ವಿಶ್ವ ವಿದ್ಯಾನಿಲಯದಿಂದ ಪಿಹೆಚ್‌ಡಿ ಲಭಿಸಿದೆ. ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಎಸ್.ಕೆ. ನಟರಾಜ್ ಅವರ ಮಾರ್ಗದರ್ಶನದಲ್ಲಿ, ‘ಸುಸ್ಥಿರ ಕಾರ್ಯತಂತ್ರಗಳ ಭಾಗವಾಗಿ ನೀರಿನ ಸಂಸ್ಕರಣಾ ಸಮಸ್ಯೆಗಳಿಗೆ ಪರಿಹಾರಗಳು’ (ವಾಟರ್ ಟ್ರೀಟ್‌ಮೆಂಟ್) ಎಂಬ ವಿಷಯದಲ್ಲಿ ನಡೆಸಿದ ಸಂಶೋಧನೆಗೆ ಪಿಹೆಚ್‌ಡಿ ಲಭಿಸಿದೆ.

ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಓಎಲ್‌ವಿ ಶಾಲೆ, ಪಿಯುಸಿ ಶಿಕ್ಷಣವನ್ನು ಸಂತ ಜೋಸೆಫರ ಕಾಲೇಜು, ಬಿಎಸ್‌ಸಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯ, ಎಂಎಸ್ಸಿಯನ್ನು ಜೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದು, ಬೆಂಗಳೂರು ಜೈನ್ ಕಾಲೇಜಿನ ನ್ಯಾನೋ ತಂತ್ರಜ್ಞಾನ ವಿಭಾಗದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ.

ಗ್ಲೆನಿಟಾ ಅವರು ನಗರೂರು ಗ್ರಾಮದ ನಿವಾಸಿ, ಓಎಲ್‌ವಿ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿ ಗ್ಲಾಡಿಸ್ ಡಿಸೋಜ-ದಿ. ಬ್ಯಾಪ್ಟಿಸ್ಟ್ ಡಿಸೋಜ ಅವರ ಪುತ್ರಿ.