ಸೋಮವಾರಪೇಟೆ, ಜೂ. ೧೯: ಗ್ರಾಮೀಣ ಪ್ರದೇಶದ ಮಕ್ಕಳು ಎಲ್ಲಾ ರಂಗದಲ್ಲೂ ಪ್ರತಿಭಾನ್ವಿತರಾಗಿದ್ದು, ಇವರುಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಹೇಳಿದರು.
ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ನಾಟ್ಯಕಲಾ ನೃತ್ಯ ಶಾಲೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಭಾನ್ವಿತರಿಗೆ ಉತ್ತಮ ವೇದಿಕೆಗಳ ಅವಶ್ಯಕತೆ ಇದ್ದು, ಈ ಮೂಲಕ ಪ್ರತಿಭೆ ಹೊರತರಲು ಪೂರಕವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಿಕಾ ಭವನದ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಶಾಲೆಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯೂ ಅವಶ್ಯಕ. ಇಂದು ದೃಶ್ಯ ಮಾಧ್ಯಮಗಳು ಸ್ಪರ್ಧೆಗಳನ್ನು ಆಯೋಜಿಸಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ನಾಡಿನಾದ್ಯಂತ ಪರಿಚಯ ಮಾಡುತ್ತಿರುವುದರಿಂದ ಎಲ್ಲರಲ್ಲೂ ಆಸಕ್ತಿ ಹೆಚ್ಚುತ್ತಿದೆ ಎಂದರು.
ರಾಷ್ಟಿçÃಯ ನೃತ್ಯ ತರಬೇತುದಾರ ವಿನೋದ್ ಕರ್ಕೇರಾ ಮಾತನಾಡಿ, ನೃತ್ಯವೆಂಬುದು ಜೀವನದ ಅವಿಭಾಜ್ಯ ಅಂಗವೆAಬAತಾಗಿದೆ. ಮಕ್ಕಳಿಂದ ವಯೋವೃದ್ಧರವರೆಗೂ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಅಭಿಪ್ರಾಯಿಸಿದರು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಾ ವಿಜೇತ ರಾಹುಲ್ ರಾವ್, ಕಿರುತೆರೆ ನಟ ಪ್ರವೀಣ್, ಕಿರುತೆರೆ ನಿರ್ದೇಶಕ ಅನಿಶ್ ಪೂಜಾರಿ, ಕೆ.ಟಿ.ಡಿ.ಓ. ತಾಲೂಕು ಅಧ್ಯಕ್ಷ ರವಿ, ಕಾಗಡಿಕಟ್ಟೆ ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ್, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗಂಗಾ, ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷೆ ರುಬೀನಾ, ನಾಟ್ಯ ಕಲಾ ಶಾಲೆಯ ಅಭಿಷೇಕ್, ಅಜಿತ್, ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.