ಸೋಮವಾರಪೇಟೆ, ಜೂ. ೧೯: ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ನ ನೂತನ ಸಾಲಿನ ಅಧ್ಯಕ್ಷರಾಗಿ ಜೆ.ಕೆ. ಪೊನ್ನಪ್ಪ ಹಾಗೂ ಕಾರ್ಯದರ್ಶಿಯಾಗಿ ಕೆ.ಡಿ. ಬಿದ್ದಪ್ಪ ಅವರುಗಳು ಅಧಿಕಾರ ಸ್ವೀಕರಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸಾಲಿನ ಸಮಿತಿ ಸದಸ್ಯರುಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಹಿಂದಿನ ಸಾಲಿನ ರೋಟರಿ ಚಾಮರಾಜನಗರ ಜಿಲ್ಲಾ ಗವರ್ನರ್ ಡಾ. ಆರ್.ಎಸ್. ನಾಗಾರ್ಜುನ್, ಪ್ರಪಂಚದಲ್ಲಿ ೧೧೯ ವರ್ಷಗಳಿಂದ ನಂಬಿಕೆಯನ್ನು ಉಳಿಸಿಕೊಂಡು ಸೇವೆ ಮಾಡುತ್ತಿರುವ ಪ್ರಮುಖ ಅಂರ್ರಾಷ್ಟಿçÃಯ ಸಂಸ್ಥೆಯಾಗಿ ರೋಟರಿ ಗುರುತಿಸಿ ಕೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಅಂತರರಾಷ್ಟಿçÃಯ ಸಂಸ್ಥೆಗಳು ತಮ್ಮ ಯೋಜನೆಗಳಿಗೆ ರೋಟರಿ ಮಾರ್ಗ ಅನುಸರಿಸುತ್ತಿರುವುದನ್ನು ಕಾಣಬಹುದು ಎಂದರು.
ಸರ್ಕಾರ ಹಾಗೂ ಹಲವಾರು ಸಂಘ ಸಂಸ್ಥೆಗಳೊAದಿಗೆ ರೋಟರಿ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದು ಸಂಸ್ಥೆಯ ಮಹಾನ್ ಕಾರ್ಯಗಳಲ್ಲಿ ಒಂದು. ದೊಡ್ಡ ಕನಸ್ಸುಗಳನ್ನು ಇರಿಸಿಕೊಂಡು, ಅದನ್ನು ಕಾರ್ಯಗತ ಮಾಡುವ ಯೋಜನೆಯನ್ನು ಮಾಡಿಕೊಂಡಲ್ಲಿ ಮಾತ್ರ ಅದು ಯಶಸ್ವಿಯಾಗುತ್ತದೆ. ಕೇವಲ ಕೆಲವೇ ಜನರಿಗೆ ತಲುಪುವ ಯೋಜನೆಯನ್ನು ಬಿಟ್ಟು ಸಾವಿರಾರು ಜನರಿಗೆ ಸೇವೆ ನೀಡುವಂತಹ ಕೆಲಸ ಮಾಡಬೇಕೆಂದು ಸಮಿತಿ ಸದಸ್ಯರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ಡಾ. ಹರಿ ಎ. ಶೆಟ್ಟಿ, ವಲಯ ಸೇನಾನಿ ಉಲ್ಲಾಸ್ ಕೃಷ್ಣ ಹಾಗೂ ಎಂ.ಎA. ಪ್ರಕಾಶ್, ಮಾಜಿ ಅಧ್ಯಕ್ಷ ವಸಂತ ನಂಗಾರು, ಮಾಜಿ ಕಾರ್ಯದರ್ಶಿ ಚೇತನ್ ಚಂದ್ರಾಜು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.