ದಕ್ಷಿಣದ ಕಾಶ್ಮೀರವೆನಿಸಿದ ಕೊಡಗು, ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾದ, ಕಾಫಿ ತೋಟಗಳಿಂದ ಕಂಗೊಳಿಸುತ್ತಿರುವ, ಏಲಕ್ಕಿ, ಕಿತ್ತಳೆ, ಕಾಳುಮೆಣಸಿನಿಂದ ಘಮ ಘಮಿಸುತ್ತಿರುವ ಪುಟ್ಟ ಜಿಲ್ಲೆ. ಕಣ್ಮನ ತಣಿಸುವ ಹಸಿರು ಸಿರಿಯ ಮಡಿಲಿನ ಇಂತಹ ಸುಂದರ ತಾಣದಲ್ಲಿರುವ ಸೋಮವಾರ ಪೇಟೆಯ ಶ್ರೀ ಸೋಮೇಶ್ವರ ದೇವಾಲಯಕ್ಕೆ ಈಗ ೭೫ನೇ ಸಂವತ್ಸರದ ಸಂಭ್ರಮ. ಈ ಸಂದರ್ಭದಲ್ಲಿ ದೇವಸ್ಥಾನದ ಕಿರು ಪರಿಚಯವನ್ನು ನೀಡುವುದು ಸಮಯೋಚಿತವೆನಿಸುತ್ತದೆ.
ಶ್ರೀ ಸೋಮೇಶ್ವರ ದೇವಾಲಯಕ್ಕೆ ತನ್ನದೇ ಆದ ಸ್ವಾರಸ್ಯಕರ ಹಿನ್ನೆಲೆ ಇದೆ. ಬಹಳ ವರ್ಷಗಳ ಹಿಂದಿನ ಮಾತು. ೧೯೪೩ರಲ್ಲಿ ಶೃಂಗೇರಿಯ ಧರ್ಮಾಧಿಕಾರಿಗಳಾದ ಶ್ರೀ ಕಳಿಲೆ ಶೇಷಶಾಸ್ತಿçಗಳು ಚಾತುರ್ಮಾಸದ ಪೂಜೆಯನ್ನು ಒಂದು ತಿಂಗಳ ಕಾಲ ನಡೆಸಲು ಇಲ್ಲಿಗೆ ಬಂದರು. ಅವರಿಗೆ ಇಲ್ಲಿ ಶಿವಾಲಯವಿಲ್ಲದ ಕೊರತೆ ಬೇಸರ ತಂದಿತು. ಪುರ ಪ್ರಮುಖರಲ್ಲಿ ಒಬ್ಬರಾದ ಕೆ. ಚಂದ್ರಶೇಖರಯ್ಯನವರಲ್ಲಿ ವಿಷಯ ಪ್ರಸ್ತಾಪಿಸಿ ದೇವಾಲಯ ನಿರ್ಮಾಣವಾದರೆ ತಾವೂ ಅಲ್ಪ ಸ್ವಲ್ಪ ಸಹಾಯ ಮಾಡುವುದಾಗಿ ಹೇಳಿದರು. ಈ ಸಂದರ್ಭ ಆಗಿನ ಲೋಕಸೇವಾ ಪ್ರವೀಣೆ ಎಂದು ಹೆಸರುವಾಸಿಯಾಗಿದ್ದ ದೊಡ್ಡಮನೆಯ ಡಿ. ಸಾಕಮ್ಮ ಅವರು ತಮ್ಮ ಸ್ವಂತ ಜಾಗವನ್ನು ದೇವಾಲಯ ನಿರ್ಮಾಣಕ್ಕೆ ಬಿಟ್ಟುಕೊಟ್ಟರಲ್ಲದೆ ಧನ ಸಹಾಯವನ್ನು ಮಾಡಿದರು. ಈ ಪ್ರೋತ್ಸಾಹದಿಂದ ಉತ್ತೇಜನ ದೊರಕಿ ದೇವಾಲಯ ಸಮಿತಿ ರಚನೆ, ಸುತ್ತಮುತ್ತಲ ಜನರಿಂದ ವಂತಿಗೆ ಸ್ವೀಕಾರ, ದೇವಸ್ಥಾನದ ನೀಲನಕ್ಷೆ ತಯಾರಿಕೆ ಮುಂತಾದ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿ ಕಾರ್ಯೋನ್ಮುಖರಾದವರು ದೊಡ್ಡಮನೆಗೆ ಸೇರಿದ ಗೋವಿಂದಪ್ಪನವರು. ದೇವಾಲಯದ ಸಮಿತಿಯಲ್ಲಿ ಡಿ. ಸಾಕಮ್ಮ ಅವರ ಪುತ್ರ ಡಿ. ಸಿದ್ದಣ್ಣ ಅಧ್ಯಕ್ಷರಾಗಿ ಕೆ. ಚಂದ್ರಶೇಖರಯ್ಯ ಗËರವ ಕಾರ್ಯದರ್ಶಿಗಳಾಗಿ, ಇತರ ಪ್ರಮುಖರು ಸದಸ್ಯರಾಗಿ ಉತ್ತಮ ಕಾರ್ಯನಿರ್ವಹಿಸಿದರು. ಎಲ್ಲರ ಸಹಕಾರದಿಂದ ದೇವಾಲಯದ ನಿರ್ಮಾಣ ಕಾರ್ಯ ೧೯೪೯ರಲ್ಲಿ ಪೂರ್ಣಗೊಂಡಿತು.
ದೇವಸ್ಥಾನದ ಗರ್ಭಗುಡಿಯನ್ನು ಅಲಂಕರಿಸಿರುವ ಶಿವಲಿಂಗದ ಹಿನ್ನೆಲೆಯೂ ಕುತೂಹಲದಿಂದ ಕೂಡಿದೆ. ಅಂದು ಶೃಂಗೇರಿಯ ಹಿರಿಯ ಸ್ವಾಮೀಜಿಗಳಾಗಿದ್ದ ಶ್ರೀ ನರಸಿಂಹ ಭಾರತಿ ಅವರಿಗೆ ಒಮ್ಮೆ ತುಂಗಾನದಿಯಲ್ಲಿ ಎರಡು ಶಿವಲಿಂಗ ದೊರೆಯಿತಂತೆ. ಅದರಲ್ಲಿ ಒಂದನ್ನು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೊಟ್ಟು ಇನ್ನೊಂದನ್ನು ಸೋಮವಾರಪೇಟೆಯ ಶ್ರೀ ಸೋಮೇಶ್ವರ ದೇವಾಲಯಕ್ಕೆ ದಯಪಾಲಿಸಿದರು. ಶೃಂಗೇರಿಯಿAದ ಬಂದ ಋತ್ವಿಜರಿಂದಲೇ ಪ್ರತಿಷ್ಠಾಪನಾ ಕಾರ್ಯ ಸಾಂಗವಾಗಿ ನೆರವೇರಿತು. ಇಂದು ಶ್ರೀ ಸೋಮೇಶ್ವರ ದೇವಾಲಯವು ಅಲ್ಲಿರುವ ಶಿವಲಿಂಗದ ಜೊತೆಗೆ ಕುಂಭಕೋಣAನ ಶಿಲ್ಪಿ ಹಾಗೂ ಮೈಸೂರಿನ ಶಿಲ್ಪಿ ಶ್ರೀ ಸಿದ್ಧಲಿಂಗ ಸ್ವಾಮಿಗಳಿಂದ ತಯಾರಾದ ಗಣಪತಿ, ಪಾರ್ವತಿ, ನಂದಿ ಹಾಗೂ ನವಗ್ರಹ ವಿಗ್ರಹಗಳಿಂದ ಕಂಗೊಳಿಸುತ್ತಿದೆ. ಶಿವಲಿಂಗವು ಸೋಮವಾರಪೇಟೆಯಲ್ಲಿರುವ ಕಾರಣ ಶ್ರೀ ಸೋಮೇಶ್ವರ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಿದೆ.
ದೇವಾಲಯದ ಉತ್ಸವ ಜಾತ್ರೆಗಳ ಬಗ್ಗೆ: ಹಿಂದೆ ನವರಾತ್ರಿ ಹಬ್ಬದಲ್ಲಿ ದನಗಳ ಜಾತ್ರೆ, ಉತ್ಸವ ತುಂಬಾ ವಿಜೃಂಭಣೆಯಿAದ ನಡೆಯುತ್ತಿತ್ತು. ಕಾಲಕ್ರಮೇಣ ಜನರ ನಿರುತ್ಸಾಹಕ್ಕೆ ಬಲಿಯಾಗಿ ನಿಂತಿತು. ಇಂದಿನ ಪೀಳಿಗೆ ಬ್ರಾಹ್ಮಣ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತೋಷದ ವಿಷಯ. ಪ್ರತಿನಿತ್ಯದ ಪೂಜಾ ಕಾರ್ಯಗಳು ತಪ್ಪದೇ ನಡೆಯುವುದರ ಜೊತೆಗೆ ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಸಾಂಗವಾಗಿ ನೆರವೇರುತ್ತಿದೆ. ಇಲ್ಲಿನ ಬ್ರಾಹ್ಮÀಣ ಸಮಾಜದ ಸದಸ್ಯ ಕುಟುಂಬದವರು ಪ್ರತಿ ಸೋಮವಾರ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಸುತ್ತಿದ್ದಾರೆ.
ದೇವಾಲಯದ ಧಾರ್ಮಿಕ ಪೂಜಾ ವಿಧಿಗಳ ಬಗ್ಗೆ ಹೇಳುವುದಾದರೆ ಯುಗಾದಿ, ಶಂಕರ ಜಯಂತಿ, ಸಾಮೂಹಿಕ ಉಪಾಕರ್ಮ, ಪ್ರತಿ ತಿಂಗಳು ಸಂಕಷ್ಟಹರ ಗಣಪತಿ ಪೂಜೆ, ಶ್ರೀ ಕೃಷ್ಣಾ ಜನ್ಮಾಷ್ಟಮಿ, ಗೌರಿ ಗಣಪತಿ ಹಬ್ಬ, ಶರನ್ನವರಾತ್ರಿ, ಕಾರ್ತಿಕ ಸೋಮವಾರದÀ ವಿಶೇಷ ಪೂಜೆ, ತುಳಸಿ ಪೂಜೆ, ಸುಬ್ರಹ್ಮಣ್ಯ ಷಷ್ಠಿ, ಸಂಕ್ರಾAತಿ, ಮಹಾಶಿವರಾತ್ರಿಯಲ್ಲಿ ವಿಶೇಷ ಪೂಜೆ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವ್ರತ, ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮುಂತಾದುವುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಪೂಜಾ ಕಾರ್ಯಗಳು ದೇವಸ್ಥಾನಕ್ಕೆ ಮೆರುಗು ನೀಡಿವೆ. ಪ್ರತಿ ವರ್ಷ ಗೌರಿ ಗಣೇಶ ಹಬ್ಬವನ್ನು ಎಲ್ಲರೂ ಸೇರಿ ಸಂಭ್ರಮದಿAದ ಆಚರಿಸುತ್ತಾರೆ. ಈ ಸಂದರ್ಭ ನಡೆಯುವ ಸಂಗೀತ, ಭಜನೆ ಮತ್ತು ವಿಶೇಷ ಕಾಂiÀiðಕ್ರಮಗಳು ಮನಸ್ಸಿಗೆ ಸಂತೋಷ ನೀಡುತ್ತವೆ.
ಪ್ರಕೃತಿಯಲ್ಲಿ ಬದಲಾವಣೆ ಸಹಜ ಪ್ರಕ್ರಿಯೆ. ಹಾಗೆಯೇ ಶ್ರೀ ಸೋಮೇಶ್ವರ ದೇವಾಲಯದಲ್ಲಿಯೂ ಸಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ದೇವಾಲಯದ ಒಳ ಹಾಗೂ ಹೊರ ಆವರಣಕ್ಕೆ ಟೈಲ್ಸ್ ಅಳವಡಿಕೆ, ದೇವರ ಗರ್ಭಗುಡಿಗೆ ಗ್ರಾನೈಟ್ ಜೋಡಣೆ, ಉಗ್ರಾಣ ನಿರ್ಮಾಣ, ದೇವಾಲಯದ ಮೇಲ್ಛಾವಣಿಯ ಸಂಪೂರ್ಣ ದುರಸ್ತಿ ಕಾರ್ಯ, ೨೦೧೦ ರಲ್ಲಿ ದೇವಾಲಯದ ಹೊರ ಆವರಣದಲ್ಲಿರುವ ರುದ್ರಾಕ್ಷಿ ವೃಕ್ಷದ ಬುಡದಲ್ಲಿ ಸುಮಾರು ೧೬ಅಡಿ ಎತ್ತರದ ಶ್ರೀ ರುದ್ರಾಕ್ಷೇಶ್ವರ ಮೂರ್ತಿ ಹಾಗೂ ನಾಗರ ಪ್ರತಿಮೆಗಳ ಪ್ರತಿಷ್ಠಾಪನೆ, ಭಕ್ತಾದಿಗಳಿಗೆ ಶೌಚಾಲಯ ನಿರ್ಮಾಣ, ಮುಂಭಾಗದ ದ್ವಾರದಲ್ಲಿ ನಾಮಫಲಕದ ಕಮಾನು ನಿರ್ಮಾಣ, ಈಶ್ವರ ಪಾರ್ವತಿಯ ಉತ್ಸವ ಮೂರ್ತಿಗಳು ಹೀಗೆ ಹಲವು ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗುವಲ್ಲಿ ಸಮಾಜ ಬಾಂಧವರು, ಭಕ್ತಾದಿಗಳು ಹಾಗೂ ಸಾರ್ವಜನಿಕರ ನೆರವು, ಸಹಕಾರ ಆಗಾಧವಾಗಿದೆ. ಜನಪ್ರತಿನಿಧಿಗಳ ನೆರವಿನೊಂದಿಗೆ ಸರ್ಕಾರದ ಸಹಾಯವನ್ನು ಕೂಡ ಸ್ಮÀರಿಸಬೇಕಾಗಿದೆ. ಜೊತೆಗೆ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರಿಗೆ ಗೃಹವನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ೨೦೧೩ ರಲ್ಲಿ ಆರಂಭವಾದ ಬ್ರಾಹ್ಮಣ ಸಮಾಜದ ಮಹಿಳಾ ಘಟಕ ದೇವಿ ಬಳಗ ಹಾಗೂ ಸಾರ್ವಜನಿಕವಾದ ಮಾತಾ ಬಳಗವು ದೇವಾಲಯದ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕಾರ ನೀಡುತ್ತಾ ಬಂದಿದೆ. ಪ್ರತಿ ಸೋಮವಾರ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಪೂಜಾ ಕಾರ್ಯಗಳಲ್ಲಿ ಭಜನೆ ಮಾಡುವ ಮೂಲಕ ಮಹಿಳೆಯರು ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದಾರೆ.
೨೦೦೬-೦೭ ರಿಂದ ಆಶ್ವಯುಜ ಮಾಸದ ನವರಾತ್ರಿ ಉತ್ಸವವನ್ನು ೧೦ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿದಿನವೂ ಪಾರ್ವತಿ ದೇವಿಯ ಒಂದೊAದು ವಿಶೇಷ ಅಲಂಕಾರದೊAದಿಗೆ ದೇವಿಯನ್ನು ಪೂಜಿಸಲಾಗುತ್ತದೆ. ವಿಜಯ ದಶಮಿಯಂದು ಶ್ರೀ ದೇವಿಯ ಮೂರ್ತಿಯನ್ನು ಉತ್ಸವ ಮೂರ್ತಿಯೊಂದಿಗೆ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿವಿಧ ಸಾಂಕ್ಕೃತಿಕ ಕಲಾ ತಂಡಗಳ ಕಲಾ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಸಾಗಿ ಕೊನೆಯಲ್ಲಿ ಇತಿಹಾಸ ಪ್ರಸಿದ್ಧವಾದ ಸ್ಥಳೀಯ ಆನೆಕೆರೆಯಲ್ಲಿ ವಾದ್ಯಘೋಷದೊಂದಿಗೆ ದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ನಂತರ ವಿಜಯದ ಸಂಕೇತವೂ, ಸ್ನೇಹ ದ್ಯೋತಕವೂ ಆದ ಬನ್ನಿಯನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ಇಂತಹ ವಿಶೇಷವಾದ ನವರಾತ್ರಿ ಹಾಗೂ ಶಿವರಾತ್ರಿ ಹಬ್ಬದ ಆಚರಣೆಯ ಸಂದರ್ಭ ನೂರಾರು ಭಕ್ತಾದಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಹಾಗೆಯೇ ಈ ಎಲ್ಲಾ ಪೂಜಾ ಕಾರ್ಯಗಳು ಹಾಗೂ ವಿಧಿ ವಿಧಾನಗಳನ್ನು ಬ್ರಾಹ್ಮಣ ಸಮಾಜ ಬಾಂಧವರು, ಎಲ್ಲಾ ಸಾರ್ವಜನಿಕ ಭಕ್ತಾದಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಾಲಯವು ತನ್ನದೇ ಆದ ವೈಶಿಷ್ಟö್ಯತೆಯನ್ನು ಹೊಂದಿದ್ದು ಧಾರ್ಮಿಕತೆಯ ಉತ್ತರದಾಯಿತ್ವದಲ್ಲಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿದೆ. ಇಂತಹ ಧಾರ್ಮಿಕ ಆಚರಣೆಯನ್ನು ಹೊಂದಿರುವ ಶ್ರೀ ಸೋಮೇಶ್ವರ ದೇವಾಲಯವು ೭೫ ವರ್ಷಗಳ ಸ್ಮರಣೀಯ ಇತಿಹಾಸವನ್ನು ಹೊಂದಿ ಸಂಭ್ರಮ, ಸಡಗರದಿಂದÀ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
- ಎಲ್. ಎಂ. ಪ್ರೇಮ ಸೋಮವಾರಪೇಟೆ