ಚೆಯ್ಯಂಡಾಣೆ, ಜೂ. ೧೮: ನಿರ್ಮಾಣ ಹಂತದ ಬಾವಿಗೆ ಬಿದ್ದ ಕಾಡಾನೆಯೊಂದು ಮೇಲೇಳಲಾಗದೆ ನರಳಾಡಿ ಉಸಿರು ಚೆಲ್ಲಿದ ದಾರುಣ ಘಟನೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲದಲ್ಲಿ ನಡೆದಿದೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪಾಲಂಗಾಲ ಗ್ರಾಮದ ಬಿದ್ದಪ್ಪ (ಶಂಭು) ಎಂಬವರ ಮನೆ ಮುಂದೆ ಬಾವಿಯನ್ನು ನಿರ್ಮಾಣ ಮಾಡಲಾಗುತಿತ್ತು. ಸೋಮವಾರ ಮಧ್ಯರಾತ್ರಿ ಆಹಾರ ಅರಸಿ ಬಂದ ಕಾಡಾನೆಯನ್ನು ಕಂಡು ನಾಯಿಯೊಂದು ಬೊಗಳಿದೆ. ಈ ಸಂದರ್ಭ ಹಿಮ್ಮುಖವಾಗಿ ಓಡಿ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಸುಮಾರು ೩೨ ಅಡಿ ಆಳದ ಬಾವಿಗೆ ೧೨ ರಿಂಗ್ಗಳನ್ನು ಅಳವಡಿಸಿ ಮುಂದಿನ ಕಾಮಗಾರಿಯೂ ಪ್ರಗತಿಯಲ್ಲಿತ್ತು. ಸೋಮವಾರ ರಾತ್ರಿ ೧೨ ಗಂಟೆಗೆ ಘಟನೆ ಸಂಭವಿಸಿದ್ದು, ಆನೆ ಬಾವಿಗೆ ಬಿದ್ದಿರುವ ವಿಷಯ ಸ್ಥಳೀಯರಿಗೆ ರಾತ್ರಿಯೇ ಗೊತ್ತಾಗಿದೆ. ಕೂಡಲೇ ಮಾಹಿತಿಯನ್ನು ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಧ್ಯರಾತ್ರಿ ಯಾಗಿ ಕಾರ್ಗತ್ತಲು ಆವರಿಸಿದ್ದ ಹಾಗೂ ವಿಪರೀತ ಮಳೆ ಇದ್ದ ಹಿನ್ನೆಲೆ ಪ್ರತಿಕೂಲ ಹವಾಮಾನದಿಂದ ಕಾರ್ಯಾಚರಣೆ ನಡೆಸಲು ಅಸಾಧ್ಯ ಪರಿಸ್ಥಿತಿ ಸೃಷ್ಟಿಯಾಯಿತು. ಮುಂಜಾನೆ ೫.೩೦ರ ತನಕ ಬಾವಿಯೊಳಗೆಯೆ ಮೂಕರೋಧನ ಅನುಭವಿಸಿ ಮೇಲೆಳಲು ಕಾಡಾನೆ ಹರಸಾಹಸ ಪಟ್ಟಿದೆ. ರಿಂಗ್ಗಳ ನಡುವೆ ಸಿಲುಕಿದ್ದ ಹಿನ್ನೆಲೆ ಕಾಡಾನೆ ತೀವ್ರ ಉಸಿರಾಟ ಸಮಸ್ಯೆಯಿಂದ