ವೀರಾಜಪೇಟೆ, ಜೂ. ೧೮: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಹೇಳಿದರು.
ನಗರದಲ್ಲಿರುವ ಸಂತ ಅನ್ನಮ್ಮ ಕಾಲೇಜಿನ ಮೊದಲನೇ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗೆ ರಸ್ತೆ ಸಂಚಾರಿ ಸುರಕ್ಷ ನಿಯಮದ ಬಗ್ಗೆ ಕಾನೂನು ಅರಿವು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಹನವನ್ನು ಚಾಲನೆ ಮಾಡುವ ಸಂದರ್ಭ ಚಾಲಕರು ಮೊಬೈಲ್ ಬಳಸಬಾರದು ಇದರಿಂದ ವಾಹನವನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಅನೇಕ ಅಪಘಾತಗಳು ನಡೆಯುತ್ತಿವೆ. ಅಪಘಾತಗಳಿಂದ ಅನೇಕ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ವಾಹನಗಳ ಚಾಲನೆ ಸಂದರ್ಭ ವಾಹನದ ದಾಖಲೆಗಳು ಕಡ್ಡಾಯವಾಗಿ ಇರಬೇಕು. ನಾಲ್ಕು ಚಕ್ರ ವಾಹನಗಳ ಚಾಲನೆ ಮಾಡುವಾಗ ಬೆಲ್ಟ್ ಅನ್ನು ಬಳಸುವುದು ಮುಖ್ಯ, ಅತೀ ವೇಗದ ಚಾಲನೆ ಮಾಡುವುದರಿಂದ ರಸ್ತೆಯಲ್ಲಿನ ಗುಂಡಿಗಳು, ಎದುರಿನಿಂದ ಬರುವ ವಾಹನ, ಮಂಜು ಕವಿದ ವಾತಾವರಣ ಇತ್ಯಾದಿ ಕಾರಣಗಳಿಂದ ಅಪಘಾತಗಳು ಸಂಭವಿಸಬಹುದು. ಆದ್ದರಿಂದ ಚಾಲಕರು ವೇಗದ ಮಿತಿಯೊಂದಿಗೆ ಚಾಲನೆ ಮಾಡುವುದು ಉತ್ತಮ ಎಂದರು.
ನಗರ ಠಾಣಾಧಿಕಾರಿ ರವಿಂದ್ರ ಅವರು ವಾಹನ ಅಪಘಾತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಾಕ್ಷö್ಯಚಿತ್ರ ತೋರಿಸಿ ಬಳಿಕ ಮಾತನಾಡಿ, ದೇಶದಲ್ಲಿ ದಿನನಿತ್ಯ ೧.೫ ಲಕ್ಷ ಮಂದಿ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಚಾಲಕರು ಎಚ್ಚರದಿಂದ ವಾಹನ ಚಾಲನೆ ಮಾಡುವಂತಾಗಬೇಕು ಎಂದರು. ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ಮದಲೈಮುತ್ತು ಉದ್ಘಾಟನಾ ಭಾಷಣ ಮಾಡಿದರು. ಉಪನ್ಯಾಸಕ ಕೃಷ್ಣರಾಜ್ ವಂದಿಸಿದರು.