ಕುಶಾಲನಗರ, ಜೂ. ೧೮: ಕುಶಾಲನಗರ ಭೂಮಿಕ ಮಹಿಳಾ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಜೆ. ಫಿಲೋಮಿನ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ಎಂ.ಪಿ. ಜಯಲಕ್ಷಿö್ಮ, ಕಾರ್ಯದರ್ಶಿಯಾಗಿ ಹೆಚ್.ಜಿ. ಪದ್ಮಾವತಿ, ಸಹ ಕಾರ್ಯದರ್ಶಿ ಯಾಗಿ ಬಿ. ಪಾರ್ವತಿ, ಖಜಾಂಚಿಯಾಗಿ ಜಯಶ್ರೀ ಮುರುಗೇಶ್ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಪದ್ಮ ಕೃಷ್ಣೇಗೌಡ, ಗೀತಾ ಬಸಪ್ಪ, ಭಾಗ್ಯ, ಉಷಾ, ಜರೀನಾ, ಶಾಂತಕುಮಾರಿ, ಲಲಿತ ಜಯಪ್ರಕಾಶ್, ಸರಳ ರಾಮಣ್ಣ ಹಾಗೂ ಗೌರವಾಧ್ಯಕ್ಷ ರಾಗಿ ಪಿ. ಪದ್ಮಾವತಿ ಪರಮೇಶ್, ಗೌರವ ಸಲಹೆಗಾರರಾಗಿ ವನಿತಾ ಚಂದ್ರಮೋಹನ್ ಅವರುಗಳನ್ನು ನೇಮಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಕುಶಾಲನಗರ ಸೇರಿದಂತೆ ಸುತ್ತ ಮುತ್ತ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಆಗುವ ದೌರ್ಜನ್ಯಗಳನ್ನು ಪತ್ತೆ ಹಚ್ಚಿ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಕಾರ್ಯ ನಿರ್ವಹಿಸಿದೆ ಎಂದು ತಿಳಿಸಿರುವ ವೇದಿಕೆಯ ಅಧ್ಯಕ್ಷೆ ಜೆ. ಫಿಲೋಮಿನಾ ಮುಂದಿನ ದಿನಗಳಲ್ಲಿ ಮಹಿಳೆಯರ ಅಭ್ಯುದಯಕ್ಕಾಗಿ ಸಂಸ್ಥೆ ನಿರಂತರವಾಗಿ ಕಾರ್ಯ ತತ್ಪರವಾಗಲಿದೆ ಎಂದರು.