ಗೋಣಿಕೊಪ್ಪಲು, ಜೂ. ೧೮: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕೊಡಗು ಘಟಕ ವತಿಯಿಂದ ಹಾತೂರು ಗ್ರಾಮದ ಕೊಳತ್ತೋಡು ಅಯ್ಯಪ್ಪ ದೇವರ ಕಾಡಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುರುವಂಡ ಉತ್ತಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುರುವಂಡ ಕುಟುಂಬದ ಮುಖ್ಯಸ್ಥ ಮುತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಯ್ಯಪ್ಪ ದೇವರ ಕಾಡಿನಲ್ಲಿ ನೂರಾರು ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ೩೦೦ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಸೀನಿಯರ್ ಚೇಂಬರ್ನ ಅಧ್ಯಕ್ಷ ಮುರುವಂಡ ಉತ್ತಪ್ಪ ಮಾತನಾಡಿ, ನಿರಂತರವಾಗಿ ಸಸಿ ನೆಡುವ ಹಾಗೂ ನೆಟ್ಟಿರುವ ಸಸಿಗಳನ್ನು ಕಾಪಾಡುವ ಕೆಲಸ ಮಾಡಬೇಕು. ಇದರಿಂದ ಪರಿಸರ ಉಳಿವಿಗೆ ಸಹಕರಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ನ ಕಾರ್ಯದರ್ಶಿ ಅಲ್ಲುಮಾಡ ಸುನೀಲ್, ಖಜಾಂಚಿ ಬಿ.ಎನ್.ಪ್ರಕಾಶ್, ಸ್ಥಾಪಕ ಅಧ್ಯಕ್ಷ ವಕೀಲ ಕೆ.ಬಿ. ಸಂಜೀವ್, ರಾಷ್ಟಿçÃಯ ಪದಾಧಿಕಾರಿಗಳಾದ ಶರತ್ ಕುಮಾರ್ ಮ್ಯಾಥ್ಯೂ, ನಿಕಟಪೂರ್ವ ಅಧ್ಯಕ್ಷ ಎಸ್.ಎಸ್. ತಿಮ್ಮಯ್ಯ, ಸಚಿನ್ ಬೆಳ್ಯಪ್ಪ, ಮನ್ನಕ್ಕಮನೆ ಬಾಲಕೃಷ್ಣ, ಸದಸ್ಯರುಗಳಾದ ನಾಗೇಶ್, ಟಿ.ಜೆ. ಆಂಟೋನಿ, ಡಾ. ಆಶಿಕ್ ಚಂಗಪ್ಪ, ಆಂಟೋನಿ ಜೋಸೆಫ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.