ಪೊನ್ನಂಪೇಟೆ, ಜೂ. ೧೮: ಗೋಣಿಕೊಪ್ಪಲು - ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೋಕ್ಲು ಗ್ರಾಮ ಪಂಚಾಯಿತಿ ಸಮೀಪ ಸ್ಕೂಟಿಗೆ ಬೊಲೆರೋ ಪಿಕ್ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಓಡಿಸುತ್ತಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ನಡೆದಿದೆ. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿ ಎಂಬವರು
ಅಪಘಾತ : ಮಹಿಳೆ ದುರ್ಮರಣ
(ಮೊದಲ ಪುಟದಿಂದ) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ರಾತ್ರಿ ೯ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಕೂಟರ್ ಹಿಂಬದಿ ಮತ್ತೋರ್ವ ಮಹಿಳೆ ಇದ್ದು ಆಕೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಡಿಕ್ಕಿಪಡಿಸಿದ ಬೊಲೆರೋ ಜೀಪ್ (ಏಂ ಕೆಎ೦೩ ಎಎ ೧೩೯೪) ಚಾಲಕನನ್ನು ಬಂಧಿಸಲಾಗಿದ್ದು, ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.