ಮಡಿಕೇರಿ, ಜೂ. ೧೭: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಜೂ.೨೩ ರಂದು ಪ್ರಕೃತಿ-ಪರಿಸರ ವಿಷಯದಡಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.
ಪತ್ರಿಕಾಗೋಷಿಯಲ್ಲಿ ಮಾತನಾಡಿದ ಪರಿಷದ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಬ್ಬಿರ ಸರಸ್ವತಿ ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕವಿಗೋಷ್ಠಿ ಸ್ಪರ್ಧೆಯನ್ನೊಳಗೊಂಡಿದ್ದು, ತೀರ್ಪುಗಾರರಾಗಿ ಪರಿಷದ್ನ ಮಾಜಿ ಅಧ್ಯಕ್ಷ, ಸಾಹಿತಿ ಕಿಗ್ಗಾಲು ಗಿರೀಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಷ್ಟçದಲ್ಲಿ ಹಲವಾರು ಭಾಷೆಗಳಿದ್ದು, ಪ್ರತಿಯೊಂದು ಭಾಷೆಗೂ ಹಿನ್ನೆಲೆಗಳಿವೆ. ಪ್ರತಿ ಭಾಷೆಯಲ್ಲಿಯೂ ಸಾಹಿತ್ಯಗಳಿವೆ, ಸಾಹಿತ್ಯದಲ್ಲಿ ಸಂಘಟನಾ ಶಕ್ತಿಯಿದ್ದು, ಸಮಾಜವನ್ನು ಒಂದುಗೂಡಿಸುವ ಸಾಮರ್ಥ್ಯವಿದೆ. ಸಾಹಿತ್ಯಕವಾಗಿ ಸಮಾಜವನ್ನು ಜಾಗ್ರತಗೊಳಿಸುವದು, ಜನರ ಜವಾಬ್ದಾರಿಯನ್ನು ಜಾಗೃತಿಗೊಳಿಸುವದು ಪರಿಷದ್ನ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅತ್ಯಗತ್ಯವೆಂದು ಹೇಳಿದರು.
ಗೌರವ ಅಧ್ಯಕ್ಷೆ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ; ಸಾಹಿತ್ಯ ಸಹಿತ, ಸ್ವಹಿತವಾಗಿರಬೇಕು. ಪ್ರಸ್ತುತ ಮೊಬೈಲ್, ಇಂಟರ್ನೆಟ್ನಿAದಾಗಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಮಕ್ಕಳ ಕವನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಭಾರತ ಸಾಹಿತ್ಯದ ತವರುಮನೆ, ಕನ್ನಡ ಅತ್ಯಂತ ಸಂಪತ್ಭರಿತ ಭಾಷೆಯಾಗಿದ್ದು, ಇದೀಗ ಯಾರಲ್ಲೂ ಆಸಕ್ತಿ ಕಂಡುಬರುತ್ತಿಲ್ಲ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದಾಗಿ ಹೇಳಿದರು.
ಮಾಧ್ಯಮ ಪ್ರಮುಖ್ ವಿನೋದ್ ಮೂಡಗದ್ದೆ ಮಾತನಾಡಿ; ಕವನಗಳು ೧೬ರಿಂದ ೨೦ಸಾಲುಗಳ ಮಿತಿಯಲ್ಲಿರಬೇಕು. ಕೃತಿ ಚೌರ್ಯ ಮಾಡುವಂತಿಲ್ಲ, ಜಾತಿ, ಧರ್ಮ, ರಾಜಕೀಯ ವಿಷಯಗಳಿಗೆ ಒತ್ತು ನೀಡುವಂತಿಲ್ಲ. ಮೊದಲು ನೋಂದಾಯಿತ ೩೦ ಕವನಗಳಿಗೆ ಕಾರ್ಯಕ್ರಮದಲ್ಲಿ ವಾಚನ ಮಾಡಲು ಅವಕಾಶ ಕಲ್ಪಿಸಲಾಗುವುದು. ಆಸಕ್ತ ಕವಿಗಳು ಜೂ.೨೨ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣಿಗಾಗಿ ಮೊ.ಸಂ ೯೪೮೩೬೪೫೬೬೪, ೯೭೪೩೩೫೩೫೯೭ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಹ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ; ಕವಿಗೋಷ್ಠಿಯಲ್ಲಿ ಆಯ್ಕೆಯಾದ ಮೊದಲ ಮೂರು ಅತ್ಯುತ್ತಮ ಕವನಗಳಿಗೆ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ಮತ್ತು ಭಾಗವಹಿಸಿದ ಎಲ್ಲಾ ಕವಿ, ಕವಯತ್ರಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದೆಂದು ಹೇಳಿದರು.
ಪರಿಷದ್ ಅಧ್ಯಕ್ಷ ಸಿ.ಎಸ್.ಸುರೇಶ್ ಮಾತನಾಡಿ; ಅಖಿಲ ಭಾರತೀಯ ಸಾಹಿತ್ಯ ಪರಿಷದ್ ೧೯೬೬ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದ್ದು, ರಾಜ್ಯವಾರು ಎಲ್ಲಾ ಭಾಷೆಗಳನ್ನು ಒಳಗೊಂಡು ಸಾಹಿತ್ಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲೂ ಆನ್ಲೈನ್ ಮೂಲಕ ಸಾಹಿತ್ಯಕ್ಕೆ ಸಂಬAಧಪಟ್ಟ ಕಾರ್ಯಕ್ರಮಗಳನ್ನು ನಡೆಸಿದೆ. ಇದೀಗ ನೂತನ ಪದಾಧಿಕಾರಿಗಳ ನೇಮಕಾತಿಯಾದ ಬಳಿಕ ಇದು ಪ್ರಥಮ ಕಾರ್ಯಕ್ರಮವಾಗಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ ಉಪಸ್ಥಿತರಿದ್ದರು.