ಪೊನ್ನಂಪೇಟೆ, ಜೂ. ೧೭: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟ್ ಮಾರಾಟ ಮಾಡುತ್ತಿದ್ದ ಗೋಣಿಕೊಪ್ಪಲು ಪಟೇಲ್ ನಗರದ ನಿವಾಸಿ ಟಿ. ಎ. ಶಶಿಧರ ಎಂಬವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

ತಾ. ೧೭ ರಂದು ಬೆಳಗ್ಗೆ ೯ ಗಂಟೆ ಸಮಯದಲ್ಲಿ ಇಲ್ಲಿನ ಕಾನೂರು ಬಾಳೆಲೆ ರಸ್ತೆ ಬಳಿ ಲಾಟರಿ ಟಿಕೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿ ಇದ್ದ ಲಾಟರಿ ಟಿಕೇಟ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಠಾಣಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಉಪನಿರೀಕ್ಷಕ ಹೆಚ್.ಸಿ.ಸುಬ್ರಮಣಿ, ಸಿಬ್ಬಂದಿ ಎಸ್.ಬಿ.ಮಹದೇಶ್ವರ ಸ್ವಾಮಿ ಪಾಲ್ಗೊಂಡಿದ್ದರು.