ಭಾಗಮಂಡಲ, ಜೂ. ೧೭: ಮೇಲ್ ಸೇತುವೆ ಕಾಮಗಾರಿಯು, ಕೊಡಗಿನಲ್ಲಿ ದೊಡ್ಡ ಮಟ್ಟದ ಯೋಜನೆ ಆಗಿದೆ. ಇದರಿಂದ ಸ್ಥಳೀಯ ಜನರಿಗೆ ಮಾತ್ರವಲ್ಲದೆ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಭಾಗಮಂಡಲದಲ್ಲಿ ಸೋಮವಾರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಇದರಲ್ಲಿ ಕೆಲವು ತೊಡಕುಗಳಿವೆ. ಅಲ್ಪ ಪ್ರಮಾಣದ ಕಾಮಗಾರಿ ಬಾಕಿ ಇದೆ. ಮಹತ್ವಕಾಂಕ್ಷೆಯ ಯೋಜನೆಯದ ಮೇಲ್ಸೇತುವೆ ಕಾಮಗಾರಿಯ ಅಲ್ಪ ಸ್ವಲ್ಪ ತೊಡಕುಗಳನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಮೇಲ್ ಸೇತುವೆ ಕೆಲವೆಡೆ ನೀರು ಬೀಳುತ್ತಿದ್ದು ಅದನ್ನು ಸರಿಪಡಿಸಲಾಗುವುದು. ಅಪಘಾತವನ್ನು ತಪ್ಪಿಸುವ ಉದ್ದೇಶದಿಂದ ಮೂರು ಭಾಗಗಳಲ್ಲಿ ಹಂಪ್ಗಳನ್ನು ನಿರ್ಮಿಸಲಾಗುವುದು ಎಂದರು .
ಮೇಲ್ಸೇತುವೆ ಕಾಮಗಾರಿ ಯಿಂದ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ. ತಲಕಾವೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದನ್ನು ನೀಗಿಸಲಾಗುವುದು. ಮೇಲ್ಸೇತುವೆಯು ಯೋಜನಾ ಬದ್ಧವಾಗಿ ಮೂಡಿಬರಲು ಜಿಲ್ಲಾಧಿಕಾರಿಗಳು ಸಂಬAಧಿಸಿದ ಎಂಜಿನಿಯರ್ಗಳು ಗುತ್ತಿಗೆದಾರರು ಶ್ರಮಿಸಿದ್ದಾರೆ. ಎಲ್ಲರ ಕೈ ಜೋಡಿಸುವಿಕೆಯಿಂದ ಉತ್ತಮ ಕಾರ್ಯ ನಡೆದಿದೆ. ಮಳೆಗಾಲ ಮುಗಿದ ಬಳಿಕ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಈ ಸಂದರ್ಭ ಪ್ರಮುಖರಾದ ತೆನ್ನಿರ ಮೈನಾ, ಸುನಿಲ್ ಪತ್ರಾವೋ, ಹ್ಯಾರಿಸ್, ಕುದುಪಜೆ ಪ್ರಕಾಶ್, ದೇವಂಗೋಡಿ ಹರ್ಷ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
೧೦೦ರ ಗಡಿ ದಾಟಿಸಿದ್ದು ಯಾರು?
ಪೆಟ್ರೋಲ್ ಬೆಲೆಯನ್ನು ಲೀಟರಿಗೆ ೧೦೦ರ ಗಡಿ ದಾಟಿಸಿದ ಶತಕ ವೀರರು ಯಾರು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
ಲೀಟರಿಗೆ ೧೦೦ ಇದ್ದ ಪೆಟ್ರೋಲ್ ಬೆಲೆಯನ್ನು ೧೦೩ ಕ್ಕೆ ರಾಜ್ಯ ಸರ್ಕಾರ ಏರಿಸಿದೆ. ಇದಕ್ಕೆ ಪ್ರತಿಭಟನೆ ನಡೆಸುವ ಬಿಜೆಪಿ ಲೀಟರಿಗೆ ೬೫ ಇದ್ದ ಪೆಟ್ರೋಲ್ ಬೆಲೆ ೧೦೦ ಕ್ಕೆ ಬಿಜೆಪಿ ಸರ್ಕಾರ ಏರಿಸಿದಾಗ ಯಾಕೆ ಪ್ರತಿಭಟಿಸಲಿಲ್ಲ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು.
ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟç, ಮಧ್ಯಪ್ರದೇಶ, ಎನ್.ಡಿ.ಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕರ್ನಾಟಕ ರಾಜ್ಯಕ್ಕಿಂತ ಹೆಚ್ಚು ಅಂದರೆ ೧೦೭ ರೂ ಇದೆ. ಇದನ್ನು ಅವರು ಪ್ರಶ್ನೆ ಮಾಡಲು ಸಾಧ್ಯವೇ ಎಂದು ಕುಟುಕಿದರು.
ಬಿಜೆಪಿ ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ್ದರು. ಪೆಟ್ರೋಲ್ ವಿಚಾರದಲ್ಲಿ ಪ್ರತಿಭಟನೆ ಮಾಡಿದ್ದರು, ಡಾಲರ್ ವಿಚಾರದಲ್ಲಿ ಪ್ರತಿಭಟನೆ ಮಾಡಿದರು. ನಂತರ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಲ್ಲಿ ಯಾಕೆ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಹೇಳಿದ ಪೊನ್ನಣ್ಣನವರು ಬಿಜೆಪಿಗರು ಮೊದಲು ದ್ವಂದ್ವ ನಿಲುವನ್ನು ಬಿಡಲಿ ಎಂದು ಸಲಹೆ ನೀಡಿದರು.