ಶನಿವಾರಸಂತೆ, ಜೂ. ೧೭ : ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ಜಮಾ-ಖರ್ಚು ಹಾಗೂ ಸರ್ಕಾರಿ ಪತ್ರಗಳ ಮಂಡನೆ ನಡೆದು, ಸ್ಥಾಯಿ ಸಮಿತಿ, ಉತ್ಪಾದನಾ ಸಮಿತಿ, ಹಣಕಾಸು ಸಮಿತಿ ಹಾಗೂ ನ್ಯಾಯ ಸಮಿತಿ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಯಿತು. ವಸತಿ ಯೋಜನೆ, ಚರಂಡಿ ಶುಚಿತ್ವ, ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬAಧಿಸಿದ ಮತ್ತಿತರ ಸಾರ್ವಜನಿಕ ಅರ್ಜಿಗಳನ್ನು ಪರಿಶೀಲಿಸಲಾಯಿತು. ಸೊಳ್ಳೆಗಳ ನಿಯಂತ್ರಣ, ಬೀದಿ ನಾಯಿ ಹಾವಳಿ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು.

ಪಂಚಾಯಿತಿ ಉಪಾಧ್ಯಕ್ಷೆ ಪಿ.ಹೆಚ್. ಗೋಪಿಕಾ, ಸದಸ್ಯರಾದ ಡಿ.ಪಿ. ಬೋಜಪ್ಪ, ಎಂ.ಡಿ. ದೇವರಾಜ್, ಸಿ.ಜೆ. ಗಿರೀಶ್, ಕೆ.ಎಲ್. ಪೂರ್ಣಿಮಾ, ಹೆಚ್.ಆರ್. ಭವಾನಿ, ಎ.ಸಿ. ನಾಗರತ್ನ, ಬಿ.ಎಸ್. ಮನು ಮಹಾಂತೇಶ್, ಎಸ್.ಸಿ. ನಿತಿನ್, ಕಾಂತರಾಜ್, ಕೆ.ಎಸ್. ಜಾನಕಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ, ಬಿಲ್ ಸಂಗ್ರಾಹಕ ಸಿ.ಆರ್. ರವಿ ಹಾಗೂ ಸಿಬ್ಬಂದಿ ಹಾಜರಿದ್ದರು.