ಸಿದ್ದಾಪುರ, ಜೂ. ೧೭: ಕಾಫಿ ತೋಟಗಳ ಭೂ ಪರಿವರ್ತನೆ ವಿರುದ್ಧ ಸಿದ್ದಾಪುರದಲ್ಲಿ ಸಿಎನ್ಸಿ ವತಿಯಿಂದ ಮಾನವ ಸರಪಳಿ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಸಿದ್ದಾಪುರದಲ್ಲಿ ಸುಮಾರು ೨೪೦೦ ಎಕರೆ ಕಾಫಿ ತೋಟವನ್ನು ಭೂ ಪರಿವರ್ತನೆ ಮಾಡುವುದಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿರೋಧ ವ್ಯಕ್ತಪಡಿಸುತ್ತದೆ ಎಂದರು. ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯದ ಜಿಲ್ಲೆಯಾಗಿದ್ದು, ಭೂ ಪರಿವರ್ತನೆ ಯಿಂದ ಮರಗಳ ನಾಶವಾಗುತ್ತವೆ. ಬೃಹತ್ ಭೂ ಪರಿವರ್ತನೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕೆಂದು ನಾಚಪ್ಪ ಒತ್ತಾಯಿಸಿದರು.
ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಆಸ್ತಿಯಾದ ಕೊಡವ ಲ್ಯಾಂಡ್ ಅನ್ನು ಉಳಿಸಿಕೊಳ್ಳಲು ಎಲ್ಲಾ ಕೊಡವರು ಜಾಗೃತರಾಗಬೇಕೆಂದು ಕರೆ ನೀಡಿದರು. ಈ ಸಂದರ್ಭ ಕಂಡ್ರತAಡ ಸುಬ್ಬಯ್ಯ, ಕುಕ್ಕೇರ ಕೇಶು ಉತ್ತಪ್ಪ, ಅಲ್ಲಾರಂಡ ಅಭೀನ್, ಮುಂಡಚಾಡಿರ ಫ್ಯಾನ್ಸಿ, ಪಟ್ಟಮಾಡ ಲಲಿತಾ, ಇಟ್ಟಿರ ಸಬಿತಾ ಭೀಮಯ್ಯ, ಚೋಳವಂಡ ಜ್ಯೋತಿ, ಬುಟ್ಟಿಯಂಡ ಪ್ರಿಯ, ಚೇಂದAಡ ಚುಮ್ಮಿ ಪೂವಯ್ಯ, ಚೇರಂಡ ಸುಭಾಷ್, ಸುನಿಲ್, ಮೂಕೋಂಡ ದಿಲೀಪ್, ಮಂಡೆಪAಡ ಕುಟ್ಟಣ್ಣ, ದೇವಣಿರ ಸುಜಯ್, ಕೆ.ಬಿ. ಹೇಮಚಂದ್ರ, ಸಿ.ಟಿ. ಪೊನ್ನಪ್ಪ, ಇನ್ನಿತರರು ಹಾಜರಿದ್ದರು.